ಕಂತೆ ಕಂತೆ ಹಳೆ ನೋಟುಗಳು ಜಪ್ತಿ ಮಾಡಿದ ಪೊಲೀಸರನ್ನೇ ದಂಗುಬಡಿಸಿತ್ತು, ದೇಶದೆಲ್ಲೆಡೆ ಭಾರಿ ಸಂಚಲನ ಮಾಡುತ್ತಿದೆ ಈ ಭಾರೀ ರೈಡ್…

0
505

2016 ರ ನವಂಬರ್​ನಲ್ಲಿ ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ರೂಪಾಯಿಗಳ ಮುಖಬೆಲೆಯ ನೋಟ್​​ಗಳನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿತ್ತು. ಕಪ್ಪು ಧನಿಕರು ಹಾಗೂ ಭ್ರಷ್ಟರ ವಿರುದ್ಧ ಸಮರ ಸಾರಿದ್ದ ಮೋದಿ ಸರಕಾರ ಕೆಲವೇ ದಿನಗಳಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈಗ ಈ ಘಟನೆ ಕೇಳಿದ ನಂತರ ದೇಶದಲ್ಲಿ ಇನ್ನೆಷ್ಟು ಕಪ್ಪು ಹಣ ಇದೆ ಎಂದು ಕೊಳ್ಳುತ್ತೀರ.

ಉತ್ತರ ಪ್ರದೇಶ ರಾಜ್ಯದ ಕಾನ್ಪುರ್ ಜಿಲ್ಲೆಯ, ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೋಟ್ಯಂತರ ರೂಪಾಯಿ, ಹಳೆಯ 500 ಹಾಗು 1000 ಮುಖ ಬೆಲೆಯ ನೋಟುಗಳು ದೊರೆತಿವೆ. ಇನ್ನು ಉತ್ತರ ಪ್ರದೇಶ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಹಳೆಯ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾನ್ಪುರದ ವ್ಯಕ್ತಿಯೊಬ್ಬರ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣವಿದೆ ಎಂದು ಮಾಹಿತಿ ಪಡೆದ ಪೊಲೀಸರು, ಆರ್‌ಬಿಐ, ಐಟಿ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ದಾಳಿ ನಡೆಸಿದರು. ರದ್ದಾದ ಇಷ್ಟು ದೊಡ್ಡ ಮೊತ್ತದ ಹಣವನ್ನು ಒಂದೆಡೆ ನೋಡಿ ಅಧಿಕಾರಿಗಳು ಒಂದು ಕ್ಷಣ ನಿಬ್ಬೆರಗಾಗಿದ್ದರು.

ಈ ಹಣವನ್ನು ವಶಕ್ಕೆ ಪಡೆದು, ಎಣಿಕೆ ನಡೆಸಿದಾಗ ಅವು ಬರೋಬ್ಬರಿ 100 ಕೋಟಿ. ರೂ ಯಾಗಿತ್ತು. SSP AK ಮೀನಾ ಅವರ ನೇತೃತ್ವದ ತಂಡ ಈ ವಿಷಯಕ್ಕೆ ಸಂಭಂದಿಸಿದಂತೆ 10 ಜನರನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಈ ಹಣವನ್ನು ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಬಂಧಿತರಿಂದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಒಟ್ಟಿನಲ್ಲಿ ಕಾನ್ಪುರದ ಈ ಘಟನೆ, ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದು, ದೇಶದ ಜನ ಇನ್ನು ಎಲ್ಲೆಲ್ಲಿ ಎಷ್ಟು ಹಣವಿದೆ ಎಂದು ಯೋಚಿಸುತ್ತಿದ್ದಾರೆ.