ಹರಿಪ್ರಿಯಾ ಮೇಲೆ ‘ಫೈರಿಂಗ್ ಸ್ಟಾರ್’ ಹುಚ್ಚ ವೆಂಕಟ್ ಕೂಗಾಟ

0
2709

“ಫೈರಿಂಗ್ ಸ್ಟಾರ್ ಐಸ್ ಬ್ಯಾಕ್”

ಹುಚ್ಚ ವೆಂಕಟ್ ಹರಿಪ್ರಿಯಾ ಮೇಲೆ ಕೂಗಾಡಿದ್ದಾರೆ, ಕಾರಣ ನೀರ್ ದೋಸೆ ಸಿನಿಮಾ… ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿ ತುಳುಕಿರುವ ‘ನೀರ್ ದೋಸೆ’ ಚಿತ್ರದ ಟ್ರೈಲರ್ ಹಾಗೂ ಅದರಲ್ಲಿ ಇರುವ ಹರಿಪ್ರಿಯಾ ರವರ ಬಿಸಿ ಬಿಸಿ ಅವತಾರ ಕಂಡು ಹುಚ್ಚ ವೆಂಕಟ್ ಕೆರಳಿದ್ದಾರೆ. ”ನಿಮಗೆ ನಾಚಿಕೆ ಆಗಲ್ವಾ.? ಒಂದು ಹೆಣ್ಣಾಗಿ ಡ್ರಿಂಕ್ಸ್, ಸಿಗರೇಟ್ ತಗೋತೀರಾ.? ಪಬ್ಲಿಸಿಟಿ ಗೋಸ್ಕರ ಮಾಡಿದ್ರಾ.? ದುಡ್ಡಿಗಾಗಿ ಮಾಡಿದ್ರಾ.? ತಪ್ಪು….ಇನ್ಮೇಲೆ ನಿಮ್ ಐಟಂ ಸಾಂಗ್ ban ಆಗ್ಬೇಕ್” – ಹೀಗಂತ ನಟಿ ಹರಿಪ್ರಿಯಾ ರವರಿಗೆ ಕಟ್ಟೆಚ್ಚರ ನೀಡಿರುವುದು ‘ಫೈರಿಂಗ್ ಸ್ಟಾರ್’ ಹುಚ್ಚ ವೆಂಕಟ್.

ಕನ್ನಡದ ಪ್ರಖ್ಯಾತ ನಟಿ ಹರಿಪ್ರಿಯಾ ‘ಕಾಲ್ ಗರ್ಲ್’ ಪಾತ್ರದಲ್ಲಿ ಅಭಿನಯಿಸಿರುವ ‘ನೀರ್ ದೋಸೆ’ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆಮೊನ್ನೆಯಷ್ಟೇ ಬೆಂಗಳೂರಿನ ETA ಮಾಲ್ ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈಗಾಗಲೇ ಹುಚ್ಚ ವೆಂಕಟ್ ಯೂಟ್ಯೂಬ್ ನಲ್ಲಿ ‘ನೀರ್ ದೋಸೆ’ ಚಿತ್ರತಂಡಕ್ಕೆ ಮತ್ತು ಹರಿಪ್ರಿಯಾ ರವರಿಗೆ ತಮ್ಮದೇ ಶೈಲಿಯಲ್ಲಿ ಬೆಂಡೆತ್ತಿ ಬ್ರೇಕ್ ಹಾಕಿರುವ ವಿಡಿಯೋ ಹರಿದಾಡುತ್ತಿದೆ.

ಹುಚ್ಚ ವೆಂಕಟ್ ಮಾತಿನ ಲಹರಿ ಹೇಗಿದೆ… 1 ”ಹೆಣ್ಮಕ್ಕಳನ್ನ ಕೆಟ್ಟದಾಗಿ ತೋರಿಸಿ, ಪಿಕ್ಚರ್ ಓಡುತ್ತೆ ಅಂದುಕೊಂಡ್ರೆ, ಅದು ಓಡಲ್ಲ. ಕರ್ನಾಟಕ ಜನತೆಯನ್ನ ನಾನು ಕೇಳಿಕೊಳ್ಳೋದು ಇಷ್ಟೇ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ಕೊಡಬೇಡಿ”

2 ”ಬೀಡಿ, ಸಿಗರೇಟ್ ಸೇದ್ತಾರಂತೆ, ಡ್ರಿಂಕ್ಸ್ ಮಾಡ್ತಾರಂತೆ. ಏನ್ರೀ ನಮ್ಮ ಸಂಸ್ಕೃತಿ, ಸಂಪ್ರದಾಯ.? ಇಡೀ ಭಾರತದಲ್ಲಿ ಕರ್ನಾಟಕ ಅಂದ್ರೆ ಯಾವ ಮಟ್ಟಕ್ಕೆ ಇತ್ತು. ಇಂತಹ ಕಚಡಾ ಡೈರೆಕ್ಟರ್, ಪ್ರೊಡ್ಯೂಸರ್ ಗಳಿಂದ ಇವತ್ತು ಹೆಂಗಾಗಿದೆ ನೋಡ್ರಿ..!”

3 ”ಕರ್ನಾಟಕ ಜನತೆಗೆ ನಾನು ಹೇಳೋದು ಏನು ಅಂದ್ರೆ, ಕಚಡಾ ಪೋಸ್ಟರ್ ಗಳು ಹಾಕಿದ್ರೆ ಹರಿದು ಬಿಸಾಕಿ. ಅಶ್ಲೀಲ ಸಿನಿಮಾಗಳಿಗೆ ಹೋಗಲೇಬೇಡಿ. ಅವರು ಬೀದಿಗೆ ಬರಬೇಕು, ಭಿಕ್ಷೆ ಬೇಡ ಬೇಕು. ಹಂಗೆ ಮಾಡಿ”

4 ”ಟ್ರೈಲರ್ ಬಿಟ್ಟಿದ್ದಾರೆ. ಅದು ಹೇಗಿದೆ ಗೊತ್ತಾ.? ಒಂದು ಹೆಣ್ಣಿಗೆ ಗೌರವ ಇದೆ. ಇವತ್ತು ಭಾರತ ಇಡೀ ಪ್ರಪಂಚದಲ್ಲಿ ಗ್ರೇಟ್ ಆಗಿರುವುದು ಹೆಣ್ಣಿನ ವಿಚಾರಕ್ಕೆ. ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಕ್ಕೆ. ಅದನ್ನ ಇವರೆಲ್ಲಾ ಕೆಡಿಸುತ್ತಾ ಇದ್ದಾರೆ”

5 ”ಕನ್ನಡ ಸಂಘಟನೆಗಳೆಲ್ಲಾ ಹೋರಾಟ ಮಾಡುತ್ತೀರಿ. ಈ ವಿಷಯಕ್ಕೆ ಯಾಕೆ ಹೋರಾಡಲ್ಲ.? ಐಟಂ ಸಾಂಗ್ ಬ್ಯಾನ್ ಆಗ್ಬೇಕು. ಅಶ್ಲೀಲ ತೋರಿಸಬಾರದು ಅಂತ ಯಾರೂ ಯಾಕೆ ಹೋರಾಡಲ್ಲ.? ತಪ್ಪಲ್ವಾ.? ನಮ್ಮ ಮನೆಯಲ್ಲೂ ಹೆಣ್ಮಕ್ಕಳು ಇದ್ದಾರೆ ಅಲ್ವಾ.?”

6 ”ಹೆಣ್ಮಕ್ಕಳನ್ನು ಪ್ರೀತಿಯಿಂದ ನೋಡಿ, ಗೌರವದಿಂದ ನೋಡಿ, ಅಶ್ಲೀಲವಾಗಿ ನೋಡಿದರೆ ಕಣ್ಣು ಕಿತ್ತು ಬಿಡ್ತೀನಿ”

7 ”ಹರಿಪ್ರಿಯಾ ಅವರೇ, ನೀವು ಈ ಪಾತ್ರ ಮಾಡಿದ್ದೀರಾ. ನಿಮಗೆ ನಾಚಿಕೆ ಆಗಲ್ವಾ.? ಒಂದು ಹೆಣ್ಣಾಗಿ ಸಿಗರೇಟ್, ಡ್ರಿಂಕ್ಸ್.? ಪಬ್ಲಿಸಿಟಿ ಗೋಸ್ಕರ ಮಾಡಿದ್ರಾ.? ದುಡ್ಡಿಗಾಗಿ ಮಾಡಿದ್ರಾ.? ತಪ್ಪು ಇನ್ಮೇಲೆ ಯಾವ ಐಟಂ ಸಾಂಗ್ ಮಾಡಬಾರದು”

ವಿಡಿಯೋ ನೋಡಿ…