ಪ್ರೀತಿಸಿ ಕೈ ಕೊಡಲು ಯತ್ನಿಸಿದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ.!

0
207

ಯುವತಿಯರಿಗೆ ಯುವಕರು ಪ್ರೀತಿಸುವಂತೆ ಕೋರಿ ಹಿಂದೆ ಬಿದ್ದು, ಒಪ್ಪದಿದ್ದಾಗ ಇಲ್ಲ ಬೇರೆ ಯಾವುದೋ ಉದ್ದೇಶಕ್ಕೆ ಹುಡುಗಿಯರ ಮೇಲೆ ಆ್ಯಸಿಡ್ ದಾಳಿ ಮಾಡುವುದು ಕೇಳಿ ಬರುತ್ತಿತ್ತು, ಆದರೆ ಈಗ ಕಾಲ ಬದಲಾಗಿದ್ದು ಹುಡುಗಿಯರೇ ಹುಡುಗರ ಮೇಲೆ ಆ್ಯಸಿಡ್ ದಾಳಿ ಮಾಡುತ್ತಿರುವುದು ಕೇಳಿದರೆ ಆಶ್ಚರ್ಯ ಅನಿಸಿದರು ಇದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದ್ದು, ಯುವತಿ ಪ್ರೀತಿಸಿ ಮದುವೆಯಾಗಲು ಒಪ್ಪದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಘಟನೆ ಭಾರಿ ವೈರಲ್ ಆಗಿದೆ.

ಪ್ರಿಯಕರನ ಮೇಲೆ ಆ್ಯಸಿಡ್ ?

ಹೌದು ಇನ್ಮುಂದೆ ಯುವಕರು ಹುಡುಗಿಯರಿಗೆ ಮೋಸ ಮಾಡುವ ವೇಳೆ ಯೋಚಿಸಬೇಕು ಇಲ್ಲದಿದ್ದರೆ ನಿಮ್ಮ ಮೇಲಿವೂ ಆ್ಯಸಿಡ್ ದಾಳಿ ಆಗಬಹುದು. ಇಂತಹದೆ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಮನೆಯ ಬಳಿಯೇ ಗೆಳೆಯನ ಮುಖಕ್ಕೆ ಆಸಿಡ್ ಎರಚಿದ ಆರೋಪದ ಮೇಲೆ 19 ವರ್ಷದ ಯುವತಿಯೊಬ್ಬಳನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಅಲಿಗರ್ ನಲ್ಲಿ ನಡೆದಿದೆ. ಸಂತ್ರಸ್ತ ಯುವಕನ ಕುಟುಂಬದವರು ನೀಡಿರುವ ದೂರಿನ ಅನ್ವಯ ಇದೀಗ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಲಂ 326 (ಎ) ಅನ್ವಯ ಪ್ರಕರಣ ದಾಖಲಿಕೊಂಡಿದ್ದಾರೆ.

ಸಂತ್ರಸ್ತ ಯುವಕ ಮತ್ತು ಆರೋಪಿ ಯುವತಿ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಕೆಲವು ತಿಂಗಳ ಹಿಂದೆ ದೂರಾಗಿದ್ದಾರೆ. ಆದರೆ, ಆರೋಪಿ ಯುವತಿ ಮಾತ್ರ ತನ್ನನ್ನು ಮದುವೆಯಾಗುವಂತೆ ಹುಡುನನ್ನು ಒತ್ತಾಯಿಸಿದ್ದಾಳೆ. ಹೀಗಾಗಿ ಆತ ಈಕೆಯ ಜೊತೆಗೆ ಮಾತನಾಡುವುದನ್ನು ಹಾಗೂ ಭೇಟಿಯಾಗುವುದನ್ನೇ ಬಿಟ್ಟಿದ್ದ. ಅಲ್ಲದೆ, ಆಕೆಯ ಮೊಬೈಲ್ ಕರೆಗಳನ್ನೂ ಸಹ ಸ್ವೀಕರಿಸುವುದನ್ನು ನಿಲ್ಲಿಸಿದ್ದ. ತನ್ನ ಪ್ರಿಯತಮ ಮೊಬೈಲ್ ಕರೆಗಳನ್ನು ಸ್ವೀಕರಿಸದ ಕಾರಣ ಕುಪಿತಗೊಂಡ ಹುಡುಗಿ ಗುರುವಾರ ಬೆಳಗ್ಗೆ ಯುವಕ ತನ್ನ ಮನೆಯ ಹತ್ತಿರದ ಅಂಗಡಿ ಎದುರು ನಿಂತಿದ್ದಾಗ ದಿಢೀರ್ ದಾಳಿ ನಡೆಸಿ ಮುಖಕ್ಕೆ ಆಸಿಡ್ ಎರಚಿದ್ದಾಳೆ.

ಇದಕ್ಕೂ ಮುನ್ನ ಹುಡುಗ ತನ್ನನ್ನು ಮದುವೆಯಾಗಲು ನಿರಾಕರಿಸಿದರೆ ಇಬ್ಬರೂ ಏಕಾಂತದಲ್ಲಿ ಆತ್ಮೀಯತೆಯಿಂದ ಇದ್ದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾಳೆ. ಇದಕ್ಕೂ ಸಹ ಯುವಕ ಜಗ್ಗದಿದ್ದಾಗ ಆಕೆ ಆಸಿಡ್ ದಾಳಿ ನಡೆಸಿದ್ದಾಳೆ ಎಂದು ತಿಳಿದುಬಂದಿದೆ. ಆಸಿಡ್ ದಾಳಿಗೆ ತುತ್ತಾದ ಯುವಕನನ್ನು ಹತ್ತಿರದ ಜವಹರ್ಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ದಾಳಿಯಿಂದಾಗಿ ಆತ ಕಣ್ಣು ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ದೃಷ್ಟಿ ಮರುಕಳಿಸುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೂಡ ಇಂತಹದೆ ಒಂದು ಘಟನೆ ದೆಹಲಿಯ ವಿಕಾಸಪುರಿಯಲ್ಲಿ ನಡೆದಿತ್ತು, ಬೈಕ್‌ನಲ್ಲಿ ಹೋಗುತ್ತಿದ್ದರು.ಬೈಕ್‌ನಲ್ಲಿ ಕುಳಿತಿದ್ದಾಗ ಯುವತಿ ಹೆಲ್ಮೆಟ್ ತೆಗೆಯಲು ಹೇಳಿದ್ದಳು ಅದರಂತೆ ಹೆಲ್ಮೆಟ್ ತೆಗೆದ ಕೂಡಲೇ ಯುವಕನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಹುಡುಗನ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ, ಹುಡುಗಿಯ ಕೈಗೂ ಕೂಡ ಸುಟ್ಟ ಗಾಯಗಳಾಗಿದ್ದವು. ಈಗ ಅಂತಹದೇ ಮತ್ತೊಂದು ಘಟನೆ ನಡೆದಿದ್ದು, ಭಾರಿ ವೈರಲ್ ಆಗಿದೆ.