ಬ್ರೆಡ್ ಪಕೋಡಾ

0
2054

ಬೇಕಾಗುವ ಸಾಮಗ್ರಿಗಳು

 • ಬ್ರೆಡ್ ತು೦ಡುಗಳು: 1-2
 • ಕಡಲೆ ಹಿಟ್ಟು: 1 ಕಪ್
 • ಅಕ್ಕಿ ಹಿಟ್ಟು ಮತ್ತು ಮ್ಯೆದಾ : 4 ಚಮಚ
 • ಹಸಿಮೆಣಸಿನಕಾಯಿ : 2
 • ಉಪ್ಪು: ರುಚಿಗೆ ತಕ್ಕಷ್ಟು
 • ಹೆಚ್ಚಿದ ಈರುಳ್ಳಿ: 2
 • ಕೊತ್ತ೦ಬರಿಸೊಪ್ಪು
 • ಪುದೀನಾ
 • ಕರಿಬೇವು
 • ಶು೦ಠಿ ಚೂರು
 • ಗೋಡ೦ಬಿ: 10-15
 • ಮೊಸರು: 2-3 ಚಮಚ
 • ಕರಿಯಲು ಎಣ್ಣೆ

crispy-bread-pakora-recipe-1-70523-bread

ಮಾಡುವ ವಿಧಾನ:

ಬ್ರೆಡ್ ತು೦ಡುಗಳನ್ನು 1-2 ನಿಮಿಷ ಮೊಸರಿನಲ್ಲಿ ಅದ್ದಿ. ನ೦ತರ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮ್ಯೆದಾ, ಹಸಿಮೆಣಸಿನಕಾಯಿ, ಉಪ್ಪು, ಈರುಳ್ಳಿ, ಕೊತ್ತ೦ಬರಿ ಸೊಪು,ಪುದೀನಾ, ಹೆಚ್ಚಿದ ಕರಿಬೇವು, ಶು೦ಠಿ ಪೇಸ್ಟ್, ಗೋಡ೦ಬಿ ಹಾಕಿ ಕಲೆಸಿಕೊಳ್ಳಿ. ನ೦ತರ ಬ್ರೆಡ್ ತು೦ಡುಗಳನ್ನು ಸೇರಿಸಿ ಕಲೆಸಿ. ನ೦ತರ ಎಣ್ಣೆ ಕಾಯಿಸಿ, ಕಲೆಸಿಟ್ಟ ಹಿಟ್ಟನ್ನು ಎಣ್ಣೆಯಲ್ಲಿ ಕರಿದರೆ ಬ್ರೆಡ್ ಪಕೋಡಾ ಸಿದ್ಧ.