ಬರಿ 10 ರೂ.ಗೆ ಸೀರೆ; ಮಾಲ್ ಎದುರಿಗೆ ಬರೋಬರಿ 2 ಕಿಮೀ ಸಾಲಿನಲ್ಲಿ ನಿಂತ ಸೀರೆ ಪ್ರಿಯರು ಅಂಗಡಿಯಲ್ಲೇ ಬಡಿದಾಡಿಕೊಂಡ ಮಹಿಳೆಯರು..

0
743

ಸೀರೆ ಎಂದರೆ ಮಹಿಳೆಯರಿಗೆ ಪಂಚ ಪ್ರಾಣ. ಅದನ್ನು ಉಡುವುದು ಕಡಿಮೆಯಾದರೂ ಖರೀದಿ ಏನು ಕಡಿಮೆಯಾಗಿಲ್ಲ. ಅದಕ್ಕಾಗಿ ಸಾವಿರಾರು ರೂ. ಕೊಟ್ಟು ಸೀರೆ ಖರೀದಿಸುತ್ತಾರೆ. ಅಂತಹದ್ರಲ್ಲಿ ಬರಿ 10 ರೂ ಗೆ ಒಂದು ಸೀರೆ ಅಂದ್ರೆ ನಾರಿಯರು ಸುಮ್ಮನೆ ಇರುವುದು ಉಂಟೆ? ಇಡಿ ಮಾಲ್-ನಲ್ಲಿ ಇರುವ ಸೀರೆಗಳನ್ನು ಕೊಟ್ಟರು ಇನ್ನೂ ಒಂದು ಕೊಡಿ ಅನ್ನುವ ಮಹಿಳೆಯರು ಸಿಕ್ಕ ಅವಕಾಶವನ್ನು ಯಾಕೆ ಬಿಡುತ್ತಾರೆ. ಇಂತಹದೆ ಅವಕಾಶವನ್ನು ನೀಡಿದ ಮಾಲ್-ನಲ್ಲಿ ಏನೇನು ನಡೆಯಿತು ಅಂತ ನೋಡಿ.

ಬರಿ ಹತ್ತು ರೂ ಗೆ ಸೀರೆ?

ಹೌದು ಎಂಸಿಆರ್​ ಮಾಲ್​ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್​ ನೀಡಲಾಗಿತ್ತು. ಅದೇನೆಂದರೆ, ‘10 ರೂಪಾಯಿಗೆ ಒಂದು ಸೀರೆ!’ ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಈ ವಿಷಯ ತಿಳಿಯುದೆ ತಡ ಮನೆಯಲ್ಲಿ ಕೆಲಸ ಮಾಡುತ್ತಿದ್ದ, ಉದ್ಯೋಗಕ್ಕೆ ಹೊರಟ, ಗಂಡನ ಜೊತೆ ಜಗಳವಾಡಿ ಸುಮ್ಮನೆ ಹಾಸಿಗೆ ಹಿಡಿದ, ಮಕ್ಕಳನ್ನು ಶಾಲೆಗೇ ಕಳುಹಿಸಲು ಬಂದ, ಯಜಮಾನರ ಮನೆಗೆ ಕೆಲಸಕ್ಕೆ ಬಂದ, ಬೇರೆ ಬೇರೆ ಕಂಪನಿ ಗದ್ದೆಗೆ ಕೆಲಸಕ್ಕೆ ಹೊರಟ ಮಹಿಳೆಯರು ಎದ್ನೋ ಬಿದ್ನೋ ಅನ್ನೋ ಅಂತ ಲೆಕ್ಕಿಸದೆ ಪಿಟಿ ಉಷಾ -ನನ್ನು ಹಿಂದಿಕ್ಕುವ ರೇಂಜ್ ನಲ್ಲಿ ಮಾಲ್ ನತ್ತ ಓಡಿಬಂದ ಮಹಿಳೆಯರನ್ನು ನೋಡಿದ ಜನರು ಏನ್ ಆಗಿದೆ ಅಂತ ಅವರ ಹಿಂದೇನೆ ಓಡಿ ಓಡಿ ಬಂದು ನೋಡಿದರೆ ಸೀರೆಯ ಆಫರ್ ಇದನ್ನು ತಿಳಿದ ಜನರು ನಮಗೂ ಒಂದು ಇರಲಿ ಎಂದು ಅವರು ಸಾಲಿನಲ್ಲಿ ನಿಂತಿದ್ದಾರೆ.

ಮಾಲ್ -ನಲ್ಲೆ ಮಹಿಳೆಯರು ಡಿಸುಂ ಡಿಸುಂ:

Also read: 80-90 ದಶಕಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿದೆ ಡಬಲ್ ಡೆಕ್ಕರ್ ಬಸ್-ಗಳಿಗೆ ಮತ್ತೆ ಜೀವ ಬಂದಿದೆ!!!

ಎಂಸಿಆರ್​ ಮಾಲ್​ನಲ್ಲಿ ನೀಡಲಾಗಿದ್ದ ಆಫರ್ ತಿಳಿದ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕಿಯರು ಖರೀದಿಗೆ ಬಂದಿದ್ದರು. ನಾಮುಂದು-ತಾಮುಂದು ಎಂದು ನುಗ್ಗುತ್ತಿದ್ದರು. ‘ನಾನು ನೋಡಿದ ಸೀರೆಗೆ ಅವಳು ಮೊದಲು ಕೈ ಹಾಕಿದಳು’ ಅದು ನಾನು ಮೊದಲೇ ಆರಿಸಿದ್ದೆ, ಮತ್ತು ಲೈನ್-ನಲ್ಲಿ ನನ್ನ ಮುಂದೆ ಬಂದು ನಿಂತಳು ಎಂದು ಬೈದುಕೊಳ್ಳುತ್ತಾ ಮಾಲ್ ಒಳಗೆ ಜಗಳಕ್ಕೆ ಇಳಿದರು ಅಲ್ಲೇ ಬಡಿದಾಡಿಕೊಂಡರು, ಇಷ್ಟೆಲ್ಲಾ ನಡೆಯುತ್ತಿದರು ಸುಮಾರು 2 ಕಿಮೀ ಸಾಲು ಬೆಳೆಯುತ್ತಾನೆ ಇತ್ತು. ಇದನ್ನು ನೋಡಿದ ಅಂಗಡಿ ಮಾಲೀಕರು ಬೆರಗಾಗಿ ಹೋದರು ಇಷ್ಟಕ್ಕೆ ನಿಲ್ಲದ ಸೀರೆಯ ಖರೀದಿ ಪೊಲೀಸ್ ಮೆಟ್ಟಿಲೇರಿತು.

ಆಫರ್ ಸೀರೆ ಖರೀದಿ ಪೊಲೀಸ್​ ಠಾಣೆಗೆ?

ಕಡಿಮೆ ಬೆಲೆಯಲ್ಲಿ ಸೀರೆ ಕೊಳ್ಳಲು ಬಂದಿದ ಮಹಿಳೆಯರ ಸಂಖ್ಯೆ ಬೆಳೆಯುತ್ತಾನೆ ಹೋಯಿತು. ಒಂದೇ ಬಾರಿ ಇಷ್ಟೊಂದು ಜನರು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಅನೇಕರು ಗಾಯಗೊಂಡಿದ್ದಾರೆ. ಕೆಲವರಂತೂ. 10 ರೂ. ಸೀರೆ ಕೊಂಡುಕೊಳ್ಳಲು ಬಂದು ಆಸ್ಪತ್ರೆ ಖರ್ಚಿಗೆ ಸಾವಿರ ರೂಪಾಯಿ ವ್ಯಯಿಸಿದೆನಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸೀರೆಯು ಇಲ್ಲ ಮೈಕೈ ನೆಟ್ಟಗೂ ಇಲ್ಲ ಎಂದು ಕಣ್ಣಿರು ಹಾಕುತ್ತಿದ್ದಾರೆ. ಇನ್ನೂ ಈ ಇದೆ ಸರಿಯಾದ ಸಮಯ ಎಂದು ಈ ಅವಕಾಶವನ್ನು ಕಳ್ಳರು ಸದ್ಬಳಕೆ ಮಾಡಿಕೊಂಡಿದ್ದಾರೆ. ಸೀರೆ ಕೊಂಡುಕೊಳ್ಳುವ ನೆಪದಲ್ಲಿ ಮಾಲ್​ಗೆ ನುಗ್ಗಿದ ಖದೀಮರು, ಚಿನ್ನದ ಸರ, ಪರ್ಸ್​, ಮೊಬೈಲ್​, ಡೆಬಿಟ್​ ಕಾರ್ಡ್​​ಗಳನ್ನು ಕದ್ದಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರು ಕಡಿಮೆ ಬೆಲೆಗೆ ಸಿಗುವ ವಸ್ತುಗಳಿಗೆ ಮಾರು ಹೋಗಿ ಖರೀದಿಸುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು.

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..