ಸರಿಸೃಪ ಜಾತಿಗೆ ಸೇರಿದ ಒಂದು `ದೊಡ್ಡ ಹಲ್ಲಿ’

0
1062

ಮನುಷ್ಯನ ಆಸಕ್ತಿಯು ವಿಧ ವಿಧವಾಗಿರುತ್ತದೆ. ಕೆಲವರಿಗೆ ವಿಜ್ಞಾನ ವಿಷಯ ಇಷ್ಟವಾದರೆ ಇನ್ನೂ ಕೆಲವರಿಗೆ ವಿಜ್ಞಾನದಲ್ಲಿನ ಕೆಲ ನಿರ್ದಿಷ್ಟ ವಿಷಯಗಳು ಅಧ್ಯಯನ ಮಾಡಲು ಇಷ್ಟವಾಗುತ್ತವೆ. ಅದೇ ರೀತಿಯಾಗಿ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ಪ್ರಾಣಿಶಾಸ್ತ್ರ ಪ್ರಿಯ ಪ್ರವಾಸಿಗರಿಗೆ ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಪ್ರಾಣಿಗಳಾಗಲಿ, ಹಕ್ಕಿಗಳಾಗಲಿ ಅಥವಾ ಕೀಟ, ಸರಿಸೃಪಗಳಾಗಲಿ ಅಲ್ಲಿಗೆ ತೆರಳಿ ನೋಡುವುದೆಂದರೆ ಖುಶಿ ಕೊಡುವ ಚಟುವಟಿಕೆಯಾಗಿರುತ್ತದೆ. ಅಂಥವರಿಗೆ ಇಲ್ಲಿದೆ ಒಂದು ಕುತೂಹಲದ ಸಂಗತಿ. ಸರಿಸೃಪ ಜಾತಿಗೆ ಸೇರಿದ ಒಂದು `ದೊಡ್ಡ ಹಲ್ಲಿ’ ಅತ್ಯಂತ ವಿಲಕ್ಷಣ ಜೀವಿಗಳ ಗುಂಪಿಗೆ ಸೇರಿದೆ.

unnamed

ಭಯ ಹುಟ್ಟಿಸುವ ಗರಗಸದಂಥ ಉಗುರುಗಳು, ವಿಚಿತ್ರ ಮುಖ, ಅದನ್ನು ಇನ್ನಷ್ಟು ವಿರೂಪಗೊಳಿಸುವಂತೆ ಇರುವ ಕಿರೀಟಗಳಂಥ ಸಾಲು ಕೋಡುಗಳು ಪಂಕರ್‍ನ ಲಕ್ಷಣಗಳು. ಇದರ ನೆತ್ತಿ ಮೇಲಿರುವ ವಿಶಿಷ್ಟ ವಿನ್ಯಾಸವೇ ಬಹುಶಃ ಅಮೆರಿಕದ ಪಂಕ್‍ಗಳ ಹೇರ್‍ಸ್ಟೈಲ್‍ಗೆ ಸೂರ್ತಿಯಂತೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಭಕ್ಷಿಸುವ ಪಂಕರ್ ಈ ನಿಸರ್ಗದ 50 ಅತ್ಯಂತ ವಿಲಕ್ಷಣ ಜೀವಿಗಳಲ್ಲಿ 13ನೆ ಸ್ಥಾನ ಪಡೆದಿದೆ.