30 ರ ಹರೆಯಕ್ಕೆ ಕಾಲಿಡುವ ಮುನ್ನ ಮುಂದಿನ ಜೀವನ ಭದ್ರತ್ರೆಗಾಗಿ ಪ್ರತಿಯೊಬ್ಬರು ಯೋಚಿಸಲೇಬೇಕಾದ ಉಳಿತಾಯದ ಯೋಜನೆಗಳು..

0
2790

ಹತ್ತರ ಹರೆಯಕ್ಕೆ ಬಂದಮೇಲೆ 20ರ ಏರು ಇಪ್ಪತ್ತರ ಏರಿನಲ್ಲಿ ಮೂವತ್ತಕ್ಕೆ ಪಾರು.. ಎಂಬ ಗಾದೆಯಂತೆ ಪುರುಷ ಮತ್ತು ಮಹಿಳೆಯರು ತಮ್ಮ ಯವ್ವನ 30 ಕ್ಕೆ ಪಾದಾರ್ಪಣೆ ಮಾಡಿದ ನಂತರ. ಮುಂದಿನ ಜೀವನಕ್ಕೆ ಸರಿಯಾದ ಕ್ರಮದಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲೇಬೇಕು. ಇಲ್ಲವಾದರೆ ಜೀವನದ ದಾರಿ ದುಬಾರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ 30 ವರ್ಷದ ನಂತರ ಜೀವನದ ಜವಾಬ್ದಾರಿ ಹೆಚ್ಚಾಗಲಿದೆ. ಈ ವಯಸ್ಸು ಸಂಪಾದನೆಯ ವಯಸ್ಸು ಎಂದೇ ಹೇಳಬಹುದು. ಹಾಗಾದ್ರೆ ಯಾವರೀತಿಯ ಜೀವನದ ಭದ್ರತೆಯನ್ನು ಹಾಕಿಕೊಳ್ಳಬೇಕು? ಹೇಗೆ ಉಳಿತಾಯ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ ನೋಡಿ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವೂ 30ನೇ ವಯಸ್ಸಿನ ತಕ್ಕಡಿಯಲ್ಲಿದ್ದರೆ ನಿಮಗಾಗಿ ಕೆಲ ಹಣಕಾಸು ಟಿಪ್ಸ್‌ಗಳು ಇಲ್ಲಿವೆ ನೋಡಿ.

1. ಜೀವನ ಭದ್ರತೆಗೆ ಹೆಚ್ಚು ಹೆಚ್ಚು ಪಾಲಿಸಿ ಮಾಡಿಸಿ:

ಏನೆಮಾಡಿ ನಿಮ್ಮನು ಅವಲಂಬಿಸಿದ ಕುಟುಂಬಸ್ಥರಿಗೆ ವಿಮಾ ಸುರಕ್ಷೆ ಒದಗಿಸುವುದು ಅತಿ ಪ್ರಮುಖವಾಗಿದೆ. ಹಾಗೆಯೇ ಮಕ್ಕಳು ಅಥವಾ ವೃದ್ಧ ಪಾಲಕರ ಸುರಕ್ಷತೆಗಾಗಿ ವಿಮೆ ಪಡೆಯಬೇಕಾಗುತ್ತದೆ. ಆದರೆ ಸಮಯ ಕಳೆದಂತೆ ವ್ಯಕ್ತಿಯೋರ್ವ ತನ್ನ ಎಲ್ಲ ಕುಟುಂಬಸ್ಥರಿಗೂ ವಿಮಾ ಸುರಕ್ಷೆ ದೊರಕುವಂತೆ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಬೇಕಾಗುತ್ತದೆ. ಆದಾಗ್ಯೂ ಆದಷ್ಟು ಬೇಗ ವಿಮೆ ಪಡೆಯುವುದು ಉತ್ತಮ. ವಯಸ್ಸು ಕಡಿಮೆ ಇರುವಾಗ ಕಡಿಮೆ ಖರ್ಚಿನಲ್ಲಿ ವಿಮಾ ಸೌಲಭ್ಯ ಮಾಡಿಸಬಹುದು. ಆದರೆ ವಯಸ್ಸು ಹೆಚ್ಚಾದಂತೆಲ್ಲ ಈ ಖರ್ಚು ಹೆಚ್ಚಾಗುತ್ತದೆ.

Also read: ಪ್ಯಾನ್ ಕಾರ್ಡ್​ ನಿಯಮದಲ್ಲಿ ಆದಾಯ ತೆರಿಗೆ ಇಲಾಖೆ ತಂದ ಬದಲಾವಣೆ: Pan Card ಪಡೆಯುವ ಮುನ್ನ ಈ ಮಾಹಿತಿ ನೋಡಿ..

2. ಹಣ ಹೂಡಿಕೆಯಲ್ಲಿ 10 ಬಾರಿ ಯೋಚನೆಮಾಡಿ:

ಸಮಯಾವಧಿಯಲ್ಲಿ ಉಳಿತಾಯ ಮಾಡಿ ಹೂಡಿಕೆ ಮಾಡಿದರೆ ಮಾತ್ರ ಸಂಪತ್ತು ಸೃಷ್ಟಿಸಲು ಸಾಧ್ಯ. ಆದರೆ ಹಾಗಂತ ಹೆಚ್ಚು ಬಡ್ಡಿಯ ಆಮಿಷ ಒಡ್ಡಿ ಹಣ ದೋಚುವ ವಂಚಕ ಸಂಸ್ಥೆಗಳಲ್ಲಿ ಎಂದಿಗೂ ಹಣ ಹಾಕಬಾರದು. ವಾರೆನ್ ಬಫೆಟ್ ಹೇಳುವಂತೆ- ಯಾರಾದರೂ ತಕ್ಷಣದಲ್ಲಿ ನಿಮ್ಮ ಹಣವನ್ನು ಬೆಳೆಸಿಕೊಡುತ್ತೇನೆ ಎಂದಲ್ಲಿ ನೀವೂ ತಕ್ಷಣ ‘ಬೇಡ’ ಎಂದು ಬಿಡಿ ಎಂಬುದು ಯಾವಾಗಲೂ ಸತ್ಯವಾಗಿದೆ. ಹಾಗೆಯೇ ವಿವಿಧ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ರಿಸ್ಕ್ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

3. ಇರುವ ಸಂಪತ್ತನ್ನು ಹೆಚ್ಚಿಸಿಕೊಳ್ಳಿ:

30ನೇ ವಯಸ್ಸಿನಲ್ಲಿ ಹಣಕಾಸು ಬಜೆಟ್ ಅನ್ನು ಪುನರ್ ವಿಮರ್ಶೆ ಮಾಡಬೇಕಾಗುತ್ತದೆ. 20ನೇ ವಯಸ್ಸಿನಲ್ಲಿ ತಯಾರಿಸಿದ ಬಜೆಟ್ ಮಾದರಿ ಈಗ ಸೂಕ್ತವಾಗಲಾರದು. ಜೀವನದ ಆದ್ಯತೆಗಳು ಬದಲಾಗಿರುವುದರಿಂದ ಬಜೆಟ್ ಸಹ ಬದಲಾಗುವುದು ಅನಿವಾರ್ಯ. ಹೊಸ ಮನೆ ಕಟ್ಟುವುದು, ಇನ್ನಾವುದೋ ಬಿಸಿನೆಸ್ ಆರಂಭಿಸುವುದು ಅಥವಾ ಮಕ್ಕಳ ಮದುವೆ ಖರ್ಚು ಹೀಗೆ ಅನೇಕ ವಿಷಯಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಗ್ಯಾಜೆಟ್‌ಗಳ ಮೇಲೆ ಹೆಚ್ಚಿನ ಖರ್ಚು ಮಾಡುವುದು ಅಥವಾ ಶೋಕಿ ವಸ್ತುಗಳನ್ನು ಖರೀದಿಸುವ ಮುನ್ನ ವಿಚಾರ ಮಾಡಿ ಮುಂದುವರಿಯಬೇಕಾಗುತ್ತದೆ.

4. ಹಂತ ಹಂತವಾಗಿ ಸಂಪೂರ್ಣ ಸಾಲ ತೀರಿಸಿ:

ಪ್ರತಿತಿಂಗಳು ಇಎಂಐ ರೂಪದಲ್ಲಿ ನಿಮ್ಮ ಆದಾಯವನ್ನು ಕಬಳಿಸುತ್ತಿರುವ ಸಾಲಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಿ. ಇಂಥ ಸಾಲಗಳನ್ನು ಬೇಗನೆ ತೀರಿಸುವುದರಿಂದ ಬಡ್ಡಿ ಕಟ್ಟುವುದು ಉಳಿತಾಯವಾಗುತ್ತದೆ. ಅಲ್ಲದೆ ದೀರ್ಘಾವಧಿಯಲ್ಲಿ ಸಾಕಷ್ಟು ಹಣವನ್ನು ನೀವು ಉಳಿಸಿದಂತಾಗುತ್ತದೆ.

5. ಆಪತ್ತಿನ ಸಮಯಕ್ಕೆ ಕೆಲ ಹಣ ಇಟ್ಟುಕೊಳ್ಳಿ:

ಮುಂದಿನ ಭವಿಷ್ಯದಲ್ಲಿ ಎದುರಾಗಬಹುದಾದ ನಿರುದ್ಯೋಗ, ತುರ್ತು ಆರೋಗ್ಯ ಚಿಕಿತ್ಸೆಗೆ, ಇತರೆ ಖರ್ಚುಗಳಿಗೆ ಮೊದಲೇ ವಿಚಾರ ಮಾಡಿ ತುರ್ತು ನಿಧಿಯೊಂದನ್ನು ಯಾವಾಗಲೂ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ 6 ತಿಂಗಳ ಜೀವನಾವಶ್ಯಕ ಖರ್ಚಿಗಾಗುವಷ್ಟು ಹಣವನ್ನು ತುರ್ತು ನಿಧಿಯಾಗಿ ಇಡಬೇಕು ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ. ಇದಕ್ಕಾಗಿ ಹಣ ಉಳಿತಾಯ ಆರಂಭಿಸಿ, ಇದನ್ನೊಂದು ಪ್ರತ್ಯೇಕ ಖಾತೆಯಲ್ಲಿಯೇ ಇಡುವುದು ಸೂಕ್ತ.

Also read: ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ; ತಿಂಗಳಿಗೆ 518 ರೂ. ಪಾವತಿಸಿದರೆ ಸಿಗಲಿವೆ ಹಲವಾರು ಲಾಭಗಳು..!

6. ಮುಂದಿನ ರಿಟೈರಮೆಂಟ್‌ ನಂತರ ವಯಕ್ತಿಕ ಜೀವನಕ್ಕೆ ಹಣ ಮಿಸಲಿಡಿ:

ದುಡಿಯುವ ವಯಸ್ಸಿನಲ್ಲಿ ಹಣದ ಚಿಂತೆ ಇರುವುದಿಲ್ಲ, ನಿವೃತ್ತರಾದ ನಂತರ ಆದಾಯಕ್ಕಾಗಿ ಏನು ಮಾಡುವುದು ಎಂದು ಚಿಂತಿಸುವಂತಾಗಬಾರದು. ಅದಕ್ಕಾಗಿ ಆದಷ್ಟೂ ಮೊದಲೇ ಯೋಜನೆ ತಯಾರಿಸಬೇಕು. ವೃತ್ತಿ ಜೀವನ ಆರಂಭವಾಗುತ್ತಲೇ ಆದಾಯದ ಕೆಲ ಭಾಗವನ್ನು ನಿವೃತ್ತ ಜೀವನಕ್ಕಾಗಿ ಹೂಡಿಕೆ ಮಾಡುತ್ತ ಸಾಗಬೇಕು. ಇನ್ನು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ ಭವಿಷ್ಯದಲ್ಲಿ ಬದುಕಿಗೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ಸಹ ಲೆಕ್ಕಾಚಾರ ಹಾಕಿಟ್ಟುಕೊಳ್ಳುವುದು ಸೂಕ್ತ.

7. ಸರಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:

ನಿಮಗೆ ಹೆಣ್ಣು ಮಗಳಿದ್ದಲ್ಲಿ ಅವಳಿಗಾಗಿ ಸರಕಾರಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪಡೆದುಕೊಳ್ಳಬಹುದು. ವರ್ಷಕ್ಕೆ ಗರಿಷ್ಠ ೧.೫ ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಶೇ. 8.6 ಬಡ್ಡಿ ದರದಲ್ಲಿ ಆದಾಯ ಪಡೆಯಬಹುದು. ಜೊತೆಗೆ ಹೂಡಿಕೆ ಮೊತ್ತ, ಗಳಿಸಿದ ಬಡ್ಡಿ ಹಾಗೂ ಪಕ್ವತಾ ಮೊತ್ತ ಹೀಗೆ ಎಲ್ಲದರ ಮೇಲೂ ಕಾಯ್ದೆ ೮೦ಸಿ ಪ್ರಕಾರ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

8. ಸಂಪತ್ತು ಸೃಷ್ಟಿಸಿ:

ಈಗಿನ ದಿನಮಾನಗಳಲ್ಲಿ ಸಾಲ ಪಡೆಯುವುದು ಅತಿ ಸುಲಭವಾಗಿದೆ. ಆದರೆ ಸಾಲ ಪಡೆಯುವ ಮುನ್ನ ನೂರು ಬಾರಿ ವಿಚಾರ ಮಾಡಬೇಕಾಗುತ್ತದೆ. ಸುಮ್ಮನೆ ಸಾಲ ಪಡೆದು ಅದಕ್ಕೆ ದುಬಾರಿ ಬಡ್ಡಿ ತೆರುವುದು ಜಾಣತನವಲ್ಲ. ಅದರಲ್ಲೂ ಯಾವುದೋ ದಿನ ಬಳಕೆಯ ವಸ್ತುಗಳನ್ನು ಸಾಲ ಮಾಡಿ ಕೊಳ್ಳುವುದು ಸರಿಯಲ್ಲ. ನಿಮ್ಮ ಆದಾಯಯವನ್ನು ಸೂಕ್ತವಾಗಿ ವಿನಿಯೋಜಿಸಿ ಅದರಿಂದ ಭವಿಷ್ಯದಲ್ಲಿ ಹೇಗೆ ಉತ್ತಮ ಆದಾಯ ಪಡೆಯಬಹುದು ಎಂಬ ಬಗ್ಗೆ ಯೋಚಿಸಿ, ಯೋಜನೆ ಹಾಕಿಕೊಳ್ಳಿ.

9. ಜೀವನದ ಜೊತೆಗಾರರೊಂದಿಗೆ ಚರ್ಚೆ ಮಾಡಿ:

Also read: ಎಷ್ಟೇ ಪ್ರಯತ್ನ ಪಟ್ಟರು ಮದ್ಯಪಾನ ಬಿಡಲು ಸಾದ್ಯವಾಗುತ್ತಿಲ್ವ? ಹಾಗಾದ್ರೆ ಇದೊಂದು ಮಾಡಿ ನೋಡಿ ಶಾಶ್ವತವಾಗಿ ಮದ್ಯಪಾನ ಮುಕ್ತರಾಗುತ್ತಿರ..

ನೀವು ವಿವಾಹಿತರಾಗಿದ್ದಲ್ಲಿ ಹಣಕಾಸು ಯೋಜನೆಗಳ ಕುರಿತು ನಿಮ್ಮ ಸಂಗಾತಿಯೊಂದಿಗೆ ಸಮಗ್ರವಾಗಿ ಚರ್ಚಿಸಿ. ಇಬ್ಬರೂ ಆದಾಯ ಹಾಗೂ ಖರ್ಚುಗಳನ್ನು ಸೂಕ್ತವಾಗಿ ನಿಭಾಯಿಸಲು ಇದರಿಂದ ಸಹಾಯವಾಗುತ್ತದೆ. ಜೊತೆಗೆ ಹಣಕಾಸು ಗುರಿಗಳನ್ನು ನಿರ್ಧರಿಸಿ ಅದಕ್ಕೆ ತಕ್ಕ ಯೋಜನೆ ರೂಪಿಸಿಕೊಳ್ಳಿ. ಆದಷ್ಟೂ ಜೊತೆಯಾಗಿಯೇ ಹಣಕಾಸು ಯೋಜನೆಗಳನ್ನು ತಯಾರಿಸುವುದು ಸೂಕ್ತ.

10. ಹೂಡಿಕೆಗಳನ್ನು ಆಗಾಗ ಪರೀಕ್ಷಿಸಿ:

ಕನಿಷ್ಠ ತ್ರೈಮಾಸಿಕಕ್ಕೊಮ್ಮೆಯಾದರೂ ಹೂಡಿಕೆಗಳನ್ನು ಪರಿಶೀಲಿಸಿ. ಹೂಡಿಕೆಯ ಮೊದಲ 5 ತಿಂಗಳ ಅವಧಿಯಲ್ಲಿ ನಿರೀಕ್ಷಿತಿ ಪ್ರತಿಫಲ ಬಂದಿಲ್ಲವೆಂದಾಗ ಆತಂಕಗೊಳ್ಳಬೇಡಿ. ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಬೆಳೆಯಲು ಕನಿಷ್ಠ ವರ್ಷವಾದರೂ ಬೇಕಾಗುತ್ತದೆ ಎಂಬುದು ತಿಳಿದಿರಲಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522