ರಾಕೇಶ್ ಸಮಾಧಿ ಎದುರು ಸೆಲ್ಫಿ!

0
2525

ಮೈಸೂರು: ಅಭಿಮಾನ ಕೆಲವರಿಗೆ ಯಾವ ಮಟ್ಟಕ್ಕಿರುತ್ತೆದೆ ಎಂಬುದಕ್ಕೆ ಇದೊಂದು ಸಾಕ್ಷಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಅಂತ್ಯ ಕ್ರಿಯೆ ಸಕಲ ವಿಧಿ ವಿಧಾನಗಳ ಮೂಲಕ ಸೋಮವಾರ ನಡೆದಿದೆ. ಆದರೆ ರಾಕೇಶ್ ಸಮಾಧಿ ನೋಡಲು ಇನ್ನೂ ಅಭಿಮಾನಿಗಳು ಹರಿದು ಬರುತ್ತಿದ್ದಾರೆ.

ಮೈಸೂರಿನ ಟಿ.ಕಾಟೂರು ಗ್ರಾಮದಲ್ಲಿರುವ ಸಿದ್ದರಾಮಯ್ಯನವರ ಫಾರ್ಮ್ ಹೌಸ್ ನಲ್ಲಿ ರಾಕೇಶ್ ಅಂತ್ಯಕ್ರಿಯೆ ನೆರವೇರಿದೆ. ಆದರೆ ಸೋಮವಾರ ಲಕ್ಷಾಂತರ ಜನ ರಾಕೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರೂ ಇನ್ನೂ ಸಾಕಷ್ಟು ಜನರಿಗೆ ಅದರ ಭಾಗ್ಯ ದೊರೆತಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಇಂದೂ ಕೂಕೂಡ ಜನ ಕಾಟೂರಿಗೆ ಹರಿದು ಬರುತ್ತಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕು ವ್ಯಾಪ್ತಿಯ ಈ ಕಾಟೂರಿನ ಫಾರ್ಮ್ ಹೌಸ್ ಗೆ ಬರುವ ಅಭಿಮಾನಿಗಳು ರಾಕೇಶ್ ಸಮಾಧಿಗೆ ನಮಸ್ಕರಿಸಿ, ದುಖಿಸುತ್ತಿದ್ದಾರೆ.

WhatsApp Image 2016-08-02 at 10.40.57 AM WhatsApp Image 2016-08-02 at 10.41.02 AM WhatsApp Image 2016-08-02 at 10.41.08 AM

ಇನ್ನು ಕೆಲವರು ರಾಕೇಶ್ ಅವರನ್ನು ಹತ್ತಿರದಿಂದ ಬಲ್ಲವರು ರಾಕೇಶ್ ಸಮಾಧಿ ಎದುರು ದುಖಃದಿಂದಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ!

ವಿವಿಧೆಡೆಯಿಂದ ಮಹಿಳೆಯರು, ವಯೋವೃದ್ಧರು ಕೂಡ ಟಿ. ಕಾಟೂರಿಗೆ ಆಗಮಿಸುತ್ತಿದ್ದು, ರಾಕೇಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.