ದೋಸೆಯ ಕ್ಯಾಪಿಟಲ್ ಸಿಟಿ ಎಂದು ಪ್ರಸಿದ್ದಿ ಪಡೆದಿರುವ ಬೆಂಗಳೂರಿನಲ್ಲಿ ದೋಸೆ ಸಿಗುವ 20 ಸೂಪರ್ ಜಾಗಗಳು ಇಲ್ಲಿವೆ ನೋಡಿ..

0
1853

ಬೆಂಗಳೂರಲ್ಲಿ ದೋಸೆ ತಿನ್ನಬೇಕಾದರೆ ಇಲ್ಲಿಗೆ ಹೋಗಿ.

ಬೆಂಗಳೂರು ಯಾವುದಕ್ಕೆ ಹೆಸರು ವಾಸಿಯಾಗಿದೆ ಗೊತ್ತಿಲ್ಲ, ಆದ್ರೆ ದೋಸೆಗೆ ಮಾತ್ರ ಕ್ಯಾಪಿಟಲ್ ಸಿಟಿ ಅಂತ ಹೆಸರು ಪಡೆದಿದೆ. ಈ ರಾಜಧಾನಿಯಲ್ಲಿ ಸಿಗುವ ಗರಿಗರಿಯಾದ ಗೋಲ್ಡ್ ಕಲರ್ ದೋಸೆ ಸವಿಯುವುದೇ ಒಂದು ರೋಚಕ ಎನ್ನಬಹುದು. ಇಂತಹ ದೊಡ್ಡ ನಗರಕ್ಕೆ ಬಂದು ದೋಸೆ ತಿನ್ನದೇ ಯಾರ್ ಹೋಗ್ತಾರೆ ಹೇಳಿ? ಹಾಗಾದ್ರೆ ಇಷ್ಟೊಂದು ಪ್ರಶಿದ್ದವಾದ ರುಚಿರುಚಿಯಾದ ದೋಸೆಗಳು ಸಿಗುವ ಸ್ಥಳಗಳು ಇಲ್ಲಿವೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ಹೋಟೆಲ್-ನ ದೋಸೆಗೆ ಎಷ್ಟು ಬೇಡಿಕೆ ಇರುತ್ತೆ ಅಂದ್ರೆ, ಘಂಟೆಗಟ್ಟಲೆ ಕಾದ್ರೂನು ಸಿಗೋದು ಕೇವಲ Half-ದೋಸೆ!!

20 ಸೂಪರ್ ಅಡ್ಡಾಗಳು

1. 99 ವೆರೈಟೀಸ್ – ಕೋರಮಂಗಲ/ಇಂದಿರಾನಗರ.
ಹೆಸರೇ ಹೇಳುತ್ತೆ – ಬೇರೆಬೇರೆ ತರ ದೋಸೆಗಳ್ನ ಮಾಡ್ತಾರೆ. ಮೂರು ತರ ಚಟ್ನಿ ಕೊಡ್ತಾರೆ. ದೋಸೆ ಜೊತೆಗೆ ನೂಡಲ್ಸ್, ಪನೀರ್, ಪಾವ್ ಭಾಜಿ… ಎಲ್ಲಾ ಸಿಗುತ್ತೆ.!

2. ಸ್ಕಂದ ದೋಸೆ ಕ್ಯಾಂಪ್ – ಕೇಂಬ್ರಿಡ್ಜ್ ಲೇಔಟ್
ಇಂದಿರಾನಗರ ಮತ್ತು ಸುತ್ತಮುತ್ತಲಲ್ಲಿ ಇಲ್ಲಿಗಿಂತ ಚೆನ್ನಾಗಿ ದೋಸೆ ಸಿಗಲ್ಲ ಅನ್ನಬಹುದು! ಕೇಂಬ್ರಿಡ್ಜ್ ರೋಡಲ್ಲಿ ಸಾಯಿ ಬಾಬಾ ದೇವಸ್ಥಾನದ ಪಕ್ಕ ಇದೆ. ಇಲ್ಲಿಯ ತುಪ್ಪದ ದೋಸೆ / ಸಾದಾ ದೋಸೆ ಒಮ್ಮೆ ತಿಂದರೆ ಸಾಕು, ಇನ್ನೂ ಬೇಕು ಇನ್ನೂ ಬೇಕು ಅಂತೀರಿ!

3. ಜನತಾ ಹೋಟೆಲ್ – ಮಲ್ಲೇಶ್ವರ.
ಮಲ್ಲೇಶ್ವರದ ಗಲ್ಲಿಗಳಲ್ಲಿ ಹುಡುಕಿಕೊಂಡು ಹೋಗಬೇಕು ನೀವು ಈ ಹಳೇ ಹೋಟೆಲ್ನ. ಇಲ್ಲೀ ದೋಸೆ ಜತೆಗೆ ಒಂದು ಸೂಪರ್ ಫಿಲ್ಟರ್ ಕಾಫಿ ಕುಡಿದರೆ ಸ್ವರ್ಗ!

4. ಸಿದ್ದಪ್ಪ ಹೋಟೆಲ್ – ಸಂಪಂಗಿರಾಮ ನಗರ
ಬಾಳೆಲೆ ಮೇಲೆ ತುಪ್ಪದ ದೋಸೆ ಅಂದ್ರೆ ಇಲ್ಲೀಗೆ ಬರಬೇಕು! ಇಲ್ಲಿ ಇದನ್ನ ಬಿಟ್ಟರೆ ಇಡ್ಲಿ ಮತ್ತೆ ರೈಸ್ ಬಾತ್ ಮಾತ್ರ ಸಿಗೋದು.

5. ಶ್ರೀ ಸಾಗರ್ – ಮಲ್ಲೇಶ್ವರ
ಈ ಹೋಟೆಲ್ನ ಮೊದಲು CTR ಅಂತಾ ಇದ್ರು. ಬೆಂಗಳೂರಲ್ಲಿ ಪ್ರಾಯಶಃ ಇಲ್ಲಿಗಿಂತ ಗರಿಗರಿ ದೋಸೆ ಇನ್ನೆಲ್ಲೂ ಸಿಗೋದಿಲ್ಲವೇನೋ! ಇವರ ಬೆಣ್ಣೆ ಮಸಾಲೆ ದೋಸೆಗೆ 40 ರೂ, ಅಷ್ಟೆ. ಒಂದೆರಡಾದರೂ ಬಾರಿಸಬಹುದು

6. ಕೊನಾರ್ಕ್ – ರೆಸಿಡೆನ್ಸಿ ರಸ್ತೆ
ಇದೂ ಬೆಂಗಳೂರಿನ ಹಳೇ ಹೋಟೆಲ್ಗಳಲ್ಲಿ ಒಂದು. ಇಲ್ಲೂ ಹಲವು ಬಗೆಯ ದೋಸೆ ಸಿಗುತ್ತೆ. ಇವರ ಚೀಸ್ ದೋಸೆ ಒಮ್ಮೆ ಟ್ರೈ ಮಾಡಿ ನೋಡಿ!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

7. ಮಾವಳ್ಳಿ ಟಿಫಿನ್ ರೂಂ – ಲಾಲ್ಬಾಗ್
MTR ಮಸಾಲೆ ದೋಸೆ ಅಂದ್ರೆ ಕೇಳಬೇಕಾ? ಇಡೀ ಪ್ರಪಂಚದಲ್ಲೇ ವರ್ಲ್ಡ್ ಫೇಮಸ್ಸು… ಇವರ ಚಟ್ನೀನೂ ಅಷ್ಟೇ!

8. ಅಡಿಗಾಸ್ – ಬೆಂಗಳೂರಲ್ಲಿ ಎಲ್ಲಾ ಕಡೆ ಇದೆ
ಇವರ ದೋಸೆ ಎಷ್ಟು ಗರಿಗರಿ ಇರುತ್ತೆ ಅಂದರೆ ನಂಬಕ್ಕಾಗಲ್ಲ! ಚಟ್ನಿ + ಸಾಂಬರ್ ಎರಡೂ ಸೇರಿಸಿ ಬಾರಿಸಿ!

9. ರಾಮು ಟಿಫನ್ ಸೆಂಟರ್ – ವಿವಿ ಪುರಂ
ವಿವಿಪುರಂ ನಲ್ಲಿ ತಿಂಡಿಪೋತರ ಬೀದಿ ಅಂತಾನೇ ಒಂದಿದೆ! ಅದರಲ್ಲಿ ರಾಮು ಟಿಫನ್ ಸೆಂಟರ್ ದೋಸೆ ಅಂದ್ರೆ ಬೆಂಗಳೂರಲ್ಲೇ ವರ್ಲ್ಡ್ ಫೇಮಸ್ಸು. ಬಿಡಬೇಡಿ, ಜಮಾಯಿಸಿ!

10. ಸ್ಟ್ರೀಟ್ ಫುಡ್ – ಜುವೆಲರ್ಸ್ ಸ್ಟ್ರೀಟ್
ಈ ಹೋಟೆಲ್ನ ವಯಸ್ಸಾದ ಗಂಡ-ಹೆಂಡತಿ ನಡೆಸ್ತಾರೆ… ಕರ್ಮಶ್ರಿಯಲ್ ಸ್ಟ್ರೀಟಲ್ಲಿ ಇಲ್ಲಿಗಿಂತ ಒಳ್ಳೆ ದೋಸೆ ಸಿಗೋದು ಕಷ್ಟ ಅನ್ನಬಹುದು! ದುಡ್ಡೂ ಅಂತ ಜಾಸ್ತಿ ಇಲ್ಲ. ಶಾಪಿಂಗ್ ಮಾಡಿ ಹೊಟ್ಟೆ ಹಸಿದರೆ ನೆನಪಿಸಿಕೊಳ್ಳಿ.

11. ಎಸ್.ಎಲ್.ವಿ. ರಿಫ್ರೆಷ್ಮೆಂಟ್ಸ್ – ಬನಶಂಕರಿ
ಇಲ್ಲೀ ಮಸಾಲೆ ದೋಸೆ ತಿನ್ನಕ್ಕೆ ದಿನಾ ಬೆಳಗ್ಗೆ ದೊಡ್ಡ ಕ್ಯೂ! ಇವರ ದೋಸೆ ಒಳಗಿನ ಮಸಾಲೆ ಒಂತರಾ ಸ್ಪೆಶಲ್ಲು. ದೋಸೆ ಇಷ್ಟ ಪಡೋರು ತಿನ್ನಲೇಬೇಕು…

12. ದಾವಣೆರೆ ಬೆಣ್ಣೆ ದೋಸೆ – ಬಸವೇಶ್ವರನಗರ
ಬೆಣ್ಣೆ ದೋಸೆ ತಿನ್ನಕ್ಕೆ ದಾವಣಗೆರೆಗೆ ಹೋಗಬೇಕಾಗಿಲ್ಲ… ಇಲ್ಲಿ ತಿಂದರೆ ಅದೇ ಸ್ವರ್ಗಕ್ಕೆ ಡೈರೆಕ್ಟು! ಬೆಣ್ಣೆ ದೋಸೆಯ ರುಚಿಯನ್ನ ಗಗನಕ್ಕೇರಿಸುತ್ತೆ!

13. ಮೈಸೂರು ಮೈಲಾರಿ ಹೋಟೆಲ್ – ಗಾಂಧಿ ಬಜ಼ಾರ್
ಮೈಸೂರಿನ ಹೋಟೆಲ್ ತರಾನೇ ಇಲ್ಲೂ ಸಾಗು ಮಸಾಲೆ ಸಕ್ಕತ್ ಫೇಮಸ್!

14. ಮಯ್ಯಾಸ್ – ಜಯನಗರ
ತುಂಬ ಜನ ಇರ್ತಾರೆ, ಆದರೆ ಅದಕ್ಕೆ ಕಾರಣ ಇದೆಯಲ್ಲ…?! ಜಯನಗರ ಮತ್ತು ಸುತ್ತಮುತ್ತಲಲ್ಲಿ ಇವರ ದೋಸೆ ಮೀರಿಸೋರಿಲ್ಲ!

15. ಏರ್ಲೈನ್ಸ್ ಹೋಟೆಲ್ – ಲಾವೆಲೆ ರೋಡ್
ಮರದ ಕೆಳಗೆ ಕೂತು ಚಿಂದಿ ದೋಸೆ ತಿನ್ನಬೇಕಾ? ಜೊತೆಗೆ ಒಂದು ಫಿಲ್ಟರ್ ಕಾಫಿ ಸೇರಿಸಿಕೊಂಡುಬಿಟ್ಟರೆ ನಿಮ್ಮ ಸಂಜೆ ಸಾರ್ಥಕ!

16. ಇಂಡಿಯಾ ಕಾಫಿ ಹೌಸ್ – ಚರ್ಚ್ ಸ್ಟ್ರೀಟ್
ಬೆಂಗಳೂರಿನ ಹಳೇ ಹೋಟೆಲ್ಗಳಲ್ಲಿ ಒಂದಿದು. ಬಿಳೀ ತಟ್ಟೆಗಳ ಮೇಲೆ ಸೂಪರ್ ಪ್ಲೇನ್ ದೋಸೆ ಕೊಡ್ತಾರೆ, ಜೊತೆಗೆ ಇವರ ಕಾಫಿ ಕುಡಿದ್ರೆ ಸ್ವರ್ಗಕ್ಕೆ ಒಂದೇ ಗೇಣು!

17. ಶ್ರೀ ಕೃಷ್ಣ ಕೆಫೆ – ಕೋರಮಂಗಲ
ಪುದೀನಾ ದೋಸೆ ಎಲ್ಲಾರೂ ಕೇಳಿದೀರಾ? ಇಲ್ಲಿ ತಿನ್ನಬೇಕು! ಜೊತೆಗೆ ಇವರ ಚಟ್ನೀನೂ ಸೂಪರ್.

18. ಇಂದ್ರಪ್ರಸ್ಥ – ವಿಜಯನಗರ
ವಿಜಯನಗರ ಮತ್ತು ಸುತ್ತಮುತ್ತಲಲ್ಲಿ ಇದು ದೋಸೆಯ ದೇವಸ್ಥಾನ ಇದ್ದಂಗೆ. ಸೆಟ್ ದೋಸೆಗೆ ಫೇಮಸ್. ಹಾಗು ಇತರೆ ಎಲ್ಲ ತರದ ತಿಂಡಿಗಳು ಸಿಗುತ್ತೆ.

19. ಶಿವ ಸಾಗರ್ – ಕಮರ್ಶಿಯಲ್ ಸ್ಟ್ರೀಟ್
ಪೇಪರ್ ದೋಸೆ ಅಂದ್ರೆ ಇಲ್ಲೀದು. ಎಷ್ಟೊಂದು ಉದ್ದವಾಗಿ ಗರಿಗರಿಯಾಗಿರುತ್ತೆ.

20. ವಿದ್ಯಾರ್ಥಿ ಭವನ – ಬಸವನಗುಡಿ.
1938ರಿಂದ ಈ ಹೋಟೆಲು ಅದೇನು ಮ್ಯಾಜಿಕ್ ಮಾಡ್ತಿದೆ ಅಂತ ಗೊತ್ತಾಗೋದೇ ಕಷ್ಟ! ಅವರ ದೋಸೆ ಎಷ್ಟು ಗರಿಗರಿ ಅಂದ್ರೆ… ನಂಬಕ್ಕಾಗಲ್ಲ! ಬರೀ ತುಪ್ಪದಲ್ಲಿ ಮಾಡಿರ್ತಾರೆ. ಬಂದು ಬಂದು ಚಟ್ನಿ ಬಡಿಸ್ತಾರೆ…

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522