ಹುಬ್ಬಳ್ಳಿಯಲ್ಲಿ 1 ರೂಪಾಯಿಗೆ ಫುಲ್ ಮೀಲ್ಸ್

0
5837

ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ಏನು ಸಿಗುತ್ತೆ ಹೇಳಿ. ಒಂದು ನಿಮಿಷದ ಲೋಕಲ್ ಫೋನ್ ಕಾಲ್ ಮಾಡಬಹುದಷ್ಟೇ. ಒಂದು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಒಂದು ಊಟ ಸಿಕ್ಕರೆ.. ನಂಬಲು ಸಾಧ್ಯವಿಲ್ಲ ಅಲ್ಲವೇ ?

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ಚಹ ಕುಡಿದರೂ ಕನಿಷ್ಠ ರೂ 5 ನೀಡಬೇಕು. ಅಂಥದ್ದರಲ್ಲಿ ಎರಡು ರೊಟ್ಟಿ, ಪಲ್ಯ, ಬೂಂದಿ ಕೇವಲ 1 ರೂಪಾಯಿಗೆ ನೀಡುತ್ತಿರುವುದು ನಮ್ಮಂತಹ ಬಡವರಿಗೆ ನೆರವಾಗಿದೆ ಎಂದು ಮಗನನ್ನು ಚಿಕಿತ್ಸೆಗೆ ದಾಖಲಿಸಿರುವ ಸಿಂಧನೂರಿನ ಗೂಳಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

ಇಂತಹ ಊಟದ ವ್ಯವಸ್ಥೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿದೆ. ಮಹಾವೀರ ಯುಥ್ ಫೆಡರೇಶನ್ ರೋಟಿ ಘರ್ ಎಂಬ ಹೊಟೆಲ್ ಆರಂಭಿಸಿದ್ದು, ರೋಟಿ, ಚಪಾತಿ, ಪಲ್ಯೆ, ಅನ್ನ ಸಾರು, ಫಲಾವ್, ಪಚಡಿ, ಮುಂಗಸಬಜಿ,ಮಜ್ಜಗಿ ಸಾರು, ಉಪ್ಪಿನಕಾಯಿ ಊಟದಲ್ಲಿರುತ್ತವೆ. ಉಪ್ಪಿಟ್ಟು, ಶಿರಾ, ಜೈನ್ ಫುಡ್ ಹಾಗೂ ಹಬ್ಬ ಹರಿದಿನಗಳಲ್ಲಿ ಉಂಡಿ, ಜಿಲೇಬಿ ಹಾಗೂ ಇನ್ನಿತರ ಸಿಹಿ ಊಟವನ್ನೂ ಇಲ್ಲಿ ವಿತರಿಸಲಾಗುತ್ತದೆ. ನಿತ್ಯ ಮಧ್ಯಾಹ್ನ 12ರಿಂದ 2.30ರ ವರೆಗೆ ಮಾತ್ರ ಇದರ ಸೇವೆ.

ಊಟ ಮಾಡುವವರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಒಂದು ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ರೋಟಿ ಘರ್‌ನಲ್ಲಿ ಒಂದು ಡಬ್ಬಿ ಇದೆ. ಅದರಲ್ಲಿ ಒಂದು ರೂ. ಹಾಕಿ, ಸರದಿಯಲ್ಲಿ ನಿಂತರೆ ಸಾಕು. ತಟ್ಟೆಯಲ್ಲಿ ರೊಟ್ಟಿ, ಪಲ್ಯೆ, ಅನ್ನ ಸಾರು ಹಾಕಿಯೇ ಬಿಡುತ್ತಾರೆ. ಇಲ್ಲಿ ಮೂರು ಜನ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ನೇಮಿಸಲಾಗಿದೆ. ಅವರು ಈರುಳ್ಳಿ, ಬೆಳ್ಳುಳ್ಳಿ ಹಾಕದೇ ಸಿದ್ಧ ಪಡಿಸುವ ಬಿಸಿಬಿಸಿ ರೊಟ್ಟಿ, ಪಲ್ಯ, ಅನ್ನ ಸಾರನ್ನು ಸರದಿಯಲ್ಲಿ ಬರುವ ಜನತೆಗೆ ವಿತರಿಸುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಲ್ಲರಿಗೂ ಚೆನ್ನಾಗಿ ಊಟ ಬಡಿಸುತ್ತೇವೆ. ಮತ್ತೆ ಕೇಳಿದರೂ ಊಟ ವಿತರಿಸುತ್ತೇವೆ. ಸ್ವಲ್ಪ ತಡವಾಗಿ ಬಂದರೂ ಊಟ ಖಾಲಿಯಾಗಿದೆ ಎಂದು ಹೇಳದೇ ಸ್ವಲ್ಪ ಇದ್ದರೂ ಅವರಿಗೆ ಊಟ ಕೊಡುತ್ತೇವೆ. ಯಾರಿಗೂ ಭೇದಭಾವ ಮಾಡುವುದಿಲ್ಲ ಎಂದು ಉಸ್ತುವಾರಿ ಮ್ಯಾನೇಜರ್ ಬಸವರಾಜ ಮೆಣಸಿನಕಾಯಿ ಹೇಳುತ್ತಾರೆ.