ಆರ್ಥಿಕ ದುಸ್ಥಿತಿಯಿಂದ ನಿರುದ್ಯೋಗ ಜಾಸ್ತಿಯಾಗುತ್ತಿದೆ, ಅತೀ ಕಡಿಮೆ ಬಂಡವಾಳದಿಂದ ಲಾಭದಾಯಕ ಉದ್ಯಮ ಶುರು ಮಾಡುವುದು ಹೇಗೆ ಅಂತ ಹೇಳ್ತೀವಿ ಓದಿ!!

0
758

ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸಿನೆಸ್ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್ ಐಡಿಯಾ ಆಗಿ ಹೊರ ಹೊಮ್ಮುತ್ತಿದೆ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಮಳಿಗೆ ಬಾಡಿಗೆ ಹಿಡಿಯುವುದು ಅತಿ ಕಷ್ಟಕರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು ಅತಿ ಸಹಜವಾಗುತ್ತಿದೆ. ಪಟ್ಟಣ ಹಾಗೂ ನಗರಗಳಲ್ಲಿ ಇಂದು ಒಂದು ಚಿಕ್ಕ ಮಳಿಗೆ ಬಾಡಿಗೆ ಹಿಡಿಯಬೇಕೆಂದರೂ ದೊಡ್ಡ ಮೊತ್ತದ ಭದ್ರತಾ ಠೇವಣಿ ಹಾಗೂ ಮಾಸಿಕ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್ನು ಸ್ವಂತದ ಮಳಿಗೆ ಖರೀದಿಸಬೇಕೆಂದರೆ ನೀವು ಶ್ರೀಮಂತರಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಆದರೆ ಈ ಎಲ್ಲ ಪ್ರತಿಕೂಲ ಸ್ಥಿತಿಗಳನ್ನು ಮೀರಿ ನೀವು ಮನೆಯಿಂದಲೇ ಲಾಭದಾಯಕವಾದ ಉದ್ಯಮ ಆರಂಭಿಸಿ ಹಣ ಸಂಪಾದಿಸಬಹುದು.

ಪ್ರಾಮಾಣಿಕತೆ ಹಾಗೂ ಪರಿಶ್ರಮ ಇದ್ದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಮನೆಯಿಂದಲೇ ಮಾಡಬಹುದಾದ 20 ಪ್ರಮುಖ ಬಿಸಿನೆಸ್ ಐಡಿಯಾಗಳನ್ನು ಇಲ್ಲಿ ತಿಳಿಸಲಾಗಿದ್ದು, ನೀವೂ ನೋಡಿ.

ಮೋಂಬತ್ತಿ ತಯಾರಿಕೆ:

ಮೋಂಬತ್ತಿ ತಯಾರಿಕಾ ಉದ್ಯಮವನ್ನು ಸಣ್ಣ ಪ್ರಮಾಣದ ಅರೆಕಾಲಿಕ ವ್ಯಾಪಾರವಾಗಿ ಪ್ರಾರಂಭಿಸಬಹುದು. ಮೋಂಬತ್ತಿಗಳನ್ನು ಧಾರ್ಮಿಕ ಉದ್ದೇಶ ಮತ್ತು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇದ ಲ್ಲದೆ ಪರಿಮಳ ಭರಿತ ಮೋಂಬತ್ತಿ ಹೆಚ್ಚು ಮಾರಾಟವಾಗುತ್ತಿರುವುದಲ್ಲದೆ ಅತ್ಯಂತ ಜನ ಪ್ರಿಯವಾಗಿದೆ. ಮೋಂಬತ್ತಿ ಲಾಭದಾಯಕ ಸಣ್ಣ ಪ್ರಮಾಣದ ಉದ್ಯಮ ವಾಗಿದೆ.

ಉಪ್ಪಿನಕಾಯಿ

ಉಪ್ಪಿನಕಾಯಿ ಭಾರತದಲ್ಲಿ ಒಂದು ಸಾಂಪ್ರದಾಯಿಕ ಆಹಾರ ಪದಾರ್ಥವಾಗಿದೆ ಮತ್ತು ಇದು ಅತ್ಯಂತ ಜನಪ್ರಿಯವಾಗಿದೆ. ಪ್ರತಿ ಭಾರತೀಯ ಮನೆಯಲ್ಲೂ ನೀವು ಉಪ್ಪಿನಕಾಯಿಯ ಕನಿಷ್ಠ ಒಂದು ವಿಧವನ್ನು ಕಾಣಬಹುದು. ಆದ್ದರಿಂದ, ನೀವು ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಉಪ್ಪಿನಕಾಯಿ ವ್ಯವಹಾರವು ಸುರಕ್ಷಿತ ಮತ್ತು ಸುಲಭವಾದ ಆಯ್ಕೆಯಾಗಿದೆ. ಭಾರತೀಯ ಮಾರುಕಟ್ಟೆಯ ಹೊರತಾಗಿಯೂ ಕೂಡ, ಭಾರತೀಯ ಉಪ್ಪಿನಕಾಯಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಂದಾಜು 20,000 ರಿಂದ 25,000 ರೂ. ಗಳ ಸಣ್ಣ ಬಂಡವಾಳದೊಂದಿಗೆ ನಿಮ್ಮ ಮನೆಯಲ್ಲಿ ಈ ವ್ಯವಹಾರವನ್ನು ನೀವು ಪ್ರಾರಂಭಿಸಬಹುದು.

ಅಗರಬತ್ತಿ ತಯಾರಿಕೆ :

ಅಗರಬತ್ತಿಗಳ ಸಣ್ಣ-ಪ್ರಮಾಣದ ಉತ್ಪಾದನೆ ಮಾಡುವ ಮೊದಲ ಹಂತವೆಂದರೆ ಮಾರುಕಟ್ಟೆಯಿಂದ ಶ್ರೀಗಂಧದ ಮರ, ಮಲ್ಲಿಗೆ, ಗುಲಾಬಿ, ಚಂಪಾ ಮುಂತಾದ ಸುಗಂಧ ದ್ರವ್ಯಗಳೊಂದಿಗೆ ಬಿದಿರಿನ ತುಂಡುಗಳು ಮತ್ತು ಸಾರಭೂತ ತೈಲಗಳನ್ನು ಖರೀದಿಸುವುದು ನಂತರ ಅಗರಬತ್ತಿ ಕೋಲುಗಳಿಗೆ ಎಣ್ಣೆಯನ್ನು ಲೇಪಿಸಿ ಒಣಗಿಸುವುದು. 50,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಅಗರಬತ್ತಿಗಳನ್ನು ತಯಾರಿಸುವ ಯಂತ್ರಗಳನ್ನು ಬೃಹತ್ ಉತ್ಪಾದನೆಗೆ ಬಳಸಬಹುದು.

ಬೆಲ್ಟ್ ತಯಾರಿಕೆ :

ಇದು ಮನೆಯಿಂದ ಪ್ರಾರಂಭ ಮಾಡಬಹುದಾದ ಮತ್ತೊಂದು ಸಣ್ಣ ಪ್ರಮಾಣದ ಉತ್ಪಾದನಾ ಉದ್ಯಮ ವಾಗಿದೆ. ನೀವು ಚರ್ಮ ಸಂಬಂಧಿತ ಉತ್ಪಾ ದನೆಗಳ ಸಮೂಹ ಉತ್ಪಾದನೆಯಲ್ಲಿ ತೊಡಗಿ ಸಿಕೊಳ್ಳಬಹುದು ಮತ್ತು ಅದನ್ನು ಗ್ರಾಹಕ ಅಥವಾ ಸಗಟು ವ್ಯಾಪಾರಿಗಳಿಗೆ ಮಾರ ಬಹುದು. ಈ ಉದ್ಯಮವನ್ನು ಪ್ರಾರಂಭಿಸುವ ಮೊದಲು ಸರಿಯಾದ ಮಾರುಕಟ್ಟೆ ಸಮೀಕ್ಷೆ ಮತ್ತು ಕಾರ್ಯ ಸಾಧ್ಯತಾ ಅಧ್ಯಯನವನ್ನು ಮಾಡಿ.

ಬ್ರೆಡ್ ತಯಾರಿಕೆ :

ಇದು ಆಹಾರಕ್ಕೆ ಸಂಬಂ ಧಿಸಿರುವ ತಯಾರಿಕಾ ಉದ್ಯಮ. ನೀವು ಬೇಕರ್ ಆಗಿ ನಿಮ್ಮ ಸ್ವಂತ ಬ್ರೆಡ್ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಬಹುದು.

ಬಿಸ್ಕತ್ತು ತಯಾರಿಕೆ :

ಬಿಸ್ಕತ್ತು ಇನ್ನೊಂದು ಲಾಭದಾಯಕ ಉದ್ಯಮವಾಗಿದೆ. ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾ ರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸ ಬಹುದು.

ಕ್ಯಾಂಡಿ ತಯಾರಿಕೆ :

ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡ ಬಹುದು.

ಐಸ್ ಕ್ರೀಂ ತಯಾರಿಕೆ :

ಐಸ್ ಕ್ರೀಂ ವಿವಿಧ ರುಚಿ, ಬಣ್ಣ ಮತ್ತು ರೂಪಗಳಲ್ಲಿ ದೊರೆ ಯುತ್ತದೆ. ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದ ವ್ಯಾಪಾರಕ್ಕಾಗಿ, ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಜೇನು ಸಂಸ್ಕರಣೆ :

ಜೇನು ಸಂಸ್ಕರಣೆ ಮತ್ತೊಂದು ಉತ್ಪಾದನಾ ಉದ್ಯಮವಾಗಿದೆ. ಎರಡು ವಿಧಗಳಲ್ಲಿ ಜೇನು ಸಂಸ್ಕರಣೆಯನ್ನು ಮಾಡಬಹುದು. ಒಂದು ಸ್ವಯಂಚಾಲಿತ ಪದ್ಧತಿ ಇನ್ನೊಂದು ಕೈಯಿಂದ ಸಂಸ್ಕರಿ ಸುವುದು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು , ಮನೆಯಲ್ಲೂ ಮಾಡಬಹುದು.

ಜಾಮ್ ಜೆಲ್ಲಿ ತಯಾರಿಕೆ :

ಜಾಮ್ ಜೆಲ್ಲಿ ತಯಾರಿಕೆಗೆ ಕಚ್ಚಾ ಪದಾರ್ಥಗಳಾದ ಮಾಗಿದ ಹಣ್ಣುಗಳು ಮತ್ತು ಇತರ ಪದಾರ್ಥಗಳು ಲಭ್ಯವಿರಬೇಕಾಗುತ್ತದೆ. ಇದನ್ನು ಕಡಿಮೆ ಬಂಡ ವಾಳದೊಂದಿಗೆ ಆರಂಭಿಸಬಹುದು.

ಕೇಶೋತ್ಪನ್ನಗಳ ತಯಾರಿಕೆ :

ನೀವು ವೇಗವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳಾದ ಕೇಶ ತೈಲ, ಕ್ರೀಮ್ ಮುಂತಾ ದವುಗಳನ್ನೂ ತಯಾರಿಸಬಹುದು. ಈ ಉದ್ಯ ಮವು ಹೆಚ್ಚು ಬಂಡವಾಳವನ್ನು ಬೇಡುವುದಿಲ್ಲ. ಆದರೂ,ನೀವು ಉತ್ಪನ್ನಗಳ ಪ್ರಚಾರಕ್ಕಾಗಿ ಹಣ ವ್ಯಯಿಸಬೇಕಾಗುತ್ತದೆ.

ಡಿಟರ್ಜೆಂಟ್ ತಯಾರಿಕೆ :

ಡಿಟರ್ಜೆಂಟ್ಅಥವಾ ಸೋಪ್ ತಯಾರಿಕೆ ಮತ್ತೊಂದು ಗೃಹಾಧಾರಿತ ಉತ್ಪಾದನಾ ಉದ್ಯಮವಾಗಿದೆ. ಡಿಟರ್ಜೆಂಟ್ ಮಾಡುವ ಪ್ರಕ್ರಿಯೆಯು ಸುಲಭ ವಾಗಿದ್ದು, ಕಡಿಮೆ ಬಂಡವಾಳದ್ದಾಗಿದೆ.

ಮೇಕಪ್ ಉತ್ಪನ್ನಗಳ ಉತ್ಪಾದನೆ :

ಮಹಿಳೆ ಯರು ಮೇಕಪ್ ಪ್ರಿಯರು. ಅವರು ಪ್ರತಿ ಸಂದರ್ಭದಲ್ಲೂ ಮೇಕಪ್ಗಾಗಿ ಬಹಳ ಹಣ ಖರ್ಚು ಮಾಡುತ್ತಾರೆ. ಇದರಿಂದ ಸ್ಪೂರ್ತಿ ಪಡೆದು ಮೇಕಪ್ ಉತ್ಪನ್ನಗಳ ಉತ್ಪಾದನೆಯ ಉದ್ಯಮವನ್ನು ಆರಂಭಿಸುವ ಬಗ್ಗೆ ನೀವು ಯೋಚಿಸಬಹುದು.

ಎಲೆಕ್ಟ್ರಿಕ್ ಫಿಟ್ಟಿಂಗ್ ಪ್ರೊಡಕ್ಷನ್ :

ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳಿಲ್ಲದೆ ಏನೂ ಕೆಲಸ ನಡೆಯುವುದಿಲ್ಲ. ಆದ್ದರಿಂದ ಎಲೆಕ್ಟ್ರಿಕ್ ಫಿಟ್ಟಿಂಗ್ ಉದ್ಯಮವನ್ನು ಪ್ರಾರಂಭಿಸುವುದು ಉತ್ತಮ ಉದ್ಯಮವಾಗಿದೆ.

ಏರ್ ಫ್ರೆಶನರ್ ನಿರ್ವಾಹಕ :

ಏರ್ ಫ್ರೆಶನರ್ ಸಮೂಹ ಉತ್ಪಾದನೆಯ ಇನ್ನೊ ಂದು ಉತ್ಪನ್ನವಾಗಿದೆ. ಏರ್ ಫ್ರೆಶನರ್ ಗೆ ದೊಡ್ಡ ಮಾರುಕಟ್ಟೆಯಿದ್ದು, ಅದನ್ನು ದ್ರವ, ಅನಿಲ ಮತ್ತು ಘನ ಸ್ವರೂಪಗಳಲ್ಲಿ ಉತ್ಪಾದಿ ಸಬಹುದು. ಏರ್ ಫ್ರೆಶನರ್ಗೆ ವಿಶಿಷ್ಟ ಮತ್ತು ಹಿತಕರವಾದ ಸುವಾಸನೆ ಇರುವುದು ಮುಖ್ಯ.

ಕಸೂತಿ ಹಾಕುವುದು :

ಕಸೂತಿ ಮಾಡು ವುದು ಮುಂದಿನ ವ್ಯಾಪಾರವಾಗಿದೆ. ಈ ವ್ಯಾಪಾರದಲ್ಲಿ ನೀವು ಹೊಸಬಗೆಯ ಕಸೂತಿ ವಿನ್ಯಾಸವನ್ನು ವಿನ್ಯಾಸಗೊಳಿಸುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ನೀವು ಕಡಿಮೆ ದರ್ಜೆಯ ಯಂತ್ರ ಅಥವಾ ಸುಸಜ್ಜಿತ ಉಪಕರಣಗಳನ್ನು ಉಪಯೋಗಿಸಿಕೊಂಡು ಕಸೂತಿ ಕೆಲಸ ಮಾಡಬಹುದು.

ಕಾಗದ ತಯಾರಿಕೆ :

ಕಾಗದಗಳು ಮತ್ತು ಸ್ಟೇಷನರಿ ವಸ್ತುಗಳು ಶಿಕ್ಷಣ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಯಾವಾಗಲೂ ಬೇಡಿಕೆ ಯಲ್ಲಿರುತ್ತದೆ. ಕಾಗದ ತಯಾರಿಕಾ ಉದ್ಯಮವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ.

ಆಭರಣ ತಯಾರಿಕೆ :

ಆಭರಣ ತಯಾ ರಿಕೆಯು ಅಧಿಕ ಬಂಡವಾಳದ ಉದ್ಯಮವಾಗಿದೆ. ಈ ವ್ಯಾಪಾರಕ್ಕೆ ಆಭರ ಣಗಳ ನಮೂನೆಯ ಆಧಾರದ ಮೇಲೆ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ. ನೀವು ಚಿನ್ನ ಅಥವಾ ವಜ್ರದ ಆಭರಣಗಳನ್ನು ತಯಾರಿಸಲು ಹೊರಟಿದ್ದರೆ, ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಪೆನ್ಸಿಲ್ ರಬ್ಬರ್ ತಯಾರಿಕೆ :

ವಿದ್ಯಾ ರ್ಥಿಗಳು ಮತ್ತು ಶಿಕ್ಷಕರು ಬಳಸುವ ಅತ್ಯಗತ್ಯ ವಸ್ತುಗಳಾಗಿವೆ. ಪೆನ್ಸಿಲ್ ಮತ್ತು ರಬ್ಬರ್ಗೆ ದೊಡ್ಡ ಮಾರುಕಟ್ಟೆ ಇದೆ. ನೀವು ಈ ವಸ್ತುಗಳಿಗೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸಬಹುದು.

ಕಾರ್ಪೆಟ್ ತಯಾರಿಕೆ :

ರಬ್ಬರ್ ಕಾರ್ಪೆಟ್ಗಳಿಗೆ ನಿಜಕ್ಕೂ ದೊಡ್ಡ ಮಾರು ಕಟ್ಟೆಯಿದೆ. ಈ ರೀತಿಯ ವ್ಯಾಪಾರಕ್ಕಾಗಿ ನೀವು ಉತ್ಪಾದನಾ ಕಾರ್ಖಾನೆಯನ್ನು ತೆರೆದರೆ, ಖಂಡಿತವಾಗಿಯೂ ಅಲ್ಪಾವಧಿಯಲ್ಲಿಯೇ ಯಶಸ್ವಿಯಾಗಬಹುದು. ಈ ವ್ಯಾಪಾರವನ್ನು ಪ್ರಾರಂಭಿಸುವ ಮುನ್ನ ನೀವು ಸೂಕ್ತ ಕೌಶಲವನ್ನು ಕಲಿತುಕೊಳ್ಳಬೇಕು.

Also read: ಸ್ವಂತ ಉದ್ಯಮ ಸ್ಥಾಪಿಸಲು ಹಣದ ತೊಂದರೆಯಿದ್ರೆ, ಇದನ್ನು ಓದಿ.. ಈ ಸರ್ಕಾರಿ ಯೋಜನೆಗಳು ನಿಮ್ಮ ನೆರವಿಗೆ ಬರುತ್ತೆ!!