ಈಗ ಗೊತ್ತಾಯ್ತು ತೆಂಗನ್ನ ಯಾಕೆ ಕಲ್ಪವೃಕ್ಷ ಅಂತ ಕರೀತಾರೆ.. ನಿಮಗೂ ಗೊತ್ತಾಗ್ಬೇಕಾ ಹಾಗಿದ್ರೆ ಮುಂದೆ ಓದಿ..

0
2229

Kannada News | Health tips in kannada

ತೆಂಗಿನಕಾಯಿಯನ್ನು ನಿಯಮಿತವಾಗಿ ಪ್ರತಿದಿನ ಆಹ್ರದಲ್ಲಿ ಬಳಸುವುದರಿಂದ ಅನೇಕ ಲಾಭಗಳಿವೆ. ತೆಂಗಿನಕಾಯಿಯು ಅತ್ಯಂತ ಪುಷ್ಟಿದಾಯಕ ಮತ್ತು ಬಲವರ್ಧಕ ಕೂಡ.

1. ಉರಿಮೂತ್ರ ಮತ್ತು ಕಟ್ಟುಮೂತ್ರ ರೋಗಿಗಳು ಎಳನೀರು ಸೇವಿಸುವುದರಿಂದ ಬೇಗ ಗುಣ ಹೊಂದುತ್ತಾರೆ.

2. ಉರಿಮೂತ್ರವಿರುವ ರೋಗಿಗಳು ಎಳನೀರಿಗೆ ಸ್ವಲ್ಪ ಬೆಲ್ಲ ನತ್ತು ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆರಡು ಬಾರಿ ಕುಡಿದ್ದಲ್ಲಿ ಉಪಶಮನ ದೊರೆಯುತ್ತದೆ.

3. ಎಳನೀರು ಸುಣ್ಣದ ತಿಳಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಅರಿಶಿನ ಪುಡಿ ಸೇರಿಸಿ ಅಂಗಾಲು ಅಂಗೈ ಗಳಿಗೆ ಹಚ್ಚಿದ್ದಲ್ಲಿ ಉರಿ ಕಡಿಮೆಯಾಗುತ್ತದೆ.

4. ನರಗಳ ದೌರ್ಬಲ್ಯಕ್ಕೆ ಒಂದು ಬಟ್ಟಲು ಎಳನೀರಿನ ಜೊತೆ ೧ ಚಮಚ ಜೇನುತುಪ್ಪವನ್ನು ಬೆರೆಸಿ ದಿನವೂ ಕುಡಿದ್ದಲ್ಲಿ ಸುಧಾರಣೆಯಾಗುತ್ತದೆ.

5. ಹಾಲನ್ನು ಕಕ್ಕುವ ಮಕ್ಕಳಿಗೆ ಹಾಲಿನೊಂದಿಗೆ ಸ್ವಲ್ಪ ಎಳನೀರನ್ನು ಬೆರೆಸಿ ಕೊಟ್ಟರೆ ವಾಂತಿಯಾಗುವುದಿಲ್ಲ.

6. ವಾಂತಿ ನಿಲ್ಲುವುದಕ್ಕೆ ಒಂದು ಬಟ್ಟಲು ಎಳನೀರಿಗೆ ಮೂರು ನಾಲ್ಕು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಚಮಚ ಜೇನುತುಪ್ಪ ಬೆರಸಿ ಸೇವಿಸಿದ್ದಲ್ಲಿ ಪರಿಹಾರ ದೊರಕುತ್ತದೆ.

7. ಚರ್ಮ ಮೃದುವಾಗಲು ಹಾಯ್ ಕೊಬ್ಬರಿ ಇಂದ ಹಾಲು ತೆಗೆದು ಗ್ಲಿಸರಿನ್ನೊಂದಿಗೆ ಮಿಶ್ರ ಮಾಡಿ ಚರ್ಮಕ್ಕೆ ಲೇಪಿಸಿದ್ದಲ್ಲಿ ಚರ್ಮ ಕಾಂತಿಯುಕ್ತವಾಗುವುದು.

8. ಬಾಯಿಹುಣ್ಣು ನಿವಾರಣೆಗೆ ಒಣ ಕೊಬ್ಬರಿ ಮತ್ತು ಕಲ್ಲು ಸಕ್ಕರೆಯನ್ನು ಸೇರಿಸಿ ಅಗಿಯಬೇಕು.

9. ಕೊಬ್ಬರಿ ಬೆಲ್ಲ ಚೆನ್ನಾಗಿ ತಿಂದರೆ ವಸಡು ಗಟ್ಟಿಯಾಗುವುದು.

10. ಸಂಭೋಗಶಕ್ತಿ ವೃದ್ಧಿಗೆ ಒಂದು ಲೋಟ ಎಳನೀರಿಗೆ ಜೇನುತುಪ್ಪ ಬೆರೆಸಿ ದಿನವೂ ಸೇವಿಸಬೇಕು.

11. ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಕೊಬ್ಬರಿ ಎಣ್ಣೆಗೆ ಕೆಲವು ತೊಟ್ಟು ನಿಂಬೆ ರಸ ಹಿಂಡಿ, ನಂತರ ಅಷ್ಟೇ ಪ್ರಮಾಣದ ಸುಣ್ಣದ ತಿಳಿಯೊಂದಿಗೆ ಬೆರೆಸಿ ಹಚ್ಚಿದ್ದಲ್ಲಿ ಚರ್ಮ ತಾರುಣ್ಯಪೂರ್ಣವಾಗುತ್ತದೆ.

Also Read: ನಿದ್ದೆ ಮಾಡೋದು ಒಳ್ಳೇದೇ, ಆದರೆ ಅದು ಜಾಸ್ತಿ ಆದರೆ ದೇಹಕ್ಕೆ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತೆ ಗೊತ್ತ?

Watch: