ಈ ಹತ್ತು ಬುದ್ದಿವಂತಿಕೆ ತಂತ್ರಗಳು ನಿಮಗೆ ತಿಳಿದಿದ್ದರೆ, ಜೀವನದಲ್ಲಿ ಬೇಗ ಯಶಸ್ಸನ್ನು ಕಾಣುತ್ತೀರಿ..

0
1053

ಈ ೧೦ ಬುದ್ಧಿವಂತ ಮಾನಸಿಕ ತಂತ್ರಗಳನ್ನು ಪ್ರತಿಯೊಬ್ಬರು ತಿಳಿದಿರಬೇಕು.

೧.ಮೌನ :


ನೀವು ಯಾರನ್ನಾದರೂ ಪ್ರಶ್ನೆಯನ್ನು ಕೇಳಿದರೆ ಮತ್ತು ಅವರು ಅದಕ್ಕೆ ಉತ್ತರಿಸದ್ದಿದರೆ, ಕಣ್ಣಿನ ಸಂಪರ್ಕವನ್ನು ಹಿಡಿದಿಟ್ಟುಕೊಳ್ಳಿ ಮತ್ತು ಮೌನವಾಗಿ ಇರಬೇಕು.

೨.ಚೇವಿಂಗ್ ಗಮ್ ಜಗಿಯಿರಿ :


ನೀವು ಚೇವಿಂಗ್ ಗಮ್ ಜಗಿಯುವುದರಿಂದ ನಿಮ್ಮ ಮೆದುಳು ನಿಮ್ಮ ಜಗೀತದ ಕಡೆ ಗಮನಹರಿಸಿ ನಿಮಗಿರುವ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

೩.ನಗು :


ನೀವು ಹೆಚ್ಚು ನಗುವುದರಿಂದ ನಿಮ್ಮವರನ್ನು ಸಹಜ ಪ್ರವೃತ್ತಿಯಿಂದ ನೋಡುತ್ತೀರಿ, ಇದರಿಂದ ಅವರಿಗು ಮತ್ತು ನಿಮಗೂ ಖುಷಿಯಾಗುತ್ತದೆ.

೪.ನಿಮ್ಮನ್ನು ಶಾಂತವಾಗಿರಿಸಿಕೊಳ್ಳಿ :


ನೀವು ಶಾಂತವಾಗಿರುವುದರಿಂದ, ನಿಮಗೆ ಬೇರೆಯವರ ಜೊತೆ ವಾದ ಮಾಡುವಾಗ ತುಂಬ ಸಹಾಯವಾಗುತ್ತದೆ, ಇದರಿಂದ ಮಾತಿನ ಕಡೆ ಹೆಚ್ಚು ಏಕಾಗ್ರತೆ ಕೊಡಬಹುದು.

೫.ನಿಮ್ಮ ವರ್ತನೆ ಮತ್ತು ನಿಮ್ಮ ಭಾವನೆ :


ನೀವು ಬೇರೆಯವರ ಜೊತೆ ಯಾವ ರೀತಿ ವರ್ತಿಸುತ್ತೀರ, ಅದೇ ರೀತಿ ನಿಮಗೆ ಅನುಭವ ಸಿಗುತ್ತದೆ ಅದರಿಂದ ಎಲ್ಲರನ್ನು ನಗುನಗುತ್ತಾ ಮಾತನಾಡಿಸೋಣ.

೬.ನ೦ಬಿಕೆ :


ಯಾವುದೇ ಕೆಲಸ ಮಾಡಿದರು ಅದು ನಿಮ್ಮಿಂದ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಅಥವಾ ನಂಬಿಕೆಯಿಂದ ಮಾಡಿರಿ.

೭.ಸಂದರ್ಶನ ಮಾಡುವವರು ಮಾನವರೇ :


ಸಂದರ್ಶನಕ್ಕೆ ಹೋಗುವಾಗ, ಸಂದರ್ಶನ ಮಾಡುವವರು ಮಾನವರೇ ಅವರು ಸಹ ನಮ್ಮ ಹಾಗೆಯೇ ಯೋಚಿಸುತ್ತಾರೆ ಎಂದುಕೊಂಡು ಅವರನ್ನು ನಿಮ್ಮ ಹಳೆಯ ಸ್ನೇಹಿತರಿಗೆ ಹೋಲಿಸಿ ಆರಾಮಗಿರಿ.

೮.ನಡವಳಿಕೆ :


ನಿಮ್ಮ ನಡವಳಿಕೆಯಿಂದ ಜನ ನಿಮ್ಮನ್ನು ಗುರುತಿಸುತ್ತಾರೆ, ಆದ್ದರಿಂದ ನಿಮ್ಮ ನಡವಳಿಕೆ ಇನ್ನೊಬ್ಬರು ಪಾಲಿಸುವ ಹಾಗಿರಲಿ.

೯.ದೊಡ್ಡದರ ಬಗ್ಗೆ ಯೋಚಿಸಿರಿ :


ಯಾವುದೇ ವ್ಯಕ್ತಿಯ ಬಳಿ ಸಹಾಯ ಕೇಳುವಾಗ ಯಾವಾಗಲು ದೊಡ್ಡ ಸಹಾಯವನ್ನು ಕೇಳಿ, ಜನ ದೊಡ್ಡ ಸಹಾಯ ಕೇಳಿದಾಗ ಕೊನೆ ಪಕ್ಷ ತಮ್ಮಿಂದಾಗುವ ಸಣ್ಣ ಸಹಾಯ ಮಾಡಲು ಒಪ್ಪುತ್ತಾರೆ.

೧೦.ವಿನೋದದಿಂದಿರಿ :


ಯಾವಾಗಲು ನಿಮ್ಮನ್ನು ಇಷ್ಟಪಡುವವರ ಜೊತೆ ಒತ್ತಡ ರಹಿತವಾಗಿ ವಿನೋದದಿಂದಿರಿ, ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡಕ್ಕೂ ಒಳ್ಳೆಯದು.