ದಲಿತ ಮಕ್ಕಳು ಬಯಲಲ್ಲಿ ಮಲ ವಿಸರ್ಜನೆ ಮಾಡಿದ್ದಕ್ಕೆ ಮಕ್ಕಳನ್ನೇ ಹೊಡೆದು ಕೊಂದ ಗ್ರಾಮಸ್ಥರು.!

0
323

ದೇಶದಲ್ಲಿ ಇನ್ನೂ ದಲಿತರು ಎನ್ನುವ ಬೇಧವಿದ್ದು, ಈ ವರ್ಗದ ಜನರು ಹಲ್ಲೆಗೆ ಒಳಗಾಗುತ್ತಿದ್ದಾರೆ ಎನ್ನುವ ಮಾತುಗಳು ಬಹುದಿನಗಳಿಂದ ಕೇಳಿ ಬರುತ್ತಿದ್ದವು, ಆದರೆ ದೇಶದ ಜನರಿಗೆ ಜಾತಿ, ಧರ್ಮ ಎನ್ನುವ ವಿಷವೆಲ್ಲ ಇಲ್ಲದಾಗಿದೆ ಮಾನವನು ಒಬ್ಬನೇ ಎನ್ನುವ ವಿಚರದಲ್ಲಿದ್ದಾರೆ ಎನ್ನುವ ಹಲವು ಸುಧಾಕರ ಮಾತುಗಳು ಕೇಳಿಬರುತ್ತಿದ್ದವು, ಇದರಿಂದ ದಲಿತರು ಎನ್ನುವ ಕೆಟ್ಟ ಆಲೋಚನೆ ಹೋಗಿದೆ ಎನ್ನುವ ಜನರಿಗೆ ಆತಂಕ ಮೂಡಿಸುವ ಘಟನೆಯೊಂದು ನಡೆದಿದ್ದು, ಏನು ತಿಳಿಯದ ಚಿಕ್ಕ ಮಕ್ಕಳು ಬಯಲಲ್ಲಿ ಮಲವಿಸರ್ಜನೆ ಮಾಡಿದರು ಎಂದು ಇಡಿ ಊರಿನ ಜನರು ಹೊಡೆದು ಸಾಯಿಸಿದ ಘಟನೆ ಇಂದು ನಡೆದಿದೆ.

Also read: ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..

ಹೌದು ಏನು ತಿಳಿಯದ ದಲಿತ ಮಕ್ಕಳ ಮೇಲೆ ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಮನಕಲುಕುವ ಘಟನೆ ನಡೆದಿದ್ದು, ಇಡಿ ಮಾನವ ಕುಲಕ್ಕೆ ಅವಮಾನ ಎಂಬಂತ್ತಿದೆ. ಇಂದು ಬೆಳಗ್ಗೆ ಬಯಲಲ್ಲಿ ಸಿರ್ಸೋದ್ ಗ್ರಾಮದಲ್ಲಿ ದಲಿತ ಕುಟುಂಬದ 10ರ ಹರೆಯದ ಬಾಲಕ ಮತ್ತು 12ರ ಹರೆಯದ ಬಾಲಕಿ ಬಯಲಿಗೆ ಬಹಿರ್ದಸೆಗಾಗಿ ಹೋಗಿದ್ದಾರೆ. ಆಗ ಅದೇ ಗ್ರಾಮದ ಹಕೀಮ್ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳು ಬಹಿರ್ದೆಸೆ ಮಾಡುತ್ತಿರುವ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ನಂತರ ಇಬ್ಬರು ಮಕ್ಕಳನ್ನು ಅಲ್ಲಿನ ಗ್ರಾಮದವರು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ. ಎಂದು ಪೊಲೀಸರು ಹೇಳಿದ್ದಾರೆ.

Also read: ಅಂತ್ಯಸಂಸ್ಕಾರಕ್ಕೂ ದಾರಿ ಬಿಡದ ಮೇಲ್ವರ್ಗದವರು; ಶವಕ್ಕೆ ಹಗ್ಗ ಕಟ್ಟಿಸೇತುವೆಯಿಂದ ಇಳಿಸಿ ಅಂತ್ಯಕ್ರಿಯೆ ಮಾಡುತ್ತಿರುವ ದಲಿತರು..

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಈ ಹೊತ್ತಲ್ಲಿ ಆರೋಪಿಯೊಬ್ಬ ದುಷ್ಟ ಶಕ್ತಿಗಳನ್ನು ನಾಶ ಮಾಡುವಂತೆ ನನಗೆ ದೇವರು ಆದೇಶಿಸಿದ್ದರು. ಹಾಗಾಗಿ ನಾನು ಅವರನ್ನು ಹತ್ಯೆ ಮಾಡಿದೆ ಎಂದು ಪೊಲೀಸರಲ್ಲಿ ಹೇಳಿದ್ದಾನೆ. ಬುಧವಾರ ಬೆಳಗ್ಗೆ ಪಂಚಾಯತ್ ಭವನದ ಬಳಿ ಇರುವ ಬಯಲಿನಲ್ಲಿ ಮಕ್ಕಳು ಶೌಚ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಹಕೀಂ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳನ್ನು ಬೆದರಿಸಿದ್ದಾರೆ. ಆಮೇಲೆ ಲಾಠಿಯಿಂದ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಿರ್ಸೋಡ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿರುವ ಆರ್.ಎಸ್. ಧಾಕಡ್ ಹೇಳಿದ್ದಾರೆ.

Also read: ದೇವರ ಹರಕೆಗೆ ಮಾನವರ ಬಲಿ; ಸ್ವಂತ ಮಕ್ಕಳನ್ನೇ ವಿಚಿತ್ರವಾಗಿ ಬಲಿ ಪದ್ಧತಿ, ಒಂದೇ ಸ್ಥಳದಲ್ಲಿ ಪತ್ತೆಯಾದವು 227 ಮಕ್ಕಳ ಅಸ್ಥಿಪಂಜರ.!

ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302ರಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ಶಿವಪುರಿ ರಾಜೇಶ್ ಚಂಡೇಲ್ ಹೇಳಿದ್ದಾರೆ . ಮೂಢನಂಬಿಕೆ ಅಥವಾ ಅಸ್ಪೃಶ್ಯತೆಯೇ ಮಕ್ಕಳ ಹತ್ಯೆಗೆ ಕಾರಣವಾಯಿತೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇವಲ ಎರಡು ದಿನದ ಹಿಂದೆಯಷ್ಟೆ ಜಾರ್ಖಂಡ್​ನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಅನುಮಾನಿಸಿ ಇಬ್ಬರನ್ನು ಸಾಮೂಹಿಕವಾಗಿ ಥಳಿಸಿ ಕೊಲ್ಲಲಾಗಿತ್ತು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಪ್ರತಿರೋಧಕ್ಕೂ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಇಬ್ಬರು ದಲಿತ ಮಕ್ಕಳನ್ನು ಕೊಂದಿರುವುದು ಅಮಾನವೀಯ ದೇಶದಲ್ಲಿ ಇಂತಹ ಘಟನೆಗಳಿಗೆ ಕೊನೆ ಇಲ್ಲವೇ ಎಂಬ ಕೂಗು ಇದೀಗ ಜೋರಾಗಿ ಕೇಳಿ ಬರುತ್ತಿದೆ.