ಹಲ್ಲು ನೋವು ಬಂದಾಗ ದಂತ ವೈದ್ಯರ ಬಳಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡೋ ಬದಲು, ಈ tips-ಅನ್ನು ಪಾಲಿಸಿ ಹಲ್ಲುಗಳನ್ನು ಕಾಪಾಡಿಕೊಳ್ಳಿ!!

0
1475

ದಂತವೈದ್ಯರ ಪ್ರಕಾರ ಹಲ್ಲಿನ ಹುಳುಕು (ಕೊಳೆತ) ನಿವಾರಣೆಗೆ 10 ಸರಳ ವಿಧಾನಗಳು..

ನಮಗೆ ದೇವರು ಎರಡೇ ಎರಡು ಹಲ್ಲಿನ ಸೆಟ್ ಕೊಟ್ಟಿರುವುದರಿಂದ ಹಲ್ಲಿನ ಸುರಕ್ಷತೆ ಮುಖ್ಯವಾಗಿದೆ. ಈಗಿನ ದಿನಗಳಲ್ಲಿ ಹಲ್ಲಿನ ರಕ್ಷಣೆ ಮಾಡಿಕೊಳ್ಳಲು ಹಲವಾರು toothpaste, ಮತ್ತು ಆಯಿಲ್ ಕ್ರಿಂ ಹೀಗೆ ಹಲವಾರು ತರಹದ ವಸ್ತುಗಳು ಇದ್ದರು ಕೂಡ ಹಲ್ಲಿನಲ್ಲಿ ಕಪ್ಪು ಕಲೆಗಳಾಗಿ ಕೊಳೆತು ಕೊನೆಗೆ ಬುಡ ಸಮೇತ ತೆಗೆಸಬೇಕಾಗುತ್ತೆ. ಈ ಸಮಯದಲ್ಲಾಗುವ ನೋವು ಅನುಭವಿಸಿದವರಿಗೆ ಗೊತ್ತು. ಅಷ್ಟೇ ಅಲ್ಲದೆ ಹಲ್ಲು ಇಲ್ಲದೆ ಜೀವನ ಮಾಡುವುದು ಕೂಡ ತುಂಬಾ ಕಠಿಣವಾಗಿದೆ. ಅದಕ್ಕಾಗಿ ದಂತ ತಜ್ಞರು ಹುಳುಕು ಹಲ್ಲಿನ ತಡೆಗೆ ಕೆಲವೊಂದು ಸರಳ ವಿಧಾನಗಳನ್ನು ತಿಳಿಸಿದ್ದಾರೆ.

Also read: ಹಳದಿಗಟ್ಟಿರುವ ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡಲು ಯಾವುದೇ ದುಬಾರಿ ವೆಚ್ಚ ಬೇಡ, ಈ ಮನೆಮದ್ದುಗಳನ್ನು ಪಾಲಿಸಿ

1. ಆಯಿಲ್ ಪುಲ್ಲಿಂಗ್

ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾವನ್ನುಹೊರಹಾಕಲು ಪ್ರತಿದಿನ ಬೆಳಗ್ಗೆ ಒಂದು ಸ್ಫೂನ್ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದನ್ನು ಬಾಯಲ್ಲಿ ಹಾಕಿಕೊಂಡು 20 ನಿಮಿಷಗಳ ಕಾಲ ಆಯಿಲ್ ಪುಲ್ಲಿಂಗ್ ಮಾಡಬೇಕು. ನಂಜುನಿರೋಧಕ ಮತ್ತು ಜೀವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ತೈಲವನ್ನು ಬಾಯಲ್ಲಿ ಹಾಕಿಕೊಂಡು ಹಾಗೆಯೇ ಮುಕ್ಕಳಿಸುತ್ತಿರಬೇಕು. ಬಾಯಲ್ಲಿ ಲಾಲಾರಸ, ಆಯಿಲ್ ಎರಡೂ ಬೆರೆತು ಹಾಲಿನ ತರಹ ಬದಲಾಗುತ್ತದೆ. ಆದರೆ ಈ ಮಿಶ್ರಣವನ್ನು ನುಂಗದೆ. ಉಗಿಯಬೇಕು. ನಿತ್ಯ ಈ ರೀತಿ ಮಾಡುವುದರಿಂದ ದಂತ ಸಮಸ್ಯೆಗಳು ನಿವಾರಣೆಯಾಗುತ್ತವೆ. ದಂತಕ್ಷಯ ಬರಲ್ಲ. ಇದ್ದರೂ ಕಡಿಮೆಯಾಗುತ್ತದೆ.

2. ಮಿತಿಮೀರಿ ಹಲ್ಲುಜುವುದು;

ದಿನದಲ್ಲಿ ಎರಡು ಬಾರಿ ಹಲ್ಲು ಉಜ್ಜುವುದು ಒಳ್ಳೆಯದು ಅದಕ್ಕೂ ಮಿರಿ ತೊಳೆಯುವುದು ಹಲ್ಲಿನ ಗಮ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಲ್ಲುಗಳ ವಸಡಿನಲ್ಲಿ ಬಿರುಕು ಕಂಡು ಬಂದು ತಿಂದ ಆಹಾರಗಳು ಆ ಸ್ಥಳದಲ್ಲಿ ಸಿಲುಕಿಕೊಂಡು ಹಲ್ಲು ಹುಳುಕು ಕಂಡು ಬರುತ್ತದೆ. ಹಾಗೆಯೇ ಹಲ್ಲುಜ್ಜುವಾಗ ಅತಿಯಾದ ಒತ್ತುವ ಮೂಲಕ ಮತ್ತು ಜೋರಾಗಿ ಉಜ್ಜುವುದು ಮಾಡಬಾರದು.

3. ದಾರದಿಂದ ಸ್ವಚ್ಛಗೊಳಿಸುವುದು;

ಹಲ್ಲಿನ ಕಿಂಡಿಯಲ್ಲಿ ಆಹಾರ ಸಿಕ್ಕಿಕೊಳ್ಳುವುದು ಸಾಮಾನ್ಯ ಅದನ್ನು ಹಾಗೆ ಬಿಟ್ಟರೆ ಹಲ್ಲು ಕೊಳೆಯಲು ಕಾರಣವಾಗುತ್ತೆ ಅದಕ್ಕೆ ತೆಳುವಾದ ದಾರದಿಂದ ಸಿಲುಕಿದ ಆಹಾರವನ್ನು ತೆಗೆದರೆ ಯಾವುದೇ ತೊಂದರೆಗಳು ಕಂಡು ಬರುವುದಿಲ್ಲ.

4. ನಾಲಿಗೆ ಸ್ವಚ್ಛಗೊಳಿಸಿ;

ಹಲ್ಲು ಉಜ್ಜುವಾಗ ನಾಲಿಗೆಯನ್ನು ಕೂಡ ಸ್ವಚ್ಚಗೊಳಿಸಬೇಕು ಏಕೆಂದರೆ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಗಳು ನಾಲಿಗೆಗೆ ಅಂಟಿಕೊಂಡಿರುತ್ತೇವೆ ಆದರಿಂದ ನಾಲಿಗೆ ಸ್ವಚ್ಚಗೊಳಿಬೇಕು, ಮತ್ತು ಟೂತ್ ಬ್ರಷ್ ಬ್ರಿಜಿಲ್ಸ್‌ಗೆ ಕ್ಯಾಪ್ ಹಾಕಬಾರದು. ಹಾಕಿದರೆ ಬ್ರಿಜಿಲ್ಸ್‌ನಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಅದು ದಂತಕ್ಷಯ ಉಂಟುಮಾಡುತ್ತದೆ. ಟಾಯ್ಲೆಟ್‌‍ಗಳಿಗೆ ಸಾಧ್ಯವಾದಷ್ಟು ದೂರವಾಗಿ ಟೂತ್‌ಬ್ರಷ್ ಇಡಬೇಕು. ಇಲ್ಲದಿದ್ದರೆ ಟಾಯ್ಲೆಟ್‍ಗಳಿಂದ ಬರುವ ಬ್ಯಾಕ್ಟೀರಿಯಾ ನೇರವಾಗಿ ಬ್ರಷ್ ಮೇಲೆ ಬೆಳೆಯುತ್ತದೆ. ಅದು ದಂತಕ್ಷಯ ಉಂಟು ಮಾಡುತ್ತದೆ.

5. ಸರಿಯಾದ ಆಹಾರ ಸೇವನೆ;

ಸೂಕ್ತ ಪೋಷಕಗಳುಳ್ಳ ಆರೋಗ್ಯಕರವಾದ ಆಹಾರವನ್ನುಸೇವಿಸಿದರೆ ಹಲ್ಲಿನ ಆರೋಗ್ಯವನ್ನು ಕಾಪಾಡಬಹುದು ಏಕೆಂದರೆ ನಾವು ಸೇವಿಸುವ ಆಹಾರಗಳೇ ಹಲ್ಲನ್ನು ಕಾಪಾಡಲು ಸಹಾಯಕವಾಗಿವೆ. ಆದರಿಂದ ಸಕ್ಕರೆ ಪ್ರಮಾಣ ಕಡಿಮೆ ಇರುವ ಆಹಾರವನ್ನು ಸೇವಿಸಿದರೆ ಹಲ್ಲಿನಲ್ಲಿ ಹುಳುಕು ಕಂಡು ಬರುತ್ತದೆ. ಅದೇ ರೀತಿ ಕ್ಯಾಲ್ಸಿಯಂ ಹೆಚ್ಚಾಗಿರುವ ಹಾಲು, ಮೊಸರು, ಕ್ರೀಂ, ಚೀಸ್ ನಂತಹ ಡೈರಿ ಉತ್ಪನ್ನಗಳು ನಿತ್ಯ ಆಹಾರದ ಭಾಗವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ಕ್ಯಾಲ್ಸಿಯಂ ಚೆನ್ನಾಗಿ ಲಭಿಸುತ್ತದೆ. ದಂತ ಸಮಸ್ಯೆಗಳು ಬರದಂತೆ ಇರುತ್ತವೆ. ಅದೇ ರೀತಿ ಶೀತಲಪಾನೀಯಗಳು, ಸೋಡಾ, ಆಲ್ಕೋಹಾಲ್, ಜ್ಯೂಸ್‍ಗಳು, ಫಿಜ್ಜಿ ಡ್ರಿಂಕ್ಸ್ ಕುಡಿಯಬಾರದು. ನೀರು, ಫ್ರೂಟ್ ಸ್ಮೂತಿಗಳು, ಸಕ್ಕರೆ ಇಲ್ಲದ ಟೀ, ಕಾಫಿ ಕುಡಿಯಬಹುದು.

6. ಶುಗರ್ ಲೆಸ್ ಚೂಯಿಂಗ್ ಗಮ್

ಸಕ್ಕರೆ ಇಲ್ಲದ ಚೂಯಿಂಗ್ ಗಮ್‌ಗಳನ್ನು ಜಗಿದರೆ ದಂತಕ್ಷಯ ಕಡಿಮೆಯಾಗುತ್ತದೆ ಶುಗರ್‌ಲೆಸ್ ಚೂಯಿಂಗ್ ಗಮ್‌ನಲ್ಲಿ ಜೈಲಿಟಾಲ್ ಎಂಬ ಪದಾರ್ಥ ಇರುತ್ತದೆ. ಇದು ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ಮಾಡುತ್ತದೆ. ಇದರಿಂದ ಲಾಲಾರಸ ಹೆಚ್ಚು ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದರಿಂದ ಹಲ್ಲಿನ ತೊಂದರೆಗಳು ಕಂಡು ಬರುವುದಿಲ್ಲ ಎಂದು ಸಂಶೋಧನೆಗಳು ಹೇಳುತ್ತಿವೆ.

7. ಡೆಂಟಲ್ ಕೇರ್

ನಿತ್ಯ ಎರಡು ಕನಿಷ್ಠ 2 ನಿಮಿಷಗಳ ಕಾಲವಾದರೂ ಬ್ರಷ್ ಮಾಡಬೇಕು. ದಂತದ ಮೂಲೆಮೂಲೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಒಳಗೆ, ಹೊರಗೆ ಕ್ಲೀನ್ ಮಾಡಬೇಕು. ಫ್ಲಾಸಿಂಗ್ ಕಡ್ಡಾಯವಾಗಿ ಮಾಡಬೇಕು. ಇದು ದಂತದ ಸಂಧಿಗಳಲ್ಲಿ ಸಿಕ್ಕಿರುವ ಆಹಾರ ಪದಾರ್ಥವನ್ನು ತೊಲಗಿಸುತ್ತದೆ. ಮೌತ್ ವಾಷ್ ಬಳಸಬೇಕು. ಇದು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತದೆ. ಬಾಯಲ್ಲಿರುವ ಬ್ಯಾಕ್ಟೀರಿಯಾ ತೊಲಗಿಸುತ್ತದೆ.

8. ನಾರಿನಂಶ ವಿರುವ ಆಹಾರಗಳ ಸೇವನೆ;

ವಿಟಮಿನ್‌ಗಳೂ, ಮಿನರಲ್ಸ್ ಇರುವ ಆಹಾರವನ್ನು ನಿತ್ಯ ಸೇವಿಬೇಕು. ನಾರು ಹೆಚ್ಚಾಗಿರುವ ಇರುವ ಹಣ್ಣು, ತರಕಾರಿ ತಿನ್ನಬೇಕು. ಆಪಲ್ಸ್, ಬಾಳೆಹಣ್ಣು, ಮೊಳಕೆಬೀಜಗಳನ್ನು ತಿನ್ನಬೇಕು. ತೃಣಧಾನ್ಯಗಳು, ವಿಟಮಿನ್ ಬಿ, ಐರನ್ ಇರುವ ಆಹಾರ ತೆಗೆದುಕೊಳ್ಳಬೇಕು. ಮೆಗ್ನಿಷಿಯಂ, ವಿಟಮಿನ್ ಡಿ ಇರುವ ಆಹಾರ ಸಹ ನಿಯಮಿತವಾಗಿ ತೆಗೆದುಕೊಂಡರೆ ದಂತಕ್ಷಯ ಬರದಂತೆ ನೋಡಿಕೊಳ್ಳಬಹುದು.

9. ಗ್ರೀನ್ ಅಥವಾ ಕಪ್ಪು ಚಹಾವನ್ನು ಕುಡಿಯುವುದು;

Also read: ಪದೇ ಪದೇ ಡೆಂಟಿಸ್ಟ್ ಹತ್ರ ಹೋಗಿ ದುಡ್ಡು ಕೊಡೋ ಬದಲು ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಹಲ್ಲುಗಳನ್ನು ಗಟ್ಟಿಗೊಳಿಸಿ…

ಗ್ರೀನ್ ಟೀ ಮತ್ತು ಬ್ಲಾಕ್ ಟೀ ಕುಡಿಯುವುದರಿಂದ ಕ್ಯಾಮಿಲ್ಲಾ ಸಿನೆನ್ಸಿಸ್ ನಿಮ್ಮ ಹಲ್ಲುಗಳನ್ನು ಕಾಪಾಡುತ್ತದೆ. ಮತ್ತು ಹಲ್ಲಿನಲ್ಲಿ ಕಂಡು ಬರುವ ಕಪ್ಪು ಚುಕ್ಕೆಗಳು ಆಗದಂತೆ ತಡೆಯುತ್ತದೆ. ಇದನ್ನು ವಿಧಾನವನ್ನು ಸಿಹಿ ಆಹಾರ ಪದಾರ್ಥಗಳನ್ನು ತಿಂದ ನಂತರವೂ ಕುಡಿಯಬಹುದು.

10. ದಂತವೈದ್ಯರನ್ನು ಸಂಪರ್ಕಿಸುವುದು;

ದಂತ ಸಮಸ್ಯೆಗಳು ಇರಲಿ ಬಿಡಲಿ ದಂತವೈದ್ಯರನ್ನು ಆಗಾಗ ಭೇಟಿಯಾಗಿ ಸಲಹೆಗಳನ್ನು ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಔಷಧಿಗಳನ್ನು ಬಳಸಬೇಕು. ಅಗತ್ಯ ಎಂದುಕೊಂಡರೆ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದೆ ದಂತ ಸಮಸ್ಯೆಗಳು ಬರದಂತೆ ಇರುತ್ತದೆ. ಡೆಂಟಿಸ್ಟ್‌ಗಳ ಬಳಿ ಬಾಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಇದರಿಂದ ದಂತಕ್ಷಯ ಬರುವ ಅವಕಾಶಗಳು ತುಂಬಾ ಕಡಿಮೆಯಾಗುತ್ತವೆ. ಕನಿಷ್ಠ ವರ್ಷದಲ್ಲಿ ಎರಡು ಸಲವಾದರೂ ದಂತವೈದ್ಯರನ್ನು ಸಂಪರ್ಕಿಸಬೇಕು.