ಅಷ್ಟಿಲ್ಲದೆ ಹೇಳ್ತಾರಾ ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರ ಇಡಬಲ್ಲದು ಅಂತಾ?

0
842

ಪ್ರತಿದಿನ ಒಂದು ಸೇಬುಹಣ್ಣನ್ನು ಸೇವಿಸುವುದರಿಂದ ವೈದ್ಯರ ಹತ್ತಿರ ಹೋಗುವ ಪ್ರಸಂಗ ಬರುವುದಿಲ್ಲ ಎಂದು ಹೇಳುವ ಕಾರಣವೇನೆಂದರೆ ಸೇಬು ಹಣ್ಣಿನಲ್ಲಿ ಯಥೇಚ್ಛವಾಗಿ ಕ್ಯಾಲ್ಸಿಯಂ, ಕಬ್ಬಿಣ, ಎ,ಬಿ ,ಸಿ ಜೀವಸತ್ವಗಳು ಯಥೇಚ್ಛವಾಗಿದ್ದು ಆರೋಗ್ಯ ರಕ್ಷಣೆಯಾಗುವುದು.ಸೇಬನ್ನು ಸಿಪ್ಪೆ ಸಹಿತ ತಿನ್ನಬೇಕು. ಹೊಟ್ಟೆ ಹಸಿದಿರುವಾಗ ಸೇಬನ್ನು ತಿನ್ನುವುದು ಒಳ್ಳೆಯದಲ್ಲ.ಸೇಬನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದು, ಜ್ಞಾಪಕ ಶಕ್ತಿ ಹೆಚ್ಚುವುದು, ದೈಹಿಕ ಶಕ್ತಿ ಹೆಚ್ಚುವುದು, ನರಗಳ ಸಾಮರ್ಥ್ಯ ಹೆಚ್ಚಾಗುವುದು ಮತ್ತು ಅರಕ್ತತೆ ನಿವಾರಣೆಯಾಗುವುದು.

1. ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚುವುದಲ್ಲದೆ ಜೊಲ್ಲು ರಸ ಹೇರಳವಾಗಿ ಸ್ರವಿಸಿ ಜೀರ್ಣಶಕ್ತಿ ಹೆಚ್ಚುತ್ತದೆ.

2. ಕಫ ಕಟ್ಟುವಿಕೆ ನಿವಾರಣೆಯಾಗಲು ಪ್ರತಿದಿನ ಒಂದು ಸೇಬನ್ನು ೪೦ ದಿನಗಳ ಕಾಲ ಸೇವಿಸಬೇಕು.

3. ಧೀರ್ಘಕಾಲದ ತಲೆನೋವಿನಿಂದ ಬಳಲುತ್ತಿದ್ದರೆ ಸೇಬನ್ನು ಉಪ್ಪಿನ ಸಹಿತ ೧೫ ದಿನಗಳ ಕಾಲ ಸೇವಿಸಬೇಕು.

4. ಮುಖದಲ್ಲಿ ಮೊಡವೆ ಮತ್ತು ಬೊಕ್ಕೆಗಳನ್ನು ನಿವಾರಿಸಲು ಸೇಬು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ, ಆ ಚೂರ್ಣವನ್ನು ಹಾಲಿನೊಂದಿಗೆ ಕಲಸಿ ಹಚ್ಚಬೇಕು.

5. ಸೇಬು ತಿನ್ನುವಾಗ ಜೊಲ್ಲುರಸ ಅಧಿಕವಾಗಿ ಸ್ರವಿಸಿ ಕರುಳಿನ ರೋಗಗಳು ತಲೆದೋರುವುದಿಲ್ಲ.

6. ಮಗುವಿಗೆ ಅತಿಸಾರವುಂಟಾಗಿದ್ದರೆ ಎಸಬನ್ನು ತುರಿದು ಹಾಲಿನೊಂದಿಗೆ ಬೆರೆಸಿ ಕುಡಿಸಿ.

7. ಆಮಶಂಕೆಗೆ ಸೇಬನ್ನು ತುರಿದು ಅದರ ರಸವನ್ನು ಕುಡಿದ್ದಲ್ಲಿ ಗುಣವಾಗುವುದು.

8. ಜೇನುತುಪ್ಪದಲ್ಲಿ ಸೇಬುಗಳನ್ನು ನೆನೆ ಹಾಕಿ ಅದಕ್ಕೆ ಗುಲಾಬಿ ದಳಗಳ್ನು ಮಿಶ್ರ ಮಾಡಿ ಬಿಸಿಲಿನಲ್ಲಿತ್ತು ಒಣಗಿಸಬೇಕು. ಈ ರಸಾಯನವನ್ನು ದಿನನಿತ್ಯ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಜೀವನದಲ್ಲಿ ನವ ಚೈತನ್ಯ ತುಂಬಿ ಹರಿಯುವುದು.

9. ಸೇಬು ಹಣ್ಣಿನ ರಸ ಹೊಟ್ಟೆ ಹುಣ್ಣಿನಿಂದ ನರಳುವವರಿಗೆ ಉತ್ತಮ ಔಷಧ.

10. ಯಕೃತ್ತಿನ ತೊಂದರೆ, ಸಂಧಿವಾತ ಮತ್ತು ಮಲಕಟ್ಟು ರೋಗಗಳಿಗೆ ಸೇಬನ್ನು ಸಿಪ್ಪೆ ಸಮೇತ ತಿನ್ನು ಅಭ್ಯಾಸವಿರಿಸಿಕೊಳ್ಳಬೇಕು.

11. ಮುಖದ ಮೇಲಿನ ಮೊಡವೆಗಳ ನಿವಾರಣೆಗೆ ಸೇಬಿನ ತಿರುಳನ್ನು ಅರೆದು ಹಚ್ಚಬೇಕು.

12. ಮಗುವಿಗೆ ಸೇಬನ್ನು ತುರಿದು ರಸ ಹಿಂದಿ ಕುಡಿಸುವುದರಿಂದ ಹಸಿವು ಹೆಚ್ಚುವುದು ಮತ್ತು ಬಲ ವೃದ್ಧಿಯಾಗುವುದು.