ಅಬ್ಬಾ..! ಒಂದು ಊಟಕ್ಕೆ 14 ಕೋಟಿ ರೂ.

0
899

ಅದ್ಧೂರಿ ಭಕ್ಷ್ಯ ಭೋಜನಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆ ಇರಬಹುದು? ಗಿನ್ನಿಸ್ ದಾಖಲೆಯನ್ನು ತೆಗೆದು ಕೊಂಡರೂ, ಒಂದು ಊಟಕ್ಕೆ 33.5 ಲಕ್ಷ ರೂಪಾಯಿ ಇದುವರೆಗಿನ ಗರಿಷ್ಟ ದರ. ಆದರೆ ಸಿಂಗಪುರದ ಸಿ ಲಾ ವಿ ಸ್ಕೈಬಾರ್ ನಲ್ಲಿ ಆಫರ್ ಮಾಡಿರುವ ವಿಶೇಷ ಭೋಜನದ ಬೆಲೆ ಕೇಳಿದರೆ, ತಿನ್ನುವ ಮೊದಲೇ ನಿಮ್ಮ ಹೊಟ್ಟೆ ತೊಳಸಿಬರುವುದು ಗ್ಯಾರಂಟಿ. ಏಕೆಂದರೆ, ಅದರ ಬೆಲೆ ಕೇವಲ 14 ಕೋಟಿ ರೂಪಾಯಿ ಮಾತ್ರ! ನೀವು ಓದಿದ್ದು ಸರಿಯಾಗಿಯೇ ಇದೆ. ಹಾಗೆ ನೋಡಿದರೆ, ಈಗಿನ 33 ಲಕ್ಷ ರೂ. ಗರಿಷ್ಟ ದಾಖಲೆಯು ಇದರ ಟಿಪ್ಸ್ ಲೆಕ್ಕಕ್ಕೆ ಸರಿ ಹೊಂದುತ್ತದೆ.

ಈ ದುಬಾರಿ ರಸದೌತಣದಲ್ಲಿ ಅಂಥದ್ದೇನು ವಿಶೇಷ ವಿದೆ ಎಂದು ನಿಮಗೆ ಅಚ್ಚರಿಯಾಗ ಬಹುದು. ಒಂದೇ ಮಾತಿನಲ್ಲಿ ಹೇಳುವುದಾರೆ, ಅದು ಐಷಾರಾಮಿತನದ ಪರಾಕಾಷ್ಠೆ. ಭರ್ಜರಿ ಔತಣದ ಜತೆಗೆ ಲಕ್ಷುರಿ ವಿಮಾನ, ಕಾರು ಹಾಗೂ ಹಡಗಿನಲ್ಲಿ ಹೋಟೆಲ್ ಗೆ ಪ್ರಯಾಣವೂ ಇರುತ್ತದೆ. ಅಸಲಿ ಮೌಲ್ಯ ಊಟದ ಕೊನೆಯಲ್ಲಿ ದೊರೆಯಲಿದೆ. ಭೋಜನ ಕೂಟದ ನಂತರ ಜೋಡಿಗೆ ಒಂದು ಡೈಮಂಡ್ ಉಂಗುರವನ್ನೂ ಕೊಡುಗೆಯಾಗಿ ನೀಡಲಾಗುತ್ತದೆ. ಇಡೀ ವಿಶ್ವದಲ್ಲಿ ಕೇವಲ ಇಬ್ಬರಿಗೆ ಮಾತ್ರ ಈ ಅವಕಾಶ.

‘ವರ್ಲ್ಡ್ ಡೈಮಂಡ್ಸ್ ಗ್ರೂಪ್’ ಕಂಪನಿ ಈ ಔತಣಕೂಟವವನ್ನು ಆಯೋಜಿಸಿದೆ. ‘ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಭೋಜನ ಅನುಭವ, ಅತ್ಯಂತ ಐಷಾರಾಮಿಯೂ ಹೌದು. ಇದಕ್ಕೆ ಭಾರಿ ಸ್ಪಂದನೆ ದೊರೆಯ ಬಹುದೆಂಬ ನರೀಕ್ಷೆಯಿದೆ’ ಎಂದು ಸಂಸ್ಥೆಯ ನಿರ್ದೇಶಕ ಕರಣ್ ತಿಲಾನಿ ಅವರು ಹೇಳಿದ್ದಾರೆ.