ಹೊಳೆಯುವ ತ್ವಚೆಗಾಗಿ ಆರೋಗ್ಯಕರ ಸಲಹೆಗಳು.

0
1908

ಬೆಳ್ಳಗಿನ ಹೊಳೆಯುವ ತ್ವಚೆ ಯಾರಿಗೆ ತಾನೇ ಬೇಡ? ಅದರಲ್ಲೂ ಹುಡುಗಿಯರು ತಾವು ಬೆಳ್ಳಗೆ ಸುಂದರವಾಗಿ ಕಾಣಲು ಹಲವಾರು ಚಿಕಿತ್ಸೆಗೆ ಮೊರೆ ಹೋಗಿ ಕೊನೆಗೆ ಇದ್ದ ಬದ್ದ ಸೌಂದರ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈಗಿನ ಆಧುನಿಕ ಫ್ಯಾಶನ್ ಯುಗದಲ್ಲಿ ಸುಂದರವಾದ ಹೊಳೆಯುವ ತ್ವಚೆ ತುಂಬಾನೇ ಅಗತ್ಯ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳಿರುವ ಕ್ರೀಮ್ ಗಳನ್ನು ಹಚ್ಚಬಾರದು. ಇದು ನಿಮ್ಮ ಚರ್ಮಕ್ಕೆ ಹಾನಿಯನ್ನು ಉಂಟು ಮಾಡಬಹುದು. ಅದರ ಬದಲು ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಿ.

ಕಡಿಮೆ ಖರ್ಚಿನಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆ? ಹಾಗಾದ್ರೆ ಇಲ್ಲಿದೆ ನೋಡಿ ಆರೋಗ್ಯಕರ ಮನೆಮದ್ದುಗಳು.

1. ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಅರ್ಧ ತುಂಡು ನಿಂಬೆ ಹಣ್ಣನ್ನು ನಿಮ್ಮ ಮುಖದ ಮೇಲೆ ನಯವಾಗಿ ತಿಕ್ಕಿ ಆಮೇಲೆ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯಿರಿ. ನಿಂಬೆಯು ಉತ್ತಮ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯು ಬೆಳ್ಳಗೆ ಸುಂದರವಾಗಿ ಕಾಣುತ್ತದೆ.

2. ಆಲೂಗಡ್ಡೆಯ ಸಿಪ್ಪೆ ಸುಲಿದು ಅದರ ರಸವನ್ನು ಹಿಂಡಿ ತೆಗೆಯಿರಿ. ನಂತರ ಈ ರಸವನ್ನು ಮುಖಕ್ಕೆ ಮೃದುವಾಗಿ ತಿಕ್ಕಿ ಮಸಾಜ್ ಮಾಡಿ. ಇದು ಒಳ್ಳೆಯ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಚರ್ಮದ ಗೆರೆಗಳು ಹಾಗೂ ಸುಕ್ಕುಗಳು ನಿವಾರಣೆಯಾಗಿ ಮುಖವು ಆರೋಗ್ಯಯುತವಾಗಿ ಹೊಳೆಯುತ್ತದೆ.

3. ಟೊಮ್ಯಾಟೋ ತಿರುಳನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆಯಿರಿ. ಇದರಿಂದ ಸುಂದರವಾದ ಗುಲಾಬಿ ವರ್ಣದ ತ್ವಚೆ ನಿಮ್ಮದಾಗುವುದು. ಇದನ್ನು ಪ್ರತಿದಿನವೂ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.

4. ನಿಂಬೆ ಹಣ್ಣಿನ ರಸ ಹಾಗೂ ಜೇನು ಇದನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಲಸಿ ನಂತರ ನಿಮ್ಮ ಮುಖಕ್ಕೆ ಹಚ್ಚಿ. ಇದರಿಂದ ಕೆಲವೇ ವಾರಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಒಂದು ತಿಂಗಳಿನವರೆಗೆ ಈ ವಿಧಾನವನ್ನು ಪುನರಾವರ್ತಿಸಿ.

5. ಮುಳ್ಳುಸೌತೆ ರಸವನ್ನು ನಿಂಬೆ ರಸದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ. ಮುಖ್ಯವಾಗಿ ಎಣ್ಣೆ ತ್ವಚೆ ಉಳ್ಳವರು ಇದನ್ನು ಹಚ್ಚುವುದರಿಂದ ಸುಂದರವಾದ ಹೊಳೆಯುವ ತ್ವಚೆ ಪಡೆಯಬಹುದು.

6. ಮೊಸರನ್ನು ಪ್ರತಿದಿನವೂ ಮುಖಕ್ಕೆ ಹಚ್ಚುವುದರಿಂದ ಬೆಳ್ಳನೆಯ ತ್ವಚೆ ನಿಮ್ಮದಾಗುತ್ತದೆ. ಮೊಸರಿನಲ್ಲಿ ಲಾಕ್ಟಿಕ್ ಆಸಿಡ್ ಸಮೃದ್ಧವಾಗಿದ್ದು ಇದು ಚರ್ಮದ ಬಣ್ಣವನ್ನು ತಿಳಿಯಾಗಿಸಿ ಬೆಳ್ಳಗಾಗುವಂತೆ ಮಾಡುತ್ತದೆ. ಇದು ಒಳ್ಳೆಯ ಮನೆಮದ್ದು ಕೂಡ ಹೌದು. ತುಂಬಾ ಖರ್ಚಿಲ್ಲದೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

7. ಎಳನೀರನ್ನು ಮುಖಕ್ಕೆ ಹಚ್ಚುವುದರಿಂದ ನೈಸರ್ಗಿಕವಾದ ಹೊಳೆಯುವ ಗೌರ ತ್ವಚೆಯನ್ನು ಪಡೆಯಬಹುದು.