ಸುದ್ದಿ ಓದದೇ… ಈ ಕ್ರಿಕೆಟಿಗ ಯಾರೆಂದು ಗುರುತಿಸ್ತೀರಾ?

0
735

ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಆಟಗಾರರು ವೆಸ್ಟ್‌ ಇಂಡೀಸ್ ವಿರುದ್ಧ ಸರಣಿ ಆಡಲು ಈಗಾಗಲೇ ಕೆರಿಬಿಯನ್‌ ನಾಡಿಗೆ ತೆರಳಿದ್ದಾರೆ.

ಆದರೆ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿರುವ ಭಾರತ ನಿಗದಿತ ಓವರ್‌ಗಳ ತಂಡಗಳ ನಾಯಕ ಎಂ.ಎಸ್‌. ಧೋನಿ ಮಾತ್ರ ಕುಟುಂಬ ಮತ್ತು ತಮ್ಮ ಮುದ್ದುಮಗಳೊಂದಿಗೆ ಸಖತ್‌ ಎಂಜಾಯ್‌ ಮಾಡ್ತಿದಾರೆ.

ಬಹುದಿನಗಳ ಈ ಬಿಡುವಿನ ಸಮಯವನ್ನು ಧೋನಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆಯುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ತಮ್ಮ ಮಗಳು ಜೀವಾ ಜೊತೆ ಧೋನಿ ಹೆಚ್ಚಾಗಿ ಸಮಯ ಕಳೀತಿದಾರೆ. ಅದರಂತೆ ಧೋನಿ ವಿಚಿತ್ರ ವೇಷ ಧರಿಸಿ ತಮ್ಮ ಮಗಳೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ತಮ್ಮ ಮಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಧೋನಿ ಹಾಕಿಕೊಂಡಿರುವ ಫೋಟೋದಲ್ಲಿ ಇವರೇ ಎಂಎಸ್‌ಡಿ ಎಂದು ಕಂಡು ಹಿಡಿಯಲು ಸ್ವಲ್ಪ ಕಷ್ಟವಾಗುತ್ತದೆ. ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡಿರುವ ಧೋನಿ ತಮ್ಮ ಮಗಳನ್ನು ತೊಡೆಯ ಮೇಲಿಟ್ಟುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Source: eenaduindia