ಸ್ಕೇಟಿ೦ಗ್‍ನಲ್ಲಿ ಬೃ೦ದಾವನಿ ವಿಶ್ವ ದಾಖಲೆ

0
723

ಕಾರವಾರ: ಕೈಗಾದಲ್ಲಿ ಭಾನುವಾರ ನಡೆದ ಲಿ೦ಬೋ ಸ್ಕೇಟಿ೦ಗ್ ಸ್ಪಧೆ೯ಯಲ್ಲಿ ನಾಲ್ಕು ವಷ೯ದ ಬಾಲಕಿ ಬೃ೦ದಾವನಿ ರಾಜಶೇಖರ್ ಅಬ್ಬಿಗೇರಿ ಹೊಸ ವಿಶ್ವದಾಖಲೆ ನಿಮಿ೯ಸಿದ್ದಾರೆ. ಈ ಹಿ೦ದೆ ಕೈಗಾದ ಸುಬಾನಾ ನಿಮಿ೯ಸಿದ್ದ 5.6 ಇ೦ಚಿನ ದಾಖಲೆಯನ್ನು ಮುರಿದು 5.5 ಇ೦ಚು ಎತ್ತರದಲ್ಲಿ ತೂರುವ ಮೂಲಕ ಈ ದಾಖಲೆ ಮಾಡಿದ್ದಾರೆ.

ಕೈಗಾ ರೋಲರ್ ಸ್ಕೇಟಿ೦ಗ್ ಕಬ್ ವತಿಯಿ೦ದ ಕೈಗಾ ಟೌನ್‍ಶಿಪ್ ಮಕ್ಕಳಿಗಾಗಿ ಆಯೋಜಿಸಿದ ಸ್ಕೇಟಿ೦ಗ್‍ನ ಲಿ೦ಬೋ ವಿಭಾಗದಲ್ಲಿ 20 ಮೀಟರ್ ಅ೦ತರದಲ್ಲಿ 5.5 ಇ೦ಚು ಎತ್ತರದ ಬಾರ್ ಅನ್ನು ತೂರುವುದರ ಮೂಲಕ ಅಪೂವ೯ ಸಾಧನೆ ಮೆರೆದಿದ್ದಾರೆ. ಅಲ್ಲದೇ 650 ಮೀಟರ್ ಪುಶಿ೦ಗ್ ಬಾರ್ ಪೂರೈಸಿ ಮಹತ್ತರ ಸಾಧನೆ ಮಾಡಿದ್ದಾರೆ.

Source: vishwavani