ತಮ್ಮ ಇಚ್ಛೆಗೆ ವಿರುದ್ಧವಾಗಿ ಗಣೇಶನನ್ನು ಕೂರಿಸಲಾಗಿದೆ ಎಂಬ ಕಾರಣಕ್ಕೆ ಗಣಪನ ಮೂರ್ತಿಯನ್ನೇ ಒಡೆದು ಹಾಕಿದ ಇಬ್ಬರು ಯುವಕರು.!

0
353

ದೇಶದಲ್ಲಿ ಗಣೇಶ್ ಹಬ್ಬವೆಂದರೆ ಅದೇನೋ ಸಡಗರ, ಭಕ್ತಿ ಎಲ್ಲರಲ್ಲಿವೂ ಇರುತ್ತದೆ ಅದಕ್ಕಾಗಿಯೇ ಲಕ್ಷ ದಿಂದ ಹಿಡಿದು ಕೋಟಿಯವರೆಗೆ ಗಣಪನ ಮೂರ್ತಿಗೆ ಕರ್ಚು ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅದರಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗೆ ದಕ್ಕೆ ಆಗದ ಹಾಗೆ ನೋಡಿಕೊಂಡು ಆಚರಣೆ ಮಾಡುವುದು ಇದೆ. ಆದರೆ ಇಲ್ಲಿಬ್ಬರು ಕುಡಿದ ನಸೆಯಲ್ಲಿ ಗಣೇಶನ ಮೂರ್ತಿಯನ್ನೇ ನುಚ್ಚುನೂರು ಮಾಡಿದ್ದು, ದೇಶದಲ್ಲೇ ಈ ತರಹದ ಘಟನೆ ನಡೆದಿದ್ದು ಮೊದಲ ಪ್ರಕರಣ ಎನ್ನಲಾಗಿದೆ.

@publictv.in

ಹೌದು ದೇಶ ವಲ್ಲದೆ ವಿದೇಶದಲ್ಲಿವೂ ಆಚರಣೆ ಮಾಡುತ್ತಿರುವ ಗಣೇಶ್ ಹಬ್ಬ ಹಿಂದೂಗಳಿಗೆ ವಿಶೇಷವಾಗಿದೆ ಆದರೆ ಹಾಸನದಲ್ಲಿ ಇಬ್ಬರೂ ಪುಂಡರು ಮಾಡಿದ ಕೃತ್ಯ ಭಾರಿ ವಿರೋದಕ್ಕೆ ಕಾರಣವಾಗಿದೆ. ಅವರ ಅನುಮತಿ ಇಲ್ಲದೆ ಮೂರ್ತಿ ಕೂರಿಸಿದ ಹಿನ್ನೆಲೆಯಲ್ಲಿ ರೌಡಿ ಅವತಾರ ತಾಳಿದ ಇಬ್ಬರು ಯುವಕರು ಕುಡಿದ ಮತ್ತಿನಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ಮೂರ್ತಿಯನ್ನು ಧ್ವಂಸಗೊಳಿಸಿ ದುಷ್ಟತನ ಮೆರೆದಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಕಳ್ಳಿಕೊಪ್ಪಲು ಗ್ರಾಮದ ನಿವಾಸಿಗಳಾದ ಹರೀಶ ಮತ್ತು ಸಚಿನ್ ಈ ಕೃತ್ಯವೆಸೆಗಿದ್ದಾರೆ.

ಇದಕ್ಕೆ ಕಾರಣವೆಂದರೆ ಊರಿನಲ್ಲಿ ಯಾವುದೇ ಆಚರಣೆ ಇವರ ನೇತೃತ್ವದಲ್ಲಿ ನಡೆಯಬೇಕು ಎನ್ನುವುದು ಇವರ ಇಚ್ಚೆಯಾಗಿದ್ದು, ಇದರ ವಿರುದ್ಧವಾಗಿ ಗಣೇಶನನ್ನು ಕೂರಿಸಲಾಗಿದೆ ಎಂಬ ಕಾರಣಕ್ಕೆ ಇಬ್ಬರೂ ಕೋಪಗೊಂಡಿದ್ದರು. ಆದ್ದರಿಂದ ಸೋಮವಾರ ರಾತ್ರಿ ಕುಡಿದು ಬಂದು ಗಣಪನ ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಈ ವೇಳೆ ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಅವರಿಗೂ ಯುವಕರು ಅವಾಜ್ ಹಾಕಿದ್ದಾರೆ. ತಮ್ಮ ಮಾತಿಗೆ ಬೆಲೆಕೊಡದ ಗ್ರಾಮಸ್ಥರ ಮಾತು ಏಕೆ ಕೇಳಬೇಕು ಎನ್ನುವ ರೀತಿ ಇಬ್ಬರು ವರ್ತಿಸಿದ್ದಾರೆ. ಎಲ್ಲೆಡೆ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ, ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾತ್ರ ಯುವಕರ ಕೋಪಕ್ಕೆ ಗಣೇಶ ಮೂರ್ತಿ ಚೂರು ಚೂರಾಗಿದೆ.

@publictv.in

ಗಣೇಶ್ ಹಬ್ಬದಲ್ಲಿ ಕೆಲವು ಕಡೆಗೆ ಗದಲ್ಲಗಳು ಗಲಾಟೆಗಳು ನಡೆವುದು ಸಾಮಾನ್ಯ ಆದರೆ ಎಷ್ಟೇ ಹೊಡೆದಾಡಿ ಅಪಾಯಗಳು ಸಂಭವಿಸಿದರೂ ಕೂಡ ಗಣೇಶ್ ಮೂರ್ತಿಗೆ ಯಾವುದೇ ವಿಘ್ನವಾಗದಂತೆ ನೋಡಿಕೊಳ್ಳುತ್ತಾರೆ. ಕೆಲವು ಸ್ಥಳಗಳಲ್ಲಿ ಅಂತು ಹಿಂದೂ ಮುಸ್ಲಿಂರು ಗಣೇಶನ ಹಬ್ಬದಲ್ಲಿ ಜಗಳವಾಡಿ ಪೊಲೀಸ್ ಸ್ಟೇಷನ್ ಹೋಗುವುದು ನಡೆದಿರುತ್ತೆ, ಆದರು ಕೂಡ ಗಣೇಶ್ ಮೂರ್ತಿಗೆ ದಕ್ಕೆ ಆಗುವುದಿಲ್ಲ. ಇಂತಹದರಲ್ಲಿ ಈ ಯುವಕರು ಇಬ್ಬರು ಹಿಂದೂಗಳಾಗಿದ್ದು ಗಣೇಶ್ ಮೂರ್ತಿಯನ್ನೇ ಹಾಳು ಮಾಡಿದ್ದು, ಊರಿನ ತುಂಬೆಲ್ಲ ಬೇಸರ ತಂದಿದೆ ಎಂದು ಜನರು ಹೇಳಿದ್ದಾರೆ. ಹಾಗೆಯೇ ಈ ಪ್ರಕರಣದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರಿ ವಿರೋಧ ವ್ಯಕ್ತವಾಗಿದೆ.

ಮಾಹಿತಿ ಕೃಪೆ: Public tv