ಈ ಹನ್ನೊಂದು ವಿಷಯಗಳನ್ನು ನಿಮ್ಮ ಪ್ರೇಯಸಿಯಲ್ಲಿ ಕಂಡರೆ ಅವಳನ್ನು ಕಳೆದುಕೊಳ್ಳಬೇಡಿ!!

0
4801

ಜೀವನದಲ್ಲಿ ಯಾವಾಗ್ಲೋ ಒಂದೊಂದು ಸರಿ ನಮ್ಮ ಜೀವಸಂಗಾತಿ ಸಿಗುತ್ತಾಳೆ. ನಿಮ್ಮ ಕನಸಿನ ರಾಣಿ ಸಿಗುವುದು ಜೀವನದಲ್ಲಿ ಒಂದು ಬಾರಿ .

ಅಕಸ್ಮಾತ್ ನಿಮ್ಮ ಪ್ರಿಯತಮೆಗೆ ಈ ಕೆಳಗಿನ 11 ಗುಣಗಳಿದ್ದರೆ ಅವಳನ್ನು ಎಂದು ಹೋಗಲು ಬಿಡಬೇಡಿ , ಅವಳೇ ನಿಮ್ಮ ಜೀವ ಸಂಗಾತಿ.

  1. ಅವಳು ನಿಮಗೆಂದಿಗು ಬೆಂಬಲ

ಪ್ರತಿಯೊಬ್ಬನಿಗೂ ತನ್ನ ಬೆಂಬಲಕ್ಕೆ ಒಂದು ಹೆಣ್ಣು ಬೇಕು . ಪ್ರತಿಯೊಬ್ಬನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ . ನಿಮ್ಮ ಬಾಳ ಸಂಗಾತಿ ನಿಮ್ಮ ಬುದುಕಿಗೆ ಒಂದು ಅರ್ಥ ಕೊಡುತ್ತಾಳೆ ಹಾಗೂ ಜೀವಕ್ಕೆ ಮುದ ನೀಡುತ್ತಾಳೆ

2. ಅವಳು ಅಪ್ರತಿಮ ಸುಂದರಿ

ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಅಡಗಿರುತ್ತದೆ . ಅವಳು ನಿಮ್ಮ ಕಣ್ಣಿಗೆ ಮಾತ್ರ ಅಪ್ರತಿಮ ಸುಂದರಿಯಾಗಿ ಕಾಣುತ್ತಾಳೆಯೆ ? ಹಾಗಿದ್ದರೆ ಅವಳನ್ನೆಂದು ಬಿಡಬೇಡಿ.

3. ಅವಳು ಕರುಣಾಮಯಿ ಹಾಗೂ ನಿಮ್ಮ ಬಗ್ಗೆ ಗಮನವಿರಿಸುತ್ತಾಳೆ ಒಬ್ಬ ಹೆಣ್ಣುಮಗಳು ಹೃದಯವಂತೆ ಹಾಗೂ ಕರುಣಾಮಯಿ ಅಲ್ಲದಿದ್ದರೆ ಹೇಗೆ ತಾನೇ ಆದರ್ಶ ಯುವತಿ ಆದಾಳು? ಅವಳು ನಿಮ್ಮ ಬಗ್ಗೆ ಗಮನ ಹರಿಸಬೇಕು ಹಾಗೂ ನಿಮ್ಮ ರಕ್ಷಣೆಗೆ ಸದಾ ನಿಲ್ಲಬೇಕು .

4. ಅವಳು ಉತ್ಸಾಹದ ಚಿಲುಮೆ

ಎಷ್ಟೋ ಬಾರಿ ಜೀವನ ಬೋರ್ ಆಗುತ್ತದೆ , ಕಷ್ಟ ಎನಿಸುತ್ತದೆ . ಅಂತ ಸಮಯದಲ್ಲಿ ನಿಮ್ಮನ್ನು ಹುರಿದುಂಬಿಸುವ ಉತ್ಸಾಹಿ ಸಂಗತಿಯಿದ್ದಾರೆ ಜೀವನ ಸುಗಮ.

5. ಅವಳು ನಿಮ್ಮನು ಬಹಳ ಪ್ರೀತಿಸುತ್ತಾಳೆ

ಇದು ಎಲ್ಲದ್ದಕ್ಕಿಂತ ಮುಖ್ಯ . ಯಾವಾಗ ಒಂದು ಹೆಣ್ಣು ಒಬ್ಬರನ್ನು ಪ್ರೀತಿಸುತ್ತಾಳೊ , ಅವಳು ತನ್ನನು ತಾನು ಅವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ.

6. ಅವಳಿಗೆ ರಾಜಿ ಆಗುವ ವಿಧಾನ ಗೊತ್ತು

ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೊಂಡು . ನಮಗೆ ನಾವೇ ಸರಿ , ಬೇರೆಯವರ ದೃಷ್ಟಿಕೋನದಲ್ಲಿ ನೋಡುವ ಗೋಜಿಗೆ ಹೋಗುವುದಿಲ್ಲ. ಆದರೆ ಒಂದು ಸಂಬಂಧ ಬೆಳೆಯುವುದೇ ರಾಜಿಯ ಮೇಲೆ . ನಿಮ್ಮ ಪ್ರೇಯಸಿ ರಾಜಿ ಆಗಲು ಸಿದ್ದ ಎಂದರೆ ಅವಳೇ ನಿಮ್ಮ ಬಾಳ ಸಂಗಾತಿಯೆಂದರ್ಥ .

7. ಅವಳು ನಿಮ್ಮ ಬದುಕನ್ನು ಸುಂದರವಾಗಿಸುತ್ತಾಳೆ

ಕೆಲವೊಬ್ಬರೇ ಹಾಗೆ , ಅವರ ಸಾನಿಧ್ಯವೆ ನಮಗೆ ಮುದ ಕೊಡುತ್ತದೆ , ಅವರ ಬಳಿಯಲ್ಲಿದ್ದಾರೆ ಪ್ರಪಂಚವೇ ನಮ್ಮ ಕಾಲ್ ಬಳಿಯಲ್ಲಿದೆ ಎಂದು ಭಾಸವಾಗುತ್ತದೆ .  ಅಂಥವಳು ನಿಮ್ಮವಳಾಗಿದ್ದಾರೆ ಸ್ವರ್ಗಕ್ಕೆ ಮೂರೇ ಗೇಣು

8. ಅವಳು ನಿಮ್ಮ ತಪ್ಪನ್ನು ನಿಮಗೆ ತಿಳಿಸಲು ಹಿಂಜರಿಯುವುದಿಲ್ಲ

ಯಾರಾದರೂ ನಮ್ಮನ್ನು ಹೊಗಳುತ್ತಾರೆ , ಆದರ ನಮ್ಮ ಒಳಿತ್ತನ್ನು ಬಯಸಿ ನಮ್ಮ ತಪ್ಪನ್ನು ನಮಗೆ ತೋರಿಸಿ ತಿದ್ದುತ್ತಾರಲ್ಲ ಅವರು ಜೀವನಕ್ಕೆ ಅತ್ಯಗತ್ಯ

9. ಅವಳ ನಡತೆಯೇ ಅವಳ ಅಸ್ತ್ರ

ಎಲ್ಲರೂ ಮಾದರಿ ಹೆಣ್ಣನು ಪಡೆಯಲು ಬಯಸುತ್ತಾರೆ , ಆ ಮಾದರಿ ಹೆಣ್ಣಿಗೆ ಸ್ತ್ರೀಯತೆ ಹಾಗೂ ಶಕ್ತಿ ಬಹಳ ಮುಖ್ಯ . ಶಕ್ತಿ ಎಂದರೆ ಅವಳ ನಡತೆ . ಅಂತ ಹೆಣ್ಣು ಎಲ್ಲರ ಕನಸು , ಆ ಕನಸು ನಿಮ್ಮ ಬಳಿಯಿದ್ದಾರೆ ನೀವೇ ಅದೃಷ್ಟವಂತರು

10. ಅವಳು ಪ್ಯಾಶನೇಟ್

love-is-great-5
source;framepool.com

ನಮ್ಮ ಜೀವನಕ್ಕೆ ಹುರುಪು ಬರುವುದೇ ನಾವು ಪ್ಯಾಶನೇಟ್ ಆಗಿದ್ದಾಗ . ಅದು ನಮ್ಮನ್ನು ಕಾಯುವ ಹೃದಯದ ಕಿಡಿ . ಆ ಕಿಡಿ ನಮ್ಮನ್ನು ಜೀವಂತವಾಗಿರಿಸುತ್ತದೆ . ಅಂತ ಹೆಣ್ಣು ನಿಮ್ಮ ಜೊತೆಯಲ್ಲಿದ್ದರೆ ನಿಮ್ಮದೇ ಆದರ್ಶ ಜೀವನ. ಅವಳು ನಿಮ್ಮ ಸರ್ವಸ್ವ.

ಕೆಲವೊಂದು ಬಾರಿ ಕೆಲವರನ್ನು ಹುಚ್ಚರಂತೆ ಪ್ರೀತಿಸುತ್ತೇವೆ, ಕಾರಣ ಇರುವುದಿಲ್ಲ. ಈ ಕಾರಣವಿಲ್ಲದೆ ಹುಟ್ಟುವ ಪ್ರೀತಿ ನಿಜವಾದ ಪ್ರೀತಿ, ಕಾರಣವಿದ್ದು ಹುಟ್ಟುವ ಪ್ರೀತಿ ಸ್ವಾರ್ಥ. ನಿಮ್ಮ ಸಂಗತಿಯನ್ನು ನೀವು ಕಾರಣವಿಲ್ಲದೆ ತುಂಬಾ ಪ್ರೀತಿಸುತ್ತೀರಾ? ಅವಳಿಲ್ಲದ ಬದುಕು ಊಹೆಗೂ ನಿಲುಕುವುದಿಲ್ಲವ ? ಹಾಗಿದ್ದರೆ ಅವಳನ್ನೆಂದು ಬಿಡಬೇಡಿ.

Also read: ನಿಮ್ಮ ಪ್ರೇಯಸಿಯನ್ನು ಮೊದಲ ಬಾರಿ ಭೇಟಿಯಾಗುವಾಗ ಈ ಏಳು ವಿಷಯಗಳನ್ನು ಮರೆಯದಿರಿ…