ಸೆ.16 ರಂದು ವಿವಿಧ ಸಂಘಟನೆಗಳು ತಮಿಳುನಾಡು ಬಂದ್ಗೆ ಕರೆ, ಕರ್ನಾಟಕ ಗಡಿಯಲ್ಲಿ ನಾಳೆಯಿಂದಲೇ ಪೊಲೀಸ್ ಕಟ್ಟೆಚ್ಚರ

0
543

ಕಾವೇರಿ ನೀರಿಗಾಗಿ ಇಡೀ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಆದರೆ ಸೆ.16 ರಂದು ವಿವಿಧ ಸಂಘಟನೆಗಳು ತಮಿಳುನಾಡು ಬಂದ್ಗೆ ಕರೆ ನೀಡಿವೆ. ಪರಿಣಾಮ ಬೆಂಗಳೂರು ಸೇರಿ ಗಡಿ ಭಾಗಗಳಾದ ಆನೇಕಲ್, ಸರ್ಜಾಪುರ, ಮೈಸೂರು, ಚಾಮರಾಜನಗರ ಗಡಿಯಲ್ಲಿ ನಾಳೆಯಿಂದಲೇ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಡಿಸಿಪಿಗಳು ಕರ್ತವ್ಯಕ್ಕೆ ಹಾಜರಾಗಿ ಭದ್ರತಾ ಹೊಣೆ ಹೊರುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್.ಮೆಘರಿಕ್ ಸೂಚಿಸಿದ್ದಾರೆ.

ನಾಳೆ ನಮ್ಮವರು ಯಾರಾದ್ರೂ ತಮಿಳುನಾಡು ಕಡೆಗೆ ಹೊರಟಿದ್ದರೆ ದಯವಿಟ್ಟು ಮುಂದೂಡಿಕೆ ಮಾಡಿದ್ರೆ ಒಳಿತು. ಯಾಕಂದ್ರೆ, ಕಾವೇರಿ ನೀರಿಗಾಗಿ ಇಡೀ ಕರ್ನಾಟಕ ಬೆಂಕಿ ಚೆಂಡು ರೀತಿ ತಮಿಳುನಾಡಿನಲ್ಲೂ ಸನ್ನಿವೇಶ ಉಂಟಾಗುವ ಸಾಧ್ಯತೆಯಿದೆ. ಅಲ್ಲಲ್ಲಿ ಸರ್ಕಾರಿ ಸಾರಿಗೆ, ಸಾಗಾಣೆ ಲಾರಿ ಸೇರಿ ಟೂರಿಸ್ಟ್ ವಾಹನಗಳಿಗೂ ಬಿಸಿ ತಟ್ಟುವ ಸಾಧ್ಯತೆಯಿದೆ. ಪ್ರಯಾಣಕ್ಕೆ ಕರ್ನಾಟಕ ನೋಂದಣಿ ವಾಹನಗಳ ಬಳಕೆ ಮಾಡದಿರುವುದು ಒಳಿತು. ಎಲ್ಲಾದರು ಕನ್ನಡ ವಾಹನಗಳು ಅಂತ ರಾಜ್ಯದಲ್ಲಿ ಆದಂತೆ ಗಲಾಟೆಯಾಗಿ ಕಾನೂನು ಸುವ್ಯವಸ್ಥೆ ಆಗಬಹುದು. ಹೀಗಾಗಿ ಪ್ರಯಾಣವನ್ನ ಮುಂಡೂಡಿದರೆ ಒಳಿತು.

ಗಮನಿಸಿ:
* ವಿವಿಧ ರೈತಪರ ಬಂದ್ಗೆ ರಾಜಕೀಯ ಬೆಂಬಲ ನೀಡಿವೆ.
* ಇಡೀ ತಮಿಳುನಾಡು ಸ್ತಬ್ಧವಾಗಲಿದ್ದು ಸಂಚಾರ ಬಹುತೇಕ ಅನುಮಾನವಾಗಿದೆ.
* ಕರ್ನಾಟಕ ನೋಂದಣಿ ವಾಹನಗಳಲ್ಲಿ ಪ್ರಯಾಣ ಬೇಡವೇ ಬೇಡ
* ಬೆಂಗಳೂರಲ್ಲಿ ಆದಂತೆ ಅಲ್ಲೂ ಗಲಾಟೆ, ಪ್ರತಿಭಟನೆ ಹೆಚ್ಚಾಗಬಹುದು
* ಡಿಎಂಕೆ ಸೇರಿ ಪ್ರಮುಖ ರಾಜಕೀಯ ಪಕ್ಷಗಳಿಂದಲೂ ಬಂದ್ಗೆ ಬೆಂಬಲ
* ನಾಳೆ-ನಾಡಿದ್ದು ಮಾತ್ರವಲ್ಲ, ಶುಕ್ರವಾರ, ಶನಿವಾರ ಮತ್ತು ಭಾನುವಾರವೂ ಬಿಸಿ ಇರಬಹುದು
* ಸತತ ನಾಲ್ಕು ದಿನಗಳ ಕಾಲ ‘ಕಾವೇರಿ’ಗಾಗಿ ಹೋರಾಟಕ್ಕೆ ಸಜ್ಜು