ಹಳೆಯ 500, 1000 ನೋಟುಗಳನ್ನು ಇಲ್ಲಿ ಚಲಾವಣೆ ಮಾಡಬಹುದು…!

0
656

ಹಳೆಯ 500 ಮತ್ತು 1000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಿಕೊಳ್ಳಲು ನೀಡಿದ್ದ ಅವಕಾಶ ಗುರುವಾರಕ್ಕೆ ಮುಗಿಯಿತು. ಅಂದರೆ ಇನ್ನು ಈ ನೋಟುಗಳು ಭಾಗಶಃ ಕೊನೆಯುಸಿರೆಳೆಯಿತು. ಆದರೆ ಈ ನೋಟುಗಳನ್ನು ಹೊಂದಿರುವವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ. ಅವರೆಲ್ಲಾ ಈ ನೋಟುಗಳನ್ನು ಬದಲಿಸುವಂತಿಲ್ಲ ನಿಜ ಆದರೆ ಬಳಸಬಹುದು.

ಸರಕಾರ ಹಣ ಬದಲಾವಣೆಗೆ ನೀಡಿದ್ದ ಗಡುವು ನವೆಂಬರ್ ೨೪ ಮಧ್ಯರಾತ್ರಿಗೆ ಕೊನೆಗೊಂಡಿತು. ಗಡುವು ವಿಸ್ತರಿಸುವುದಿಲ್ಲ ಎಂದು ಗುರುವಾರ ಸಂಜೆ ಕೇಂದ್ರ ಸರಕಾರ ಸ್ಪಷ್ಟಪಡಿಸಿತು. ಹಳೆಯ 500 ಮತ್ತು 1000 ನೋಟುಗಳನ್ನು ಬ್ಯಾಂಕ್ ಕೌಂಟರ್‌ಗಳಲ್ಲಿ ಬದಲಾವಣೆಗೆ ನೀಡಲಾಗಿದ್ದ ಗಡುವು ಮುಗಿಯಿತು. ಆದರೆ ಪೆಟ್ರೋಲ್ ಬಂಕ್, ಸರಕಾರಿ ಆಸ್ಪತ್ರೆಗಳಲ್ಲಿ ಡಿಸೆಂಬರ್ 15ರವರೆಗೆ ಈ ನೋಟುಗಳನ್ನು ಚಲಾವಣೆ ಮಾಡಬಹುದಾಗಿದೆ.

ಹಳೆ ನೋಟು ಇಲ್ಲಿ ಬಳಸಬಹುದು

 • ಟೋಲ್ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಬಳಸಬಹುದು
 • ರಾಜ್ಯ ಮತ್ತು ಕೇಂದ್ರದ ಒಡೆತನದಲ್ಲಿರುವ ಸರಕಾರಿ ಶಾಲೆಗಳಲ್ಲಿ ೨೦೦೦ ರೂ.ವರೆಗೂ ಶುಲ್ಕ ಕಟ್ಟಬಹುದು.
 • ರಾಜ್ಯ-ಕೇಂದ್ರದ ಕಾಲೇಜುಗಳಲ್ಲಿ ಶುಲ್ಕ ಪಾವತಿಸಬಹುದು.
 • ೫೦೦ ರೂ. ಮಿತಿಮೀರದಂತೆ ಪ್ರೀಪೇಯಿಡ್ ಮೂಲಕ ಮೊಬೈಲ್ ಟಾಪ್ ಅಪ್ ಮಾಡಿಸಿಕೊಳ್ಳಲು ಬಳಸಬಹುದು.
 • ಒಂದು ಬಾರಿಗೆ ಗರಿಷ್ಠ ೫೦೦೦ ರೂ. ಮಿತಿಯಂತೆ ಕೋಆಪರೇಟಿವ್ ಅಂಗಡಿಗಳಲ್ಲಿ ಖರೀದಿ ಮಾಡಬಹುದು.
 • ಸರಕಾರಿ ಸಾಮ್ಯದ ಹಾಲಿನ ಕೇಂದ್ರಗಳಲ್ಲಿ ಹಾಲು ಖರೀದಿ ಮಾಡಬಹುದು.
 • ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಗಳಲ್ಲಿ ಬಿಲ್ ಪಾವತಿಸಬಹುದು.
 • ಸರಕಾರಿ ಸ್ವಾಮ್ಯದ ರೈಲು ಹಾಗೂ ಬಸ್ ಟಿಕೆಟ್ ಖರೀದಿ ಮಾಡಬಹುದು.
 • ಚಿತಾಗಾರದಲ್ಲಿ ಬಳಸಬಹುದು.
 • ಎಲ್‌ಪಿಜಿ ಸಿಲಿಂಡರ್ ಮತ್ತು ಗ್ಯಾಸ್ ಖರೀದಿ ಮಾಡಬಹುದು.
 • ಮೆಟ್ರೋ ರೈಲುಗಳಲ್ಲಿ ಬಳಸಬಹುದು.
 • ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಅಲ್ಲದೇ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ, ದಂಡ, ಶುಲ್ಕ ಮುಂತಾದವು ಪಾವತಿಸಬಹುದು.
 • ನೀರು, ವಿದ್ಯುತ್ ಬಿಲ್ ಪಾವತಿ ಮಾಡಬಹುದು.
 • ಕೋರ್ಟ್ ಶುಲ್ಕ ಭರ್ತಿ ಮಾಡಬಹುದು.
 • ಭಿತ್ತನೆ ಬೀಜ ಖರೀದಿಸಬಹುದು.