ಈ ಅಂಗಡಿ ಮಾಲೀಕ 1 ರೂಪಾಯಿಗೆ ಪಾನಿ ಪುರಿ ವಿತರಿಸಲು ಕಾರಣ ಏನು ಗೊತ್ತೇ…!?

0
1815

ಕುವೆಂಪು ನಗರದ ಪಂಚ ಮಂತ್ರ ರಸ್ತೆಯಲ್ಲಿರುವ ವೈಷ್ಣವಿ ಸ್ವೀಟ್ಸ್ ಅಂಡ್ ಸ್ನಾಕ್ಸ್ ಮಳಿಗೆಯೂ ದಿನಾಂಕ 23 ರಿಂದ 25 ರ ರವರೆಗೆ ಸಂಜೆ 6.30ರಿಂದ 9 ಗಂಟೆಯವರೆಗೆ ಕೇವಲ 1 ರೂಪಾಯಿಗೆ ಪಾನಿಪುರಿ, 2 ರೂ.ಗೆ ಮಸಾಲೆ ಪುರಿ, 3 ರೂ.ಗೆ ಸಮೋಸ, 4 ರೂಪಾಯಿಗೆ ಜಿಲೇಬಿ, ಹಾಗೂ ಐದು ರೂಪಾಯಿಗೆ ಪಾವ್ ಬಜ್ಜಿ ನೀಡಿತ್ತು.

ಕಾರಣ ಏನು ಗೊತ್ತೇ…? ಈ ಅಂಗಡಿಯ ಮಾಲೀಕ, ಕೇಂದ್ರ ಸರ್ಕಾರ 500 ಹಾಗೂ 1000 ನೋಟುಗಳ ಚಲಾವಣೆ ರದ್ದು ಮಾಡಿರುವ ಕ್ರಮವನ್ನು ಖಂಡಿಸಿ ಈ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದಾನೆ. ಅದಕ್ಕೂ ಈ ಅಂಗಡಿಯ ಮಾಲಿಕೆ ಇಷ್ಟು ಕಡಿಮೆ ಬೆಲೆಗೆ ಪಾನಿಪುರಿ ಮಾರುವುದಕ್ಕೂ ಏನು ಸಂಬಂಧ ಅಂತ ಕೇಳ್ತಿರಾ…!? ಇದೆ ಸ್ವಾಮಿ ಸಂಬಂಧ ಇದೆ. ಅದುವೇ “ಚಿಲ್ಲರೆ ಸಮಸ್ಯೆ”. ಹೌದು, ಇಲ್ಲಿಯ 500 ಹಾಗೂ 1000 ರೂ. ಹಳೆ ನೋಟುಗಳನ್ನ ಬ್ಯಾನ್ ಮಾಡಿದ್ದು ಹೊಸ ನೋಟ್‌ಗಳಿಗೆ ಚಿಲ್ಲರೆ ಸಮಸ್ಯೆಯಾಗಿದ್ದು, ಇದರಿಂದ ಜನಸಮಾನ್ಯರಿಗೆ ತಿನ್ನಲು ತೊಂದರೆಯಾಗದಿರಲಿ ಎಂದು ಈ ಸ್ವೀಟ್ಸ್ ಅಂಗಡಿ ಈ ರೀತಿ ಕಡಿಮೆ ದರದಲ್ಲಿ ತಿಂಡಿಗಳನ್ನು ನೀಡುತ್ತಿದೆ.

ಜನಜಂಗುಳಿ ನಿಯಂತ್ರಿಸಲು ಪೊಲೀಸ್ ಬಂದ್ರು…!!

ಜನ ಎಷ್ಟೇ ದುಡ್ಡು ದುಡಿದರು ತಮ್ಮ ದುರಾಸೆ ಬುದ್ದಿ ಬಿಡಲ್ಲ ಅನ್ನೋದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ ನೋಡಿ… ನಾವ್ ಸುಳ್ಳು ಹೇಳ್ತಿದ್ದೇವೆ ಅನ್ನಿಸಿದರೆ ಒಮ್ಮೆ ವಿಡಿಯೋ ನೋಡಿ… ರೂಪಾಯಿ ಪಾನಿಪುರಿ ಸೇರಿದಂತೆ ಇತರ ಚಾಟ್ಸ್‌‌ಗಳನ್ನ ತಿನ್ನಲು ನಿನ್ನೆ ಸಂಜೆ ಅಂಗಡಿಯ ಮುಂದೆ ಜನಸಾಗರವೇ ಸೇರಿತ್ತು. ಐದು ತಾಸು ನಿಂತರೂ ಪರವಾಗಿಲ್ಲ ಕಮ್ಮಿ ದುಡ್ಡಿಗೆ ಸಿಗುತ್ತದೆ ಎನ್ನುವ ಮನಸ್ಥಿತಿ ನಮ್ಮದು… ಒಂದು ಕಿ.ಮಿ ವರೆಗೆ ಸರತಿ ಸಾಲಿನಲ್ಲಿ ನಿಂತು ಜನರು ಚಾಟ್ಸ್ ಸವಿದಿದ್ದು ವಿಶೇಷ. ಸ್ವೀಟ್ ಅಂಗಡಿಯ ಮಾಲೀಕರು ಚಾಟ್ಸ್ ವಿತರಿಸಲು ವಿಳಂಬವಾಗಿ ಕೆಲಕಾಲ ಗೊಂದಲ ಉಂಟಾಗಿತ್ತು. ಆದರೆ ಸ್ಥಳಕ್ಕೆ ಕುವೆಂಪು ನಗರ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಗೊಂದಲ ಸರಿಪಡಿಸಿದರು.