ಕೊಡಗಿನ ಪ್ರವಾಹ ಪೀಡಿತರಿಗೆ 1.5 ಎಕರೆ ಕೃಷಿ ಭೂಮಿ ದಾನ ಮಾಡಿ ಮಾನವಿತೆ ಮೆರೆದ ಹಿಂದೂ-ಮುಸ್ಲಿಂ..

0
171

ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಜನರು ಮನೆ ಕಳೆದುಕೊಂಡು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ನೆರೆ ಪೀಡಿತ ಜನರಿಗೆ ಪುನರ್ವಸತಿಗಾಗಿ ಹಿಂದೂ-ಮುಸ್ಲಿಂ ಸಹಕಾರದಿಂದ 1.5 ಎಕರೆ ಕೃಷಿ ಭೂಮಿಯನ್ನು ದಾನ ಮಾಡಿ ಮಾನವಿತೆ ಮೆರೆದಿದ್ದಾರೆ. ಭೂ ದಾನ ಮಾಡಿದ ಕೊಡಗು ಜಿಲ್ಲೆಯ ಮುಸ್ಲಿಂ ವ್ಯಕ್ತಿ ಹೆಚ್.ಎಂ.ಅಬ್ದುಲ್ಲಾ ಹಾಜಿ ಅವರ ಸಹಕಾರಕ್ಕೆ ಕೊಂಡಂಗೇರಿ ನಿವಾಸಿ ಲೋಕೇಶ್ ಅವರು ಮುಂದೆ ಬಂದು ಪೀಡಿತರಿಗೆ ಮನೆ ಕಟ್ಟಲು ಜಾಗ ನೀಡಿ ಹಿಂದೂ-ಮುಸ್ಲಿಂ ಸ್ನೇಹ ಮೆರೆದಿದ್ದಾರೆ.


Also read: ವಾಸ್ತು ಹೇಳುವ ಜ್ಯೋತಿಷಿಗಳನ್ನು, ಕರೆಸುವ ಮುನ್ನ ಎಚ್ಚರ; ಆಪ್ತಮಿತ್ರ ಸಿನಿಮಾ ಕತೆ ಕಥೆಕಟ್ಟಿ ಯುವತಿಯ ಹೆಸರಲ್ಲಿ 30 ಲಕ್ಷ ವಂಚನೆ ಮಾಡಿದ ಸ್ವಾಮೀಜಿ..

ಏನಿದು ಸುದ್ದಿ?

ಮಹಾ ಮಳೆಗೆ ಕಾವೇರಿ ನದಿ ಹುಕ್ಕಿ ಹರಿದು ಕೊಂಡಂಗೇರಿ ಸುತ್ತಮುತ್ತಲ ಸಾವಿರಾರು ಮನೆಗಳು ಜಲಾವೃತಗೊಂಡು ನೂರಾರು ಮನೆಗಳು ಸಂಪೂರ್ಣ ಹಾನಿಯಾಗಿ ನೆಲಕಚ್ಚಿದ್ದು, ಸಂತ್ರಸ್ತರ ಸಮಸ್ಯೆಗಳನ್ನು ಮನಗಂಡು ಕೊಂಡಂಗೇರಿ ಗ್ರಾಮದ ಎಚ್.ಎಂ ಅಬ್ದುಲ್ಲಾ ಹಾಜಿ ತಮ್ಮ ಕಾಫಿ ತೋಟದ ಒಂದೂವರೆ ಎಕರೆ ಜಾಗವನ್ನು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಮಸೀದಿ ಕಮಿಟಿಯ ಮೂಲಕ ನೀಡಿದರು. ಆದರೆ ಮನೆ ಕಟ್ಟುವ ಜಾಗಕ್ಕೆ ರಸ್ತೆಯ ಸಮಸ್ಯೆ ಎದುರಾಗಿತು ಈ ಸಮಯದಲ್ಲಿ ಕೊಂಡಂಗೇರಿ ನಿವಾಸಿ ಲೋಕೇಶ್ ಅವರು ಮಸೀದಿ ಕಮಿಟಿಯ ಬೇಟಿ ಮಾಡಿ ಮಸೀದಿಗೆ ಬೇಕಾದ ಜಾಗವನ್ನು ತಮ್ಮ ಭೂಮಿಯಲ್ಲಿ ನೀಡಿ ರಸ್ತೆಗೆ ಜಾಗ ಮಾಡಿಕೊಟ್ಟಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ಪ್ರವಾಹ ಪೀಡಿತರಿಗೆ ಪುನರ್ವಸತಿಗೆ ಹೆಚ್ಚಿನ ನೆರವಾಗಿದೆ ಎಂದು ಜಿಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Also read: ಸದ್ಯದಲ್ಲೇ ಬಂದ್ ಆಗಲಿವೆ ATM ಕಾರ್ಡ್; ಸಂಪೂರ್ಣ ಡೆಬಿಟ್ ಕಾರ್ಡ್ ಸೇವೆ ಸ್ಥಗಿತಕ್ಕೆ ಮುಂದಾದ ಎಸ್ ಬಿ ಐ, ಹಾಗಾದ್ರೆ ಮುಂದೇನು? ಇಲ್ಲಿದೆ ಮಾಹಿತಿ..

ಈ ಕುರಿತು ಮಾತನಾಡಿದ ಅಬ್ದುಲ್ಲಾ ಹಾಜಿ ಮಹಾಮಳೆಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅನೇಕ ಸಂತ್ರಸ್ತರು ಮಂದಿರ, ಮಸೀದಿಗಳಲ್ಲಿ ವಾಸವಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ. ಪರಿಹಾರ ಕೇಂದ್ರಗಳಿಗೆ ನಾನು ಭೇಟಿ ನೀಡಿದಾಗ ಅನೇಕರು ಕಷ್ಟಪಡುವುದನ್ನು ಕಂಡು ಮನನೊಂದು ಜಾಗವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ. ಸಂತ್ರಸ್ತರ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ನಾನು ಕೂಡ ದೊಡ್ಡ ಶ್ರೀಮಂತ ವ್ಯಕ್ತಿಯಲ್ಲ ಇರುವುದರಲ್ಲಿ ಹಂಚಿಕೊಂಡು ಬಾಳುವುದು ಮನುಷ್ಯ ಗುಣವಾಗಬೇಕು ಎಂದು ನಾನು ಭೂಮಿಯನ್ನು ನೀಡಿದ್ದೇನೆ.


Also read: ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಜೋಡಣೆ ಕಡ್ಡಾಯ? ಕೇಂದ್ರಕ್ಕೆ ಸುಪ್ರೀಂನಿಂದ ನೋಟಿಸ್ ಜಾರಿ.!

ಅದರಂತೆ ಪ್ರವಾಹಕ್ಕೆ ಸಾವಿರಾರು ಮನೆಗಳು ಜಲಾವೃತಗೊಂಡು ನೂರಾರು ಮನೆಗಳು ಸಂಪೂರ್ಣ ಹಾನಿಯಾಗಿ ನೆಲಕಚ್ಚಿದೆ ಇದರಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರಾಗಿ ನದಿ ದಡದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳ ಮನೆಗಳು ಪ್ರವಾಹಕ್ಕೆ ಎಲ್ಲವೂ ಕೊಚ್ಚಿ ಹೋಗಿ ಸಂತ್ರಸ್ತ ಕೇಂದ್ರಗಳಲ್ಲಿ ನೆಲೆಸಿದ್ದಾರೆ ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ಆಸ್ತಿ ಪಾಸ್ತಿ ಸ್ವಲ್ಪ ಮಟ್ಟಿಗೆ ಕಳೆದುಕೊಂಡು ಮತ್ತೆ ಅದೇ ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬಗಳು ದಿನನಿತ್ಯ ಕಣ್ಣೀರಿಡುತ್ತಾ ಎಲ್ಲವೂ ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದುರು.
ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲ ಹಾಜಿ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ದಾನವಾಗಿ ನೀಡಿರುವ ಜಾಗದಲ್ಲಿ ಕಾಫಿ, ಮೆಣಸು ಹಾಗೂ ಬೆಲೆಬಾಳುವ ಮರಗಳಿದ್ದು, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸಹಕರಿಸಬೇಕೆಂದು ಕೋರಿದರು. ಒಟ್ಟಾರೆಯಾಗಿ ಹಿಂದೂ-ಮುಸ್ಲಿಂ ಎನ್ನುವ ಬೇಧವಿಲ್ಲದೆ ಇಬ್ಬರು ಜನರಿಗೆ ಶಾಶ್ವತ ನೆಲೆಯನ್ನು ನೀಡಲು ಸಹಾಯ ಮಾಡಿದ ಇಬ್ಬರ ಮಾನವಿತೆಗೆ ಸ್ಥಳೀಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.