ಹಾಲು ಕುಡಿಯುವ ಮುನ್ನ ಎಚ್ಚರ; ಶಾಂಪೂ, ಯೂರಿಯಾದಿಂದ ಹಾಲು ತಯಾರಿಸಿ ಕೋಟ್ಯಾಧಿಪತಿಗಳಾದ 10 ಡೈರಿ ಮಾಲೀಕರ ಜಾಲ ಪತ್ತೆ!!

0
752

ಪ್ರತಿಯೊಬ್ಬರಿಗೂ ಹಾಲಿನ ಸೇವನೆ ಅವಶ್ಯಕವಾಗಿದ್ದು, ಇದನ್ನೇ ಬಂಡವಾಳವಾಗಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಕೃತಕ ಹಾಲು ತಯಾರಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಗ್ರಾಹಕರಿಗೆ ಹಾಲು ಕುಡಿಯಲು ಭಯ ಹುಟ್ಟಿಸಿದೆ. ಏಕೆಂದರೆ ಈ ಕೃತಕ ಹಾಲು ತಯಾರಾಗುವುದು ಶಾಂಪೂ ಮತ್ತು ಗೊಬ್ಬರವಾಗಿ ಬಳಸುವ ಯೂರಿಯಾದಿಂದ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಮಾಫಿಯಾ ಈಗಿನಿಂದ ನಡೆಯುತ್ತಿರುವುದಲ್ಲ ಕಳೆದ 7-8 ವರ್ಷಗಳಿಂದ ನಡೆಯುತ್ತಿರುವ ಮಾಫಿಯಾ ಆಗಿದ್ದು ಹಾಲು ತಯಾರಿಸುತ್ತಿದ್ದ ಅಣ್ಣ-ತಮ್ಮ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆದು ಮೋಸದ ಹಾಲಿನ ಪ್ರಕರಣ ಬೆಳಕಿಗೆ ಬಂದಿದೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ; ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತೆ..

ನೀವು ಕುಡಿಯುವುದು ವಿಷದ ಹಾಲು

ಹೌದು ಮಧ್ಯಪ್ರದೇಶದ ಈ ಸೋದರರಿಬ್ಬರು ದಿಡಿರನೆ ಶ್ರೀಮಂತರಾಗಿ ಸೈಕಲ್-ನಲ್ಲಿ ಓಡಾಡುತ್ತಿದ್ದವರು ಫಾರ್ಚುನರ್ ಕಾರ್ ನಲ್ಲಿ ಓಡಾಡುತ್ತಿರುವುದು ಕಂಡವರಿಗೆ ಅನುಮಾನ ಬಂದು ಮಾಹಿತಿ ನೀಡಿದ್ದಾರೆ. ನಂತರ ಶುರುವಾದ ಪೊಲೀಸರ ತನಿಖೆ ಹಾಲಿನ ಮಾಫಿಯಾದ ಹಿಂದಿರುವ ಹಲವರ ಬಣ್ಣ ಬಯಲು ಮಾಡಿದ್ದು ಮಾಫಿಯಾದಲ್ಲಿ ಬಾಗಿಯಾದವರು ಜೈಲು ಸೇರಿದ್ದಾರೆ. ಇವರು ಏಳು ವರ್ಷದ ಹಿಂದೆ ಬೈಕಿನಲ್ಲಿ ಹಾಲು ಹಾಕಿ ಜೀವನ ನಡೆಸುತ್ತಿದ್ದ ಸೋದರರಿಬ್ಬರು ಇಂದು ವಿಷ ಮಿಶ್ರಿತ (ಸಿಂಥೆಟಿಕ್) ಹಾಲು ಮಾರಿ ಕೋಟ್ಯಧಿಪತಿಗಳಾಗಿದ್ದಾರೆ. ಅಂದಾಜು 2 ಕೋಟಿ ರೂ. ಮೌಲ್ಯದ ಹಾಲು ಶೇಖರಣಾ ಘಟಕ, ಮಿಲ್ಕ್ ಟ್ಯಾಂಕರ್, ಮೂರು ಬೃಹತ್ ಬಂಗಲೆ, ಐಷಾರಾಮಿ ಕಾರ್ ಮತ್ತು ಕೃಷಿ ಭೂಮಿಗೆ ಮಾಲೀಕರಾಗಿದ್ದಾರೆ.

Also read: ಬ್ಯಾಂಕ್-ಗಳಿಗೆ ನೀಡಿದ ಮೊಬೈಲ್​ ನಂಬರ್ ಚೇಂಜ್ ಮಾಡುವ ಮುನ್ನ ಎಚ್ಚರ; ಯಾಕೆ ಅಂತ ಈ ಮಾಹಿತಿ ನೋಡಿ..

ಇವರನ್ನು ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಢಾಕಪುರ ಗ್ರಾಮದ ನಿವಾಸಿಗಳಾದ ದೇವೇಂದ್ರ ಗುರ್ಜಾರ್ (42) ಮತ್ತು ಜೈವೀರ್ ಗುರ್ಜಾರ್ (40) ಅಪರಾಧಿಗಲಾಗಿದ್ದು, ಹಾಲು ಉತ್ಪಾದನೆ ಘಟಕಗಳಲ್ಲಿಯ ಅಕ್ರಮ ವ್ಯವಹಾರ ಮೂಲಕವೇ ಈ ಸೋದರರಿಬ್ಬರು ಶ್ರೀಮಂತರಾಗಿದ್ದು ಬೆಳಕಿಗೆ ಬಂದಿದೆ. ಕಳೆದ ಐದರಿಂದ ಏಳು ವರ್ಷಗಳಲ್ಲಿ ದಿಢೀರ್ ಶ್ರೀಮಂತರಾದ ಹಾಲು ಉತ್ಪಾದಕರ ಹೆಸರನ್ನು ಎಫ್‍ಐಆರ್ ನಲ್ಲಿ ಸೇರಿಸಲಾಗಿದೆ. ಮಧ್ಯ ಪ್ರದೇಶ ಮಾತ್ರವಲ್ಲದೇ ಹರ್ಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಿಗೂ ಇವರ ಘಟಕಗಳಲ್ಲಿ ಸಿದ್ಧಗೊಂಡ ಹಾಲು ಮತ್ತು ಉತ್ಪನ್ನಗಳು ಸರಬರಾಜು ಆಗುತ್ತಿತ್ತು. ಇದು ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನುವುದರ ಬಗ್ಗೆ ಅನುಮಾನಗಳು ಮೂಡಿವೆ.

ಹೇಗೆ ತಯಾರಾಗುತ್ತೆ ವಿಷದ ಹಾಲು?

ಸಿಂಥೆಟಿಕ್ ಹಾಲಿನಲ್ಲಿ ಮುಖ್ಯವಾಗಿ ಗ್ಲುಕೋಸ್, ಯೂರಿಯಾ, ಸಂಸ್ಕರಿಸಿದ ಎಣ್ಣೆ, ಹಾಲಿನ ಪೌಡರ್ ಮತ್ತು ನೀರು ಮಿಶ್ರಣ ಮಾಡಲಾಗುತ್ತಿತ್ತು. ಇವುಗಳ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್ (hydrogen peroxide) ಸಹ ಹಾಲಿನಲ್ಲಿ ಮಿಶ್ರಣ ಮಾಡಿ ಉಪ ಉತ್ಪನ್ನಗಳಾದ ಚೀಸ್ ಮತ್ತು ಮಾವಾ ಸಿದ್ಧಗೊಳಿಸಲಾಗುತ್ತಿತ್ತು. ಒಂದು ಲೀಟರ್ ಹಾಲು ಉತ್ಪಾದಿಸಲು 6 ರೂ. ವ್ಯಯಿಸಿ ಸಗಟು ಮಾರುಕಟ್ಟೆಯಲ್ಲಿ ಲೀಟರ್ ಗೆ 25 ರೂ.ನಂತೆ ಇವರು ಹಾಲು ಮಾರಾಟ ಮಾಡುತ್ತಿದ್ದರು. ಒಂದು ಲೀಟರ್ ಹಾಲಿನಿಂದ ಶೇ.70ರಿಂದ 75 ರಷ್ಟು ಲಾಭವನ್ನು ಗಳಿಸುತ್ತಿದ್ದರು. ಸಿಂಥೆಟಿಲ್ ಹಾಲಿನಲ್ಲಿ ಗ್ಲುಕೋಸ್, ಯೂರಿಯಾ, ರಿಫೈನ್ಡ್ ಆಯಿಲ್, ಹಾಲಿನ ಪೌಡರ್ ಮತ್ತು ನೀರನ್ನು ಮಿಶ್ರಣ ಮಾಡುತ್ತಿದ್ದರು. ಇದರ ಜೊತೆ ಸಿಂಥೆಟಿಕ್ ಚೀಸ್ ಮತ್ತು ಮಾವಾಗಳ ಲಾಭಾಂಶ ಸಹ ಹೆಚ್ಚಾಗಿತ್ತು ಎಂದು ಭಡೋರಿಯಾ ಮಾಹಿತಿ ನೀಡಿದ್ದಾರೆ.

Also read: ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

ಯೂರಿಯಾ ಮಿಶ್ರಿತ ಹಾಲಿನ ಸೇವನೆಯಿಂದ ಶಾಶ್ವತ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆಯ ಸೋಂಕು, ಹಸಿವು ಆಗದಿರುವುದು, ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಓರ್ವ ವ್ಯಕ್ತಿ ದೀರ್ಘ ಕಾಲದವರೆಗೆ ಈ ರೀತಿಯ ಕಲಬೆರಕೆ ಹಾಲು ಸೇವನೆ ಮಾಡಿದ್ರೆ ಆತ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಯಕೃತ್ತಿನ ತಜ್ಞ ಡಾ.ಸಂಜಯ್ ಕುಮಾರ್ ತಿಳಿಸಿದ್ದಾರೆ. ಆದರೆ ಹಣದ ಆಸೆಗಾಗಿ ಅಲ್ಲಿನ ಹಲವು ಜನರು ವಿಷದ ಹಾಲನ್ನು ತಯಾರಿಸುತ್ತಿದ್ದು. 10 ದೊಡ್ಡ ಡೈರಿ 200 ಹಾಲು ಸಹಕಾರಿ ಸಂಘಗಳ ಮೇಲೆ ನಿಷೇಧ ಹೇರಿದೆ. ಇದೆ ರೀತಿಯ ಹಾಲು ಬೆಂಗಳೂರಿನಲ್ಲಿ ಮಾರಾಟವಾಗುತ್ತಿದೆ. ಈ ಹಿಂದೆ ಹಲವು ವರದಿಗಳು ತಿಳಿಸಿವೆ ಅದಕ್ಕಾಗಿ ಹಾಲು ಖರೀದಿಸುವ ಮುನ್ನ ಪರೀಕ್ಷಿಸಿ.