ಸೆಪ್ಟೆಂಬರ್20 ರವರೆಗೆ ಪ್ರತಿದಿನ12000 ಕ್ಯೂಸೆಕ್ ನೀರು ಬಿಡಲು ರಾಜ್ಯಕ್ಕೆ ಸುಪ್ರೀಂ ಆದೇಶ. 

0
673

ನವದೆಹಲಿ,ಸೆ.12- ಕಾವೇರಿ ಜಲಾನಯನ ತೀರ ಪ್ರದೇಶದಿಂದ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಬದಲು 12 ಸಾವಿರ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ಕರ್ನಾಟಕಕ್ಕೆ ಮತ್ತೆ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆಯಾಗಿದೆ.

ಕಳೆದ ಶನಿವಾರ ರಾತ್ರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ಗೆ ಹಿಂದೆ ನೀಡಿದ್ದ ಆದೇಶವನ್ನು ಮರು ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಇಂದು ಇದೇ ನ್ಯಾಯ ಪೀಠ 15ಸಾವಿರ ಕ್ಯೂಸೆಕ್ ಬದಲಿಗೆ ಇದೇ ತಿಂಗಳ 20ರವರೆಗೆ 12ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸೆ.20ರವರೆಗೆ ಪ್ರತಿದಿನ 12 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿ.4 ದಿನ ಹೆಚ್ಚು ನೀರು ಬಿಡಲು ಸುಪ್ರೀಂ ಆದೇಶನೀಡಿದೆ. ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ  ನೀರು ಬಿಡುಗಡೆ ಸ್ಥಗಿತಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್‌ 3000 ಕ್ಯುಸೆಕ್ ನೀರು ಕಡಿಮೆ ಬಿಡುಗಡೆಗೆ ಆದೇಶ ನೀಡಿದೆ.

ಕಳೆದ ಸೋಮವಾರ ನ್ಯಾಯಮೂರ್ತಿಗಳಾದ ದೀಪಕ್‍ಮಿಶ್ರ ಹಾಗೂ ಲಲಿತ್ ಉದಯ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೆ.5ರಿಂದ ಅನ್ವಯವಾಗುವಂತೆ ಪ್ರತಿ ದಿನ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿತ್ತು.

ಇಂದು ಸುಪ್ರೀಂಕೋರ್ಟ್ ರಜಾ ದಿನವಾದರೂ ಸರ್ಕಾರದ ಕೋರಿಕೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಯಿತು. ಇದೀಗ ನ್ಯಾಯಾಲಯ ನೀಡಿರುವ ತೀರ್ಪು ಅಗಿರುವ ಗಾಯಕ್ಕೆ ಬರೆಹಾಕಿದಂತಾಗಿದೆ.

ಕರ್ನಾಟಕಕ್ಕೆ ಸಿಗದ ಕಾವೇರಿ ಪರಿಹಾರ :                        

ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ಮಾರ್ಪಾಡು ಅರ್ಜಿಯ ವೇಳೆ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿರಿಯ ವಕೀಲ ನಾರಿಮನ್ ಕೂಡ ರಾಜ್ಯದ ಜಲಾಶಯ ಸ್ಥಿತಿ-ಗತಿ ಕುರಿತು ಅಂಕಿ-ಅಂಶಗಳ ಕುರಿತು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಆದರೆ, ಕನ್ನಡ ಪರ ಸಂಘಟನೆಗಳು ಮತ್ತು ರೈತ ಮುಖಂಡರು ಕಳೆದ ಒಂದು ವಾರದಿಂದ ನಡೆಸಿದ ಪ್ರತಿಭಟನೆ, ಕರ್ನಾಟಕ ಬಂದ್, ನ್ಯಾಯಾಲಯದ ಆದೇಶ ವಿರುದ್ಧ ಧಿಕ್ಕಾರದ ಘೋಷಣೆಗಳಿಗೆ ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿತು.