0 Made In India : ಇಲ್ಲಿ ಸೊನ್ನೆಯೇ ಹೀರೊ!

0
1113

ಯು ಟ್ಯೂಬ್ ನಲ್ಲಿ ಫುಲ್ ವೈರಲ್ ಹಾಡು “ಟೊರ್ಚ್ರ್ ಟೊರ್ಚ್ರ್” .ಪ್ರತಿಭೆಗಳನ್ನು ಕನ್ನಡ ಚಿತ್ರರಂಗ ಎಂದಿಗೂ ಸ್ವಾಗತಿಸಿದೆ. ಈಗ ಗಿರಿದೇವ್ ಹಾಸನ್ ತಮ್ಮ ಚೊಚ್ಚಲ ನಿರ್ದೇಶನದ ‘ಜೀರೋ-ಮೇಡ್ ಇನ್ ಇಂಡಿಯಾ’ ಮೂಲಕ ಚಿತ್ರರಂಗ ಪ್ರವೇಶಿಸಿದ್ದು, ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾದ ಮೂಲಕ ನಟರಾಜ್ ಮತ್ತು ಮಾಸ್ಟರ್ ಮಧುಸೂಧನ್ ಬೆಳ್ಳಿತೆರೆಗೆ ಪರಿಚಯಗೊಳ್ಳಲಿದ್ದಾರೆ.

rapids_buy_tickets_button

10a81f22-8b4c-4277-b687-41a9c2196c79

ಈ ವಾರ ತೆರೆಗೆ ಸಿದ್ಧವಾಗಿರುವ ಈ ಚಿತ್ರ ಈಗಾಗಲೇ ಏಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಇದು ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಕಥೆ. ಮಗನಿಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವ ಅಪ್ಪ ಅಪಘಾತಕ್ಕೆ ಈಡಾಗುತ್ತಾನೆ. ಅವನ ಮಗ ಅಪ್ಪು ಆಗ ತಂದೆಯ ಜೀವನವನ್ನು ಉಳಿಸಲು ನಿರ್ಧರಿಸುತ್ತಾನೆ. ಸೊನ್ನೆಯನ್ನು ಸೇರಿಸುತ್ತ ಯಾವುದೇ ಸಂಬಂಧದ ಮೌಲ್ಯ ಹೇಗೆ ವೃದ್ಧಿಯಾಗುತ್ತದೆ ಎಂಬುದು ಈ ಸಿನೆಮಾ ತಿರುಳು ಎನ್ನುವ ಗಿರಿದೇವ್ “ಜಿರೋನೇ ಈ ಸಿನೆಮಾ ಹೀರೊ” ಎನ್ನುತ್ತಾರೆ.
rapids_buy_tickets_button

ಬಹಳ ಸಣ್ಣ ಬಜೆಟ್ ನಲ್ಲಿ ಮಾಡಿಮುಗಿಸಿರುವ ‘ಜೀರೋ’ ಸಿನೆಮಾ ಬಾಲಿವುಡ್ ಗಮನ ಸೆಳೆದಿದೆಯಂತೆ. ನಿರ್ಮಾಪಕ-ನಿರ್ದೇಶಕ ದೀಪಕ್ ಶಿವದಾಸಿನಿ ಈ ಸಿನೆಮಾದ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಬಹುಷಃ ಹಿಂದಿ ಅವತರಿಣಿಕೆ ಜನವರಿ ಅಂತ್ಯದಿಂದ ಚಿತ್ರೀಕರಣಗೊಳ್ಳಲಿದೆ ಎನ್ನುವ ಗಿರಿದೇವ್ “ಅವರ ಜೊತೆ ಸಹ ನಿರ್ದೇಶನಕ್ಕಾಗಿ ಕೇಳಿದ್ದೇನೆ” ಎನ್ನುತ್ತಾರೆ.
rapids_buy_tickets_button

84863d71-121d-4bd5-abe8-8223852443a1 b5816474-7a1f-47c6-a32e-fc997e85364c feda8191-264a-4adb-868f-e8343872fea9 ff28b3cd-841d-47b8-823e-0dc67d9d71ba 9fe14d18-87ba-485e-b167-211375a4a05czero-3

ಸಿನೆಮಾದ ಶೀರ್ಷಿಕೆಯ ಬಗ್ಗೆ ಬಹಳ ವೈಯಕ್ತಿಕ ಸಂಬಂಧ ಹೊಂದಿರುವ ನಿರ್ದೇಶಕ ರೈತನ ಮಗನಾಗಿ ಕೇವಲ ೧೦ನೆ ತರಗತಿ ಮಾತ್ರ ಸಂಪೂರ್ಣಗೊಳಿಸುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ. “ಸಿನೆಮಾ ರಂಗಕ್ಕೆ ಪ್ರವೇಶಿಸುವ ನನ್ನ ತೀವ್ರಾಸಕ್ತಿ ನನ್ನನ್ನು ೨೦೦೬ಕ್ಕೆ ಬೆಂಗಳೂರಿಗೆ ಕರೆತಂದಿತು. ಆದರೆ ೯ ವರ್ಷಗಳ ನಂತರವಷ್ಟೇ ನಿರ್ದೇಶನಕ್ಕೆ ಇಳಿಯಲು ಸಾಧ್ಯವಾಗಿದ್ದು. ಸಿನೆಮಾರಂಗದಲ್ಲಿ ನನ್ನ ಗೆಳೆಯರ ವರ್ತುಲವಿದೆ, ನಾನು ಅವರನ್ನು ನೋಡಿ ಕಲಿತೆನಾದರೂ, ಅವರ ಮೇಲೆ ಅವಲಂಬಿತವಾಗಿರುವುದು ನನಗೆ ಇಷ್ಟವಿರಲಿಲ್ಲ. ಸಂಖ್ಯೆ ೦ ನನಗೆ ಇಂದಿಗೂ ಹತ್ತಿರ” ಎನ್ನುತ್ತಾರೆ.
rapids_buy_tickets_button

1670fe59-4723-4563-a491-e6ec8f09486a