ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ನಿಂದ ಹೊಸ ಬಾಂಬ್; ನೀವು SBI ಗ್ರಾಹಕರ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ..

0
855

ಎಲ್ಲರ ಮೆಚ್ಚಿನ ಬ್ಯಾಂಕ್ ಅಂದ್ರೆ ಮೊದಲು ನೆನಪು ಬರೋದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಷ್ಟೊಂದು ಗ್ರಾಹಕರನ್ನು ಸೆಳೆದ ಈ ಬ್ಯಾಂಕ್ ದಿನಕ್ಕೊಂದು ಹೊಸ ನಿಯಮ ಜಾರಿಗೊಳಿಸಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿರುವ ದೇಶದ ಅತಿದೊಡ್ಡ ಬ್ಯಾಂಕ್ ತನ್ನ ಗ್ರಾಹಕ ಸೇವಾ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ದಿನದ ವಿತ್ ಡ್ರಾ ಮಿತಿಯನ್ನು 40,000 ರೂ. ನಿಂದ 20,000 ರೂ.ಗೆ ಇಳಿಕೆ ಮಾಡಲು ಮುಂದಾಗಿದು. ಇದೆ ತಿಂಗಳ (ಅಕ್ಟೋಬರ್) 31ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

Also read: ಮುಂದಿನ ವರ್ಷದ ಜುಲೈನಿಂದ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪತ್ರಗಳು ದೇಶದಾದ್ಯಂತ ಏಕರೂಪತೆ ಪಡೆದುಕೊಳ್ಳಲಿವೆ..

ಅದೇ ರೀತಿ ಬ್ಯಾಂಕ್​ ಖಾತೆಗಳಲ್ಲಿನ ಠೇವಣಿ ನಿಯಮಗಳಲ್ಲೂ ಕೆಲ ಬದಲಾವಣೆ ಮಾಡಿಕೊಂಡಿದೆ. ಈ ಹೊಸ ನಿಯಮದ ಪ್ರಕಾರ SBI ಗ್ರಾಹಕರು ತನ್ನದೇ ಯಾವುದೇ ಬ್ರಾಂಚ್​ಗಳಲ್ಲೂ ಕೂಡ ಠೇವಣಿ ಹಣವನ್ನು ವಾವತಿಸಬಹುದಾಗಿದೆ. ಡೆಪಾಸಿಟ್​ನ ಹೊಸ ನಿಯಮದಡಿಯಲ್ಲಿ, SBI ಗ್ರಾಹಕರು ದೇಶದ ಯಾವುದೇ ಶಾಖೆಯಲ್ಲಿ ಕೂಡ ನಗದು ಜಮಾ ಮಾಡಬಹುದು. ಇದರ ಮಿತಿಯನ್ನು 30 ಸಾವಿರ ರೂಪಾಯಿಗೆ ಸೀಮಿತಗೊಳಿಸಿದ್ದು, ಇದರ ಜೊತೆಗೆ, ಕರೆಂಟ್​ ಅಕೌಂಟ್​ ಗ್ರಾಹಕರು ದಿನಕ್ಕೆ 2 ಲಕ್ಷ ರೂ.ವರೆಗೆ ಜಮಾ ಮಾಡಬಹುದಾಗಿದೆ.

Also read: ಬೆಂಗಳೂರಿಗರು ಮತ್ತೆ ಬೀದಿಗೆ; ಶುರುವಾಯಿತು ರಾಜಕಾಲುವೆಯ ಒತ್ತುವರಿ ತೆರೆವು ಕಾರ್ಯಾಚರಣೆ…

ಇದಕ್ಕೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಈ ಮೊದಲು SBI ಖಾತೆದಾದರು ಪ್ರತಿದಿನ ಎಟಿಎಂನಿಂದ 40 ಸಾವಿರದವರೆಗೂ ಹಣ ಡ್ರಾ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಸ್​ಬಿಐ ಎಟಿಎಂ ವಹಿವಾಟಿನಲ್ಲಿ ವಂಚನೆ ದೂರುಗಳು ಕೇಳಿ ಬರುತ್ತಿವೆ. ಇದನ್ನು ತಡೆಗಟ್ಟಲು ನಗದು ಡ್ರಾ ಮಿತಿಯನ್ನು ಕಡಿತಗೊಳಿಸಲಾಗಿದೆ. ಸದ್ಯಕ್ಕೆ ಈ ಹೊಸ ನಿಯಮ ಕ್ಲಾಸಿಕ್‌ ಮತ್ತು ಮೆಸ್ಟ್ರೋ ಕಾರ್ಡ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿರುವ ಪ್ರಕಾರ ಪ್ಲಾಟಿನಂ ಕಾರ್ಡ್​ ಹೊಂದಿರುವ ಗ್ರಾಹಕರು ಒಂದು ದಿನದಲ್ಲಿ 1 ಲಕ್ಷದವರೆಗೆ ಹಣ ವಿತ್​ಡ್ರಾ ಮಾಡಬಹುದಾಗಿದೆ. ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Also read: ನಿಮ್ಮ ಮನೆ ಮತ್ತು ಬೆಡ್ ರೂಮ್-ಗಳಲ್ಲಿ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ರೋಗ ಬರುತ್ತಿದೆ; ಇಂತಹ ವಸ್ತುಗಳಿಂದ ದೂರವಿರಿ..

ಈ ಹೊಸ ನಿಯಮಗಳು ಬಂದಿರುವ ಹಿಂದಿನ ಉದ್ದೇಶ; ಹೆಚ್ಚುತ್ತಿರುವ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯ ನೀಡಿದ ಗ್ರಾಹಕರು ಇದು ವರ್ಷದ ಕೊನೆಯಲ್ಲಿ ಆಗಿರುವ ಬದಲಾವಣೆ ಇದರಿಂದ ಗ್ರಾಹಕರರಿಗೆ ತೊಂದರೆಯಾಗಲಿದೆ ಇದೆ ಅಕ್ಟೋಬರ್ ನಿಂದ ಹಬ್ಬಗಳು ಶುರುವಾಗಲಿವೆ ಆದಕಾರಣ ಹಣದ ಅವಶ್ಯಕತೆ ಹೆಚ್ಚಿದು ಎಸ್‍ಬಿಐ ತನ್ನ ಎಟಿಎಂ ಗರಿಷ್ಠ ವಿತ್ ಡ್ರಾವಲ್ ಮಿತಿಯನ್ನು ಅರ್ಧದಷ್ಟು ಇಳಿಸಿರುವುದರಿಂದ ತೊಂದರೆಯಾಗಲಿದೆ ಎಂದು ಗ್ರಾಹಕರು ಈ ನಿಯಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಬೀಳುವ ಕಾರಣ ಬ್ಯಾಂಕ್ ವ್ಯವಹಾರದ ಸಮಯ ಮುಗಿದ ಬಳಿಕವೂ ಎಟಿಎಂಗಳಲ್ಲಿ ಹಣ ಡ್ರಾ ಮಾಡಬಹುದಾಗಿದ್ದು, ಈ ಹಿಂದಿನಂತೆ ಹಣ ತೆಗೆಯುವ ಮಿತಿಯನ್ನು 40 ಸಾವಿರ ರೂ.ಗೆ ನಿಗದಿ ಮಾಡಲು ಒತ್ತಾಯಿಸಿದ್ದಾರೆ.