ಹೆಣ್ಣು ಮಗು ಹುಟ್ಟಿದ್ದಕ್ಕೆ ಅತ್ತೆ ಕೊಟ್ಟ gift ನೋಡುದ್ರೆ ನೀವು ಹುಬ್ಬೇರಿಸುತ್ತೀರಿ…!!

0
2276

ಸಾಮಾನ್ಯವಾಗಿ ಪರಸ್ಪರ ಕಿತ್ತಾಡುವ ಅತ್ತೆ ಸೊಸೆಯರ , ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ ಅನ್ನೋ ಭಾವನೆ ಇರುತ್ತದೆ. ಆದರೆ ಕೆಲವರು ಮಾತ್ರ ತುಂಬಾ ಅನ್ಯೋನವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಖುಷಿಯಾಗಿ ಮುದ್ದಿನ ಸೊಸೆಗೆ ತನ್ನ ಮುದ್ದಿನ ಸೊಸೆಗೆ ದುಬಾರಿ ಹೋಂಡಾ ಸಿಟಿ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.

ಕೇಳೋಕೆ ಆಶ್ಚರ್ಯವಾಗ್ತಿದ್ಯಾ. ಈ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ ಅಂದ್ರೆ ಇನ್ನೂ ಆಶ್ಚರ್ಯವಾಗುತ್ತೆ. ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಪ್ರೇಮಾ ದೇವಿ ತಮ್ಮ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಖುಷಿಪಟ್ಟಿದ್ದಾರೆ, ಈ ಜಿಲ್ಲೆಯಲ್ಲಿ ಹೆಣ್ಣು ಮಗುವಿನ ಜನನವನ್ನು ಅಷ್ಟೊಂದು ಖುಷಿಯಿಂದ ಸ್ವಾಗತಿಸದ ಜನರ ನಡುವೆ ಪ್ರೇಮಾ ದೇವಿ ಡಿಫರೆಂಟ್ ಆಗಿ ಸೊಸೆಗೆ ಗಿಫ್ಟ್ ನೀಡಿದ್ದಾರೆ. ಯಾಕಂದ್ರೆ ಸಾಮಾನ್ಯವಾಗಿ ಉತ್ತರಪ್ರದೇಶದಲ್ಲಿ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವಾದ್ರೆ ಅಷ್ಟೊಂದು ಖುಷಿಯಿಂದ ಸ್ವಾಗತಿಸಲ್ವಂತೆ. ಆದ್ರೆ ಹಮಿರ್‍ಪುರ್ ಜಿಲ್ಲೆಯ ನಿವಾಸಿಯಾದ ಪ್ರೇಮಾ ದೇವಿ ಮಾತ್ರ ತನ್ನ ಸೊಸೆ ಹೆಣ್ಣು ಮಗುವನ್ನ ಹೆತ್ತಿದ್ದಕ್ಕೆ ಅತ್ಯಂತ ಹೆಚ್ಚು ಖುಷಿ ಪಟ್ಟಿದ್ದಾರೆ.

ನಿವೃತ್ತ ಆರೋಗ್ಯಾಧಿಕಾರಿಯಾಗಿರುವ ಪ್ರೇಮಾದೇವಿ, ಗಂಡು ಮಕ್ಕಳನ್ನ ಹೊಂದಿರೋದಕ್ಕಿಂತ ಹೆಣ್ಣು ಮಕ್ಕಳಿರೋದೆ ಒಳ್ಳೆಯದು ಅಂತಾರೆ. ಪ್ರೇಮಾ ದೇವಿ ಅವರ ಮಗ ಸಹ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಇಂತಹ ಅತ್ತೆಯನ್ನ ಪಡೆಯೋಕೆ ನಾನು ತುಂಬಾ ಪುಣ್ಯ ಮಾಡಿದ್ದೆ. ಅತ್ತೆಯರನ್ನ ಅಮ್ಮನಂತೆ ಕಾಣಬೇಕು ಎಂದಿದ್ದಾರೆ.

ಸೊಸೆಯರನ್ನ ಮಗಳಂತೆ ಕಾಣಲು ಶುರುಮಾಡಿದಾಗ ಮಾತ್ರ ಹೆಣ್ಣು ಭ್ರೂಣ ಹತ್ಯೆ ಕೊನೆಯಾಗಲು ಸಾಧ್ಯ. ಸೊಸೆಯಂದಿರು ಕೂಡ ಇನ್ನೊಬ್ಬರ ಮಗಳೇ ಅಲ್ವಾ? ಸೊಸೆಯನ್ನ ಮಗಳಂತೆ ಪ್ರೀತಿಸಿದ್ರೆ ಅವರು ಮನೆಗೆ ಸಂತೋಷ ತರ್ತಾರೆ ಅಂತ ಹೇಳ್ತಾರೆ ಪ್ರೇಮಾ.