ನಮ್ಮ ಬೆಂಗಳೂರಿನ ಈ ಹುಡುಗ ಓದಿನ ಜೊತೆ ಜೀವನದ ಪಾಠ ಕೂಡ ಕಲಿಯುತ್ತಿದ್ದಾನೆ, ಅದು ಹೇಗೆ ಗೊತ್ತಾ?

0
578

ಈಗಿನ ಕಾಲದಲ್ಲಿ ಶಿಕ್ಷಣ ಪಡೆಯುವುದು, ವಿದ್ಯಾವಂತರಾಗುವುದು, ಜೀವನದ ಅತಿ ಮುಖ್ಯ ದ್ಯೇಯವಾಗಿದೆ. ಸರ್ಕಾರ ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ, ಬಿಸಿ ಊಟ ಹೀಗೆ ಹತ್ತು ಹಲವು ಯೋಜನೆಗಳನ್ನು ಮಾಡಿದ್ದಾರೆ. ಇಲ್ಲೊಬ್ಬ ಹುಡುಗ ಓದಿನ ಜೊತೆ ಜೀವನದ ಪಾಠ ಕೂಡ ಕಲಿಯುತ್ತಿದ್ದಾನೆ, ಅದು ಹೇಗೆ, ನೀವೇ ನೋಡಿ.

ಜೀವನದಲ್ಲಿ ಮುಂದೆ ಬರಬೇಕಾದರೆ ಬರಿ ಓದುವುದು ಒಂದೇ ದಾರಿಯಲ್ಲ ಹಾಗು ಓದಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಶಾಲೆಗಳಿಗೆ, ಟ್ಯುಶೆನ್ ಗಳಿಗೆ ಹೋಗಬೇಕಾಗಿಲ್ಲ, ಸಾಧಿಸಬೇಕು ಎಂಬ ಛಲವಿದ್ದರೆ ಎಲ್ಲಿ ಬೇಕಾದರೂ ಶಿಕ್ಷಣ ಪಡೆಯಬಹುದು ಎಂಬುದಕ್ಕೆ ಈ ಹುಡುಗನೇ ಸಾಕ್ಷಿ. ಈ ಹುಡುಗ ರಜೆಯಲ್ಲಿ ಮೋಜು, ಮಸ್ತಿಗೆಂದು ಅಲ್ಲಿ ಇಲ್ಲಿ ಸುತ್ತಾಡದೆ ಬೀದಿಬದಿಯಲ್ಲಿ ಅವರ ತಂದೆಗೆ ನೆರವಾಗುತ್ತ, ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಯುತ್ತಿದ್ದಾನೆ. ಗಾಂಧಿನಗರದ ಪಾದಚಾರಿ ಮಾರ್ಗದಲ್ಲಿ ಆಟೋ ರಿಕ್ಷಾಗಳ ಕವರ್ ಹೊಲೆದು ಜೀವನ ಸಾಗಿಸುವ ಶಂಕರಪ್ಪ ಸಹ ಒಬ್ಬರು. ಸಾಕಷ್ಟು ಗಿರಾಕಿಗಳು ಬಂದರೆ ಅಂದು ರೂ. 300ವರೆಗೂ ಸಂಪಾದನೆ ಆಗುತ್ತದೆ.

ಹೀಗೆ ನಿತ್ಯ ವ್ಯಪಾರದಿಂದ ಬಂದ ಆ 300 ರೂ. ಹಣದಿಂದಲೇ ಇವರ ಜೀವನ ನಡೆಯುತ್ತದೆ. ಐದನೇ ತರಗತಿ ಓದುತ್ತಿರುವ ಶಂಕರಪ್ಪ ಅವರ ಮಗ ಪ್ರಸಾದ್‌ಗೆ ಇನ್ನು ಕೇವಲ ಹತ್ತು ವರ್ಷ ವಯಸು, ಅಪ್ಪನ ಜತೆ ಬಂದು ರಜೆ ದಿನಗಳಲ್ಲಿ ನೆರವಾಗುತ್ತಾನೆ. ಮನೆಯಲ್ಲೇ ಓದಿಕೊ ಅಂತ ಎಷ್ಟು ಹೇಳಿದರೂ ಕೇಳುವುದಿಲ್ಲ, ವ್ಯಾಪಾರ ಇರದ ಸಮಯದಲ್ಲಿ ಓದುತ್ತೇನೆ ಎನ್ನುತ್ತಾನೆ ಅಂತಾರೆ ಶಂಕರಪ್ಪ.