ಹಿಂದಿ ಶೋ ನಲ್ಲಿ ಕನ್ನಡ ಮಾತನಾಡಿ ದೇಶದುದ್ದಕ್ಕೂ ಕನ್ನಡ ಪಸರಿಸಿದ ಹೆಮ್ಮೆಯ ತಾಯಿ.

0
2358

ಕರ್ನಾಟಕದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕನ್ನಡ ಮಾತಾಡದರೆ ಅವಮಾನ ಅನ್ನಕೋಳ್ಳರು ಒಂದು ಸಲ ನೋಡಿ

ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಟರಾಗಿ, ನರ್ತಕರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ ಪ್ರಸಿದ್ಧಿ ಪಡೆದಿ ಪ್ರಭುದೇವ ಅವ್ರು ಕನ್ನಡದವರು ಎಂದು ಹೇಳಲು ನಮಗೆ ಹೆಮ್ಮೆಯ ವಿಚಾರ.

ಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ಪ್ರಭುದೇವ ಮೈಸೂರಿನವರು. ಪ್ರಭುದೇವರ ತಂದೆ ಮೂಗೂರು ಸುಂದರ್ ಕನ್ನಡವೂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧರು. ತಮ್ಮ ತಂದೆಯಿಂದ ಪ್ರೇರೇಪಣೆ ಪಡೆದ ಪ್ರಭುದೇವ ಭರತ ನಾಟ್ಯ ಮತ್ತು ಇತರ ಭಾರತೀಯ ನೃತ್ಯ ಕಲೆಗಳ ಜೊತೆಗೆ ಪಾಶ್ಚಿಮಾತ್ಯ ನೃತ್ಯ ಕಲೆಗಳಲ್ಲೂ ಅಭ್ಯಾಸ ನಡೆಸಿದವರು.

ಸ್ಟಾರ್‌ ಪ್ಲಸ್‌ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ “ಡ್ಯಾನ್ಸ್ ಪ್ಲಸ್” ರಿಯಾಲಿಟಿ ಡಾನ್ಸ್‌ ಶೋನಲ್ಲಿ ಪ್ರಭುದೇವ ಭಾಗವಹಿಸಿದ್ದರು. ಅವರ ಜೊತೆ ಪ್ರಭು ತಂದೆ ಮೂಗೂರು ಸುಂದರಂ ಮತ್ತು ಅವರ ತಾಯಿ ಕೂಡಾ ಇದ್ದರು. ಶೋ ನಲ್ಲಿ ಪ್ರಭುದೇವರವರ ತಾಯಿಗೆ ಒಂದು ಎರಡು ಮಾತನಾಡಿ ಎಂದಾಗ ಕನ್ನಡದಲ್ಲಿ ಮಾತನಾಡಿ ಶೋ ಅಭ್ಯರ್ಥಿಗಳಿಗೆ All the best ಹೇಳಿದರು ಹಾಗೆ ಪ್ರಭುದೇವ ಅವರ ಮಗನೆಂದು ಹೆಮ್ಮೆಯಿಂದ ಹೇಳಿಕೊಂಡರು. ಹೆಸರಾಂತ್ ಡ್ಯಾನ್ಸರ್ ರೆಮೋ ಡಿ’ಸೋಜಾ, ಹಾಗು ಚಿತ್ರನಟ ಸೋನು ಸೂದ್ ಕೂಡ ಭಾಗವಹಿಸಿದ್ದರು.

ಪ್ರಭುದೇವ ಅವರು H2o, 123 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.