೫೦ ಬೀದಿನಾಯಿಗಳ ದಾಳಿಗೆ ಬಲಿಯಾದ ಕೇರಳದ ವೃದ್ಧೆ

0
520

ತಿರುವನಂತಪುರಂ: ೫೦ ಬೀದಿನಾಯಿಗಳು ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದ ೬೫ ವರ್ಷದ ವೃದ್ಧೆಯೊಬ್ಬರ ಮೇಲೆ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿವೆ.

ರಾಜಧಾನಿಯಿಂದ ೧೦ ಕಿ ಮೀ ದೂರದ ಪುಲ್ಲುವಿಲ್ಲಾ ಎಂಬ ಸಮುದ್ರತೀರದ ಗ್ರಾಮದಲ್ಲಿ ಶುಕ್ರವಾರ ರಾತ್ರಿ ೯ ರ ಸುಮಾರಿಗೆ ಬಹಿರ್ದೆಸೆಗೆ ಹೊರಬಂದಾಗ ಶೀಲು‌ಅಮ್ಮ ಎಂಬುವರ ಮೇಲೆ ಏಕಾ‌ಏಕಿ ದಾಳಿ ನಡೆಸಿದ ಶ್ವಾನಗಳು ಮನಬಂದಂತೆ ಕಚ್ಚಿ ಆಕೆಯ ದೇಹದ ಕೆಲಭಾಗ ತಿಂದು ಹಾಕಿವೆ. ತೀವ್ರ ಗಾಯಗೊಂಡಿದ್ದ ಶೀಲು‌ಅಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದರು.
ನಗರ ಪಾಲಿಕೆ ನಿರ್ಲಕ್ಷ್ಯೇ ಶೀಲು‌ಅಮ್ಮ ದಾರುಣ ಸಾವಿಗೆ ಕಾರಣ ಎಂದು ಸಂಬಂಧಿಕರು ಮತ್ತು ಸುತ್ತಮುತ್ತಣ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಮರಳದ ತಾಯಿಯನ್ನು ಹುಡುಕುತ್ತ ಸಮುದ್ರತೀರಕ್ಕೆ ಬಂದ ಮಗನ ಮೇಲೂ ನಾಯಿಗಳು ದಾಳಿಗೆ ಮುಂದಾದವು. ಸಮುದ್ರಕ್ಕೆ ಧುಮುಕಿ ಪ್ರಾಣ ಉಳಿಸಿಕೊಂಡೆ ಎಂದು ಅವರು ತಿಳಿಸಿದರು ಮೃತ ಶೀಲು‌ಅಮ್ಮನವರ ಮಗ. ಇದಾದ ಕೆಲ ಗಂಟೆ ನಂತರ ೫೦ ವರ್ಷದ ಡೈಸಿ ಎಂಬುವರ ಮೇಲೂ ಬೀದಿನಾಯಿಗಳು ದಾಳಿ ನಡೆಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.