ರಸ್ತೆ ಮಧ್ಯದಲ್ಲೇ 15 ವರ್ಷದ ವಿದ್ಯಾರ್ಥಿಯನ್ನು ಬೆಂಕಿಹಚ್ಚಿ ಕೊಂದ ದುಷ್ಕ್ರಮಿಗಳು; ಯೋಗಿ ಆದಿತ್ಯನಾಥ್ ಆಡಳಿತದ ವಿರುದ್ದ ಯುಪಿ’ ಯಲ್ಲಿ ಫುಲ್ ಗರಂ..

0
351

ಆಗ್ರಾದಲ್ಲಿ 15 ವರ್ಷ ವಯಸ್ಸಿನ ಶಾಲಾ ಬಾಲಕಿಯನ್ನು ರೋಡ್ ಮೇಲೆಯೇ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಈ ಘಟಣೆ ಸಂಬಂಧ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಕೇಳಿ ಬರುತ್ತಿವೆ. ಈ ಘಟನೆಯ ವಿರುದ್ದ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇಂತಹ ಪ್ರಕರಣಗಳು ನಡೆಯಲು ಅಲ್ಲಿನ ಸರ್ಕಾರದ ಅಭದ್ರತೆಯೇ ಕಾರಣ ಎಂದು ಕೇಳಿಬರುತ್ತಿದೆ.


Also read: ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!

ಏನಿದು ಪ್ರಕರಣ?

10 ನೇ ತರಗತಿಯ ವಿದ್ಯಾರ್ಥಿ ಸಂಜಲಿ ಚಾನಕ್ಯ ಮಧ್ಯಾಹ್ನದ ವೇಳೆ ಮನೆಗೆ ಬರುತ್ತಿರುವಾಗ ಬೈಕ್ -ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರಸ್ತೆಯ ಮಧ್ಯದಲ್ಲಿ ವಿದ್ಯಾರ್ಥಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಂತರ ಈ ಬಾಲಕಿಯ ಸಹಾಯಕ್ಕೆ ಬಂದ ಬಸ್ ಚಾಲಕ ಬೆಂಕಿ ಆರಿಸಿದರು ಈ ವೇಳೆ ಬಾಲಕಿ ಸುಮಾರು 70 ರಷ್ಟು ಸುಟ್ಟಿದಳು ಕೂಡಲೇ ಸಂಜಲಿಯನ್ನು ಆಗ್ರಾದ ಎಸ್ಎನ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ತಂದು ತುರ್ತು ಚಿಕಿತ್ಸೆ ವಾರ್ಡ್ -ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ Safdarjung ಆಸ್ಪತ್ರೆಗೆ ರವಾನಿಸಲಾಯಿತ್ತು ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳು ಹೋರಾಡಿದ ಸಂಜಲಿ ಮೃತಪಟ್ಟಿದ್ದಾಳೆ.

ಓದಿನಲ್ಲಿ ಮುಂದಿದ ಸಂಜಲಿ:


Also read: ಕಡೆಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಂಡ ಮೋದಿ ಸರ್ಕಾರ, 21 ದಿನಗಳಲ್ಲೇ ಉದ್ಯೋಗ ನೀಡುವ ವರುಣ್ ಮಿತ್ರ ಯೋಜನೆ!.

ಈ ಘಟನೆಯಲ್ಲಿ ಮೃತಪಟ್ಟ ಸಂಜಲಿ ಮನೆಯವರು ಹೇಳುವ ಪ್ರಕಾರ ಇಡಿ ಶಾಲೆಯ ಓದಿನಲ್ಲಿ ಮೊದಲಿದ್ದಳು. ಹಾಗೆಯೇ ಜೀವನದಲ್ಲಿ ದೊಡ್ಡ ಕನಸ್ಸು ಇಟ್ಟುಕೊಂಡಿದಳು ಬಹಳಷ್ಟು ಸ್ನೇಹಿತರನ್ನು ಹೊಂದಿದ್ದಳು. ಎಲ್ಲರಿಂದ ಅಪಾರವಾದ ಮೆಚ್ಚುಗೆ ಪಡೆದಿದ್ದಳು. ಇವಳ ಬಗ್ಗೆ ಶಾಲೆಯಲ್ಲಿ ಆಗಲಿ ಊರಿನಲ್ಲಿ ಆಗಲಿ ಯಾವುದೇ ದೂರುಗಳು ಇರಲಿಲ್ಲ ಎಂದು ಮಾದ್ಯಮರೊಂದಿಗೆ ಮಾತನಾಡಿದ, ಸಂಜಲಿ ತಂದೆ ನಾನೊಬ್ಬ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದು ನಮ್ಮಂತ ಬಡ ಜನರ ಪ್ರಾಣ ತೆಗೆದವರನ್ನು ಸರ್ಕಾರ ಆದಷ್ಟು ಬೇಗೆ ಬಂದಿಸಿ ಅವರಿಗೆ ಗಲ್ಲಿಗೆರಿಸಬೇಕು ನಮಗೆ ನ್ಯಾಯ ವದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಘಟಣೆಗೆ ಸಂಬಂಧಪಟ್ಟಂತೆ The Indian Express, ಪತ್ರಿಕೆ ವರದಿಯಲ್ಲಿ ತಿಳಿಸಿರುವ ಹಾಗೆ, ಸಂಜಲಿ ಮೃತಪಟ್ಟ ವಿಷಯ ತಿಳಿದ ಕೆಲವೇ ಗಂಟೆಗಳಲ್ಲಿ 24 ವರ್ಷ ಪ್ರಾಯದ ಸಂಜಲಿ ಸೋದರಸಂಬಂಧಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಘಟಣೆಗೆ ಮತ್ತಷ್ಟು ಅನುಮಾನ ಮೂಡಿದೆ. ಎಂದು ಹೇಳಿದ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ನಾವು ಸೆಕ್ಷನ್ 326-ಎ ಅಡಿಯಲ್ಲಿ (ಎಸಿಡ್ ಎಸೆಯುವ ಶಿಕ್ಷೆಯನ್ನು) ಎಫ್ಐಆರ್ ದಾಖಲಿಸಿದ್ದೆವು ಸಾವಿನ ನಂತರ ಸೆಕ್ಷನ್ 302 (ಕೊಲೆ) ಗೆ ನವೀಕರಿಸಲಾಗಿದೆ. ಈ ಘಟಣೆಯಲ್ಲಿ ಸಂಜಲಿಯ ಸೋದರಿ ಕೂಡ ಆತ್ಮಹತ್ಯೆ ಮಾಡಿಕೊಂಡಿದು ಮತ್ತಷ್ಟು ಅನುಮಾನ ಮೂಡಿಸಿದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳ ಪ್ರತಿಭಟಣೆ:


Also read: ದಪ್ಪ ಹೆಂಡತಿಯಿಂದ ಜೀವನದಲ್ಲಿ ಖುಷಿ ಜಾಸ್ತಿ ಅಂತೆ; ಹುಡುಗಿ ದಪ್ಪ ಅಂತ ಮದುವೆಗೆ ಒಪ್ಪದೇ ಇರುವ ಹುಡುಗರು ಈ ಮಾಹಿತಿ ಓದಲೇಬೇಕು..

ಸಂಜಲಿಗೆ ಆದ ಅನ್ಯಾಯದ ವಿರುದ್ದ ಉತ್ತರ ಪ್ರದೇಶದ ತುಂಬೆಲ್ಲ ಹೋರಾಟಕ್ಕೆ ಇಳಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಸಂಜಲಿಗೆ ನ್ಯಾಯ ಸಿಗಬೇಕು ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಕೊಲೆಗಾರರು ಬದುಕುವವರೆಗೆ ನ್ಯಾಯ ಸಿಗುವುದಿಲ್ಲ ಎಂದು ಪ್ರತಿಭಟಿಸಿದ್ದಾರೆ. ಈ ಘಟಣೆಯಿಂದ ಪಾಲಕರು ತಮ್ಮ ಮಕ್ಕಳನು ಶಾಲೆಗೇ ಕಳುಹಿಸುತ್ತಿಲ್ಲ ಇಡಿ ಉತ್ತರ ಪ್ರದೇಶದ ಜನ ಭಯಭೀತರಾಗಿದ್ದಾರೆ.

ದಿ ಲಾಜಿಕಲ್ ಇಂಡಿಯನ್ ಟೇಕ್ ವರದಿಯ ಪ್ರಕಾರ:

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಆಡಳಿತವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ತನ್ನ ಗಮನವನ್ನು ಮರಳಿ ತರಬೇಕಾಗಿದೆ. ಯುಪಿ ಪೊಲೀಸರು ಅಪರಾಧಿಗಳನ್ನು ಹಿಡಿಯುವಲ್ಲಿ ವಿಪಲರಾಗಿದ್ದಾರೆ. ಈ ಹಿಂದೆ ನಡೆದ ಬುಲಂದರ್ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಕಾಪ್ ಅವರ ಘಟನೆಯಲ್ಲಿ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅಂತಹದೇ ಘಟನೆಯು ಮತ್ತೆ ನಡೆದಿದ್ದು ಯುಪಿ ಜನರಲ್ಲಿ ಆಘಾತವನ್ನುಂಟು ಮಾಡಿದೆ. ಗ್ರಾಮದಲ್ಲಿ ಹುಡುಗಿಯರು ಶಾಲೆಗಳಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮತ್ತು ಈ ಘಟನೆಯ ಬಗ್ಗೆ ಸಿಎಂ ಯೋಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.