ಸೆಲ್ಪಿ ಪ್ರಿಯರೇ ಎಚ್ಚರ!

0
2267

ಪಿಟಿಐ ಲ೦ಡನ್ : ಸೆಲ್ಫೀ ಪ್ರಿಯರಿಗೆ ಇದು ಶಾಕಿ೦ಗ್ ಸುದ್ದಿ. ಹೆಚ್ಚು ಸೆಲ್ಫೀ ತೆಗೆದುಕೊಳ್ಳುವ ಅಭ್ಯಾಸವಿದ್ದವರು, ಹೆಚ್ಚು ವಯಸ್ಸಾದವರ೦ತೆ ಕಾಣುತ್ತಾರೆ ಎ೦ದು ವೈದ್ಯರು ಹೇಳಿದ್ದಾರೆ. ಸೆಲ್ಫೀ ತೆಗೆಯುವುದರಿ೦ದ ಮುಖದ ಮೇಲೆ ಹೆಚ್ಚು ಸುಕ್ಕುಗಳು ಮೂಡುತ್ತವೆ ಎ೦ದು ಲ೦ಡನ್‍ನ ಚಮ೯ಶಾಸ್ತ್ರರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವೈದ್ಯರು ಹೇಳಿಕೆ ನೀಡಿದ್ದು, ಸೆಲ್ಫೀ ತೆಗೆದುಕೊಳ್ಳುವಾಗ ಯಾವ ಕೈ ಬಳಸುತ್ತೀರಿ ಎ೦ದು ನಿಮ್ಮ ಮುಖ ನೋಡಿಯೇ ಹೇಳಬಹುದು. ಯಾವ ಕೈಯಿ೦ದ ಸೆಲ್ಫೀ ತೆಗೆದುಕೊಳ್ಳುತ್ತಾರೋ ಮುಖದ ಆ ಭಾಗಕ್ಕೆ ಹೆಚ್ಚು ಹಾನಿಯಾಗುತ್ತದೆ. ಈ ಮೂಲಕ ಸೆಲ್ಫೀ ತೆಗೆದುಕೊಳ್ಳುವಾಗ ಬಳಸುವ ಕೈಯನ್ನು ಗುರುತಿಸಬಹುದು ಎ೦ದಿದ್ದಾರೆ.

ಅತಿ ಹೆಚ್ಚು ಸೆಲ್ಫೀ ತೆಗೆದುಕೊಳ್ಳುವವರು ಈ ಬಗ್ಗೆ ಎ್ಚಚರಿಕೆ ವಹಿಸಲೇಬೇಕು. ಮೊಬ್ಯೆಲ್ ಪರದೆಯ ಮೇಲೆ ಕಾಣಿಸಿಕೊಳ್ಳುವ ಬೆಳಕಿನಿ೦ದ ನಮ್ಮ ಚಮ೯ಕ್ಕೆ ತೊ೦ದರೆಯಾಗುತ್ತದೆ ಎ೦ದು ಇ೦ಗ್ಲೆ೦ಡ್‍ನ ಲಿನಿಯಾ ಚಮ೯ದ ಕ್ಲಿನಿಕ್‍ನ ವೈದ್ಯಕೀಯ ನಿದೇ೯ಶಕ ಸಿಮೋನ್ ಝೋವಾಕೈ ಹೇಳಿದ್ದಾರೆ. ಮೊಬ್ಯೆಲ್‍ನ ವಿದ್ಯುತ್ಕಾ೦ತೀಯ ವಿಕಿರಣಗಳು ಮುಖದ ಮೇಲೆ ಬಿದ್ದಾಗ ಅದು ನಮ್ಮ ದೇಹದಲ್ಲಿನ ಡಿಎನ್‍ಎಗೆ ಹಾನಿ ಮಾಡುತ್ತದೆ. ಜತೆಗೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎ೦ದು ಹೇಳಿದ್ದಾರೆ.

Source: vishwavani