ಮನೇಲಿ ಅರಿಶಿನ ಇದೆಯಾ? ಹಾಗಿದ್ರೆ ಕೂಡಲೇ ಈ ಟಿಪ್ಸ್ ಫಾಲೋ ಮಾಡಿ ಒಳ್ಳೆ ಅರೋಗ್ಯ ನಿಮ್ಮದಾಗಿಸಿಕೊಳ್ಳಿ..

0
1755

ಅರಿಶಿನದಲ್ಲಿ ನಾನಾ ವಿಧವಾದ ರೋಗಗಳನ್ನು ಗುಣಪಡಿಸುವ ಶಕ್ತಿ ಅಡಗಿದೆ. ಮಾರುಕಟ್ಟೆಯಲ್ಲಿ ಸಿಗುವ ಅರಿಶಿಣಕ್ಕಿಂತ ಅರಿಶಿನ ಕೊಂಬುಗಳನ್ನು ಕುಟ್ಟಿ ನುಣ್ಣಗೆ ಪುಡಿ ಮಾಡಿ ಬಳಸುವುದು ಸರ್ವ ಶ್ರೇಷ್ಠ.

ಅರಿಶಿನವು ಜೀರ್ಣಕಾರಕ,ಕ್ರಿಮಿನಾಶಕ, ಕಫ ನಿವಾರಕ ಮತ್ತು ರಕ್ತಶೋಧಕವಾಗಿದೆ. ಅಡುಗೆಯಲ್ಲಿ ಅರಿಶಿನವನ್ನು ಬಳಸುವುದರಿಂದ ಆಹಾರ ಸುಗಂಧಯುಕ್ತವಾಗುವುದಲ್ಲದೆ ಸುಲಭವಾಗಿ ಜೀರ್ಣವಾಗುವುದು.

೧) ಶೀತದಿಂದ ಗಂಟಲು ನೋವಾಗಿದ್ದರೆ, ಗಂಟಲಿನ ಹೊರಭಾಗಕ್ಕೆ ಅರಿಶಿನ ಪುಡಿ ಮತ್ತು ಬೆಲ್ಲವನ್ನು ಹಾಲಿನೊಂದಿಗೆ ನುಣ್ಣಗೆ ಅರೆದು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

೨) ಕಾಮಾಲೆ ರೋಗವಿರುವರು ೧೦ ಗ್ರಾಮ್ನಷ್ಟು ಅರಿಶಿನ ಪುಡಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಬೆರೆಸಿ ಸತತ ೭ ದಿನಗಳ ಕಾಲ ಬರಿಹೊಟ್ಟೆಯಲ್ಲಿ ಸೇವಿಸಿದರೆ ವ್ಯಾಧಿ ನಿಯಂತ್ರಣಕ್ಕೆ ಬರುವುದು.

೩) ಮಜ್ಜಿಗೆಯೊಂದಿಗೆ ಅರಿಶಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ನೂಲವ್ಯಾಧಿ, ರಕ್ತಭೇದಿ, ಅತಿಸಾರ, ಸಂಧಿವಾತ , ಚರ್ಮರೋಗಗಳು ನಿಯಂತ್ರಣಕ್ಕೆ ಬರುವವು.

೪) ಅರಿಶಿನ ಪುಡಿಯನ್ನು ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಅಂಗಾಂಗಗಳಿಗೆ ಹಚ್ಚಿ ಸ್ನಾನ ಮಾಡಿದರೆ ಚರ್ಮರೋಗಗಳು ನಿವಾರಣೆಯಾಗುವುದು.

೫) ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿ ಆ ಹೊಗೆಯನ್ನು ಮೂಗಿನ ಮೂಲಕ ಸೇವಿಸಿದರೆ ನೆಗಡಿ ಕಡಿಮೆಯಾಗುವುದು.

೬) ನುಣುಪಾದ ಅರಿಶಿಣದಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸ್ವಲ್ಪ ಭಾಗ ಸೇವಿಸಿ ಮತ್ತುಳಿದ ಭಾಗವನ್ನು ಚರ್ಮಕ್ಕೆ ಲೇಪಿಸಿದ್ದಲ್ಲಿ ಚರ್ಮವ್ಯಾಧಿ ಗುಣವಾಗುತ್ತದೆ.

೭) ಅರಿಶಿನ ಮತ್ತು ಶ್ರೀಗಂಧವನ್ನು ಹಾಲಿನ ಕೆನೆಯೊಂದಿಗೆ ಮಿಶ್ರಮಾಡಿ ಹಚ್ಚಿಕೊಂಡರೆ ಮೊಡವೆಗಳು ಮಾಗುತ್ತವೆ. ಚರ್ಮದ ಕಾಂತಿ ಹೆಚ್ಚುತ್ತದೆ.

೮) ಕಜ್ಜಿ, ತುರಿಕೆ, ನಾವೇ,,ದದ್ದು ಮುಂತಾದ ಚರ್ಮರೋಗಗಳಿಗೆ ಅರಿಶಿನ ಮತ್ತು ಗರಿಕೆ ಹುಲ್ಲನ್ನು ಗೋಮೂತ್ರದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಹಚ್ಚುವುದರಿಂದ ಉತ್ತಮ ಗುಣ ಕಂಡುಬರುವುದು.

೯) ಹಲ್ಲುನೋವು ಮತ್ತು ದಂತಕ್ಷಯ್ ನಿವಾರಣೆಗೆ ಅರಿಶಿನದ ಕೊಂಬನ್ನು ಸುತ್ತು, ಆ ಭಸ್ಮದೊಂದಿಗೆ ಉಪ್ಪು ಸೇರಿಸಿ ಹಲ್ಲು ತಿಕ್ಕುವುದರಿಂದ ಸಮಸ್ಯೆಗೆ ಪರಿಹಾರ ದೊರಕುವುದು.

೧೦) ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಇದ್ದಲ್ಲಿ ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಕಾಳು ಮೆಣಸಿನ ಪುಡಿ ಮಿಶ್ರ ಮಾಡಿ ಸೇವಿಸಿದ್ದಲ್ಲಿ ಶಮನವಾಗುವುದು.