ಒಂದಷ್ಟು ಮನೆ ಮದ್ದು ನಿಮಗಾಗಿ

0
3761

ಅನೇಕ ಕಾಹಿಲೆ -ರೋಗ -ದೈಹಿಕ ತೊಂದರೆಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ದತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂಧ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ.

ಜನ ಸಾಮಾನ್ಯರಲ್ಲಿ ರೂಢಿಯಲ್ಲಿರುವ ಕೆಲವು ಪದ್ದತಿ-ಚಿಕಿತ್ಸೆಗಳು

ಲವಂಗವನ್ನು ಚೀಪುವುದರಿಂದ acidity ಕಡಿಮೆ ಆಗುವುದು…
ಪ್ರತಿನಿತ್ಯ ದಾಳಿಂಬೆ ಹಣ್ಣಿನ ಜ್ಯೂಸು ಕುಡಿಯುವುದರಿಂದ ನಿಮ್ಮ blood pressure ಕಡಿಮೆ ಆಗಿ, ನಿಮ್ಮನ್ನು ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿಡುವುದು…

ಬಿಲಿಸಿನಿಂದ ಬರುವ ತಲೆನೋವಿಗೆ, ಕಲ್ಲಂಗಡಿ ಹಣ್ಣಿನ ಜ್ಯೂಸು ರಾಮಬಾಣ…
ತುರಿದ ಸೌತೆಕಾಯಿಯನ್ನು ಮುಖ, ಕಣ್ಣು ಮತ್ತು ಕತ್ತಿಗೆ ಪ್ರತಿನಿತ್ಯ ಹದಿನೈದು ನಿಮಿಷ ಹಚ್ಚುವುದರಿಂದ, ನಿಮ್ಮ ಮೊಡವೆ (pimples) ಸಂಪೂರ್ಣ ಮಾಯವಾಗುವುದು…

ನಿಮ್ಮ ಜೀರ್ಣ ಶಕ್ತಿಯನ್ನು ವೃದ್ದಿಸುವುದಕ್ಕೆ ಮತ್ತು ಹೊಟ್ಟೆ ಹುಣ್ಣಿನಿಂದ ತಡೆಗಟ್ಟುವುದಕ್ಕೆ, ಪ್ರತಿನಿತ್ಯ ಊಟದ ನಂತರ ತುಳಸಿ ಎಳೆಯನ್ನು ಸೇವಿಸಿ…
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ apple ಸೀವನೆಯಿಂದ migraine ನೋವಿನಿಂದ ಮುಕ್ತಿ ಪಡೆಯಬಹುದು.

6 ಖರ್ಜೂರವನ್ನು ಅರ್ಧ ಲೀಟರ್ ಹಾಲಿನಲ್ಲಿ ಕುದಿಸಿ 3 ಕಪ್ ಕುಡಿಯುವುದರಿಂದ ಒಣ ಕೆಮ್ಮು ಸಂಪೂರ್ಣವಾಗಿ ಮಾಯವಾಗುವುದು…
ನೆಗಡಿ, ಕೆಮ್ಮು ಮತ್ತು ಗಂಟಳುನೋವಿಗೆ 2 ಚಮಚ ಜೇನುತುಪ್ಪ ಮತ್ತು 2 ಚಮಚ ಶುಂಠಿ ರಸವನ್ನು ಬೆರೆಸಿ ಕುಡಿದರೆ, ತಕ್ಷಣ ಪರಿಹಾರ ಹೊಂದುವಿರಿ..