ಒಂದು ಕೋಟಿ ಭಾರತೀಯರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು 20 ಪೈಸೆಗೆ ವಂಚಕರಿಗೆ ಮಾರಾಟ

0
424

ನವದೆಹಲಿ : ಸುಮಾರು ಒಂದು ಕೋಟಿ ಭಾರತೀಯರ ಬ್ಯಾಂಕ್ ಖಾತೆ, ಕ್ರೆಡಿಟ್, ಡೆಬಿಟ್ ಕಾರ್ಡ್ ವಿವರ, ಫೇಸ್​ಬುಕ್ ಹಾಗೂ ವಾಟ್ಸ್​ಆಪ್ ಮಾಹಿತಿಯನ್ನು ಕಳವು ಮಾಡಿ, ವಂಚಕರಿಗೆ ಮಾರಾಟ ಮಾಡಿದ್ದ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆ ಮಾಹಿತಿಯನ್ನು ತಲಾ 10- 20 ಪೈಸೆ ದರದಲ್ಲಿ ಇವರು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಗ್ರೇಟರ್ ಕೈಲಾಶ್ನ 80 ವರ್ಷದ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ನಿಂದ 1.46 ಲಕ್ಷ ರೂ. ಎಗರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾತರ ದೆಹಲಿಯ ಸೌತ್ ಈಸ್ಟ್ ಪೊಲೀಸರು ತನಿಖೆ ನಡೆಸಿದಾಗ ಬ್ಯಾಂಕ್ ಖಾತೆ ಮಾಹಿತಿ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಘಟನೆಗೆ ಸಂಬಂಧಪಟ್ಟಂತೆ ಪ್ರಕರಣದ ಪ್ರಮುಖ ಆರೋಪಿ ಪಾಂಡವ್ ನಗರದ ಪೂರನ್ ಗುಪ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ನೊಳಗಿನವರು, ನಕಲಿ ಕಾಲ್ ಸೆಂಟರ್ಗಳಿಂದ ಮತ್ತು ನಕಲಿ ಕಂಪೆನಿಗಳಿಂದ ಖಾತೆದಾರರ ಮಾಹಿತಿ ಪಡೆದುಕೊಂಡು ಬಳಿಕ ಅದನ್ನು ತಲಾ 20 ಪೈಸೆಗೆ ವಿಭಿನ್ನ ಕಂಪನಿಗಳಿಗೆ ಇಲ್ಲವೇ ವಂಚಕರಿಗೆ ಮಾರಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ನಕಲಿ ಕಾಲ್ ಸೆಂಟರ್‍ ನಡೆಸುತ್ತಿದ್ದ ಆಶೀಶ್ ಕುಮಾರ್ ಜಾ ಎನ್ನುವವನ್ನು ಬಂಧಿಸಲಾಗಿದ್ದು, ಬಂಧಿತನಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಪ್ತ ಎನ್ನುವ ಇನೊಬ್ಬನನ್ನು ಬಂಧಿಸಿದ್ದು ಆತನಿಂಧ ಲ್ಯಾಪ್ ಟಾಫ್ ಹಾಗೂ ಇಮೇಲ್ಗೆ ಸಂಬಂಧಪಟ್ಟ ಮಾಹಿತಿಯನ್ನು ಒಳಗೊಂಡಿರುವ ದತ್ತಾಂಶವನ್ನು ಸಂಗ್ರಹಿಕೊಂಡಿದ್ದ ಎನ್ನಲಾಗಿದೆ.

ಕ್ರೆಡಿಟ್ ಕಾರ್ಡ್ ನಂಬರ್, ಕಾರ್ಡ್ದಾರರ ಹೆಸರು, ಮೊಬೈಲ್ ನಂಬರ್, ಜನ್ಮ ದಿನಾಂಕಗಳನ್ನು ಬೇರೆ ಕಂಪನಿಗಳಿಗೆ ಹಾಗೂ ವಂಚಕರಿಗೆ ಮಾರಲಾಗುತ್ತಿದೆ. ಹೆಚ್ಚಾಗಿ ಹಿರಿಯ ನಾಗರಿಕರ ಖಾತೆಗಳು ಈ ರೀತಿಯ ವಂಚನೆಗೆ ಸಿಲುಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬಯಿನಿಂದ ಹೆಚ್ಚು ಖಾತೆಗಳ ಮಾಹಿತಿ ದೊರೆಯುತ್ತಿದ್ದು, ಸಾಮಾನ್ಯವಾಗಿ 50 ಸಾವಿರ ಖಾತೆದಾರರ ಮಾಹಿತಿಯನ್ನು 10ರಿಂದ 20 ಸಾವಿರ ರೂ.ಗೆ ತಾನು ಮಾರಾಟ ಮಾಡಿರುವುದಾಗಿ ಆರೋಪಿ ಪೂರನ್ ಹೇಳಿದ್ದಾನೆ. ಬ್ಯಾಂಕ್ ಖಾತೆಗಳ ಮಾಹಿತಿ ಕಳವಿಗೆ ಆತ ‘ಫಸ್ಟ್ ಸ್ಟೆಪ್ ಸರ್ವಿಸಸ್ ಅಂಡ್ ಸೊಲ್ಯುಷನ್’ ಎಂಬ ಕಂಪೆನಿಯೊಂದನ್ನು ನಡೆಸುತ್ತಿದ್ದ ಎಂಬುದು ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.

ವಂಚನೆಗಾಗಿಯೇ ಕಂಪನಿ ಸೃಷ್ಟಿ: ಆರೋಪಿ ಪೂರನ್ ಗುಪ್ತ ‘ಫಸ್ಟ್ ಸ್ಟೆಪ್ ಸರ್ವೀಸಸ್ ಆಂಡ್ ಸೊಲ್ಯುಷನ್ಸ್’ ಹೆಸರಿನ ಸಂಸ್ಥೆಯನ್ನು ಸೃಷ್ಟಿಸಿ, ಜಸ್ಟ್ ಡಯಲ್​ನಲ್ಲಿ ನೋಂದಾಯಿಸಿದ್ದ.

 

ವಂಚನೆ ಹೇಗೆ?

 

ವಂಚಕರ ಜಾಲವು ಬ್ಯಾಂಕ್ ಗ್ರಾಹಕರ ಕಾರ್ಡ್ ನಂಬರ್, ಕಾರ್ಡ್ ಹೊಂದಿರುವ ವ್ಯಕ್ತಿಯ ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್ ನಂಬರ್ ಸಹಿತ ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿತ್ತು. ಹಿರಿಯ ನಾಗರಿಕರ ಖಾತೆಗಳ ಮಾಹಿತಿಯನ್ನೇ ಹೆಚ್ಚಾಗಿ ಸಂಗ್ರಹಿಸಲಾಗಿತ್ತು. ಪ್ರಮುಖ ಆರೋಪಿ ಪೂರನ್ ಗುಪ್ತ ಎಂಬಾತ ಸುಮಾರು 50,000 ಮಂದಿಯ ಬ್ಯಾಂಕ್ ಮಾಹಿತಿಯ ಬೃಹತ್ ಸಂಗ್ರಹವನ್ನು 10,000-20,000 ರೂ. ಗೆ ಮಾರಾಟ ಮಾಡುತ್ತಿದ್ದ. ಈ ಮಾಹಿತಿಯನ್ನು ಖರೀದಿಸಿದ ವಂಚಕರು ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಗ್ರಾಹಕರನ್ನು ಸಂರ್ಪಸಿ ಸಿವಿವಿ ನಂಬರ್ ಮತ್ತು ಒಟಿಪಿ ವಿವರ ಪಡೆಯುತ್ತಿದ್ದರು. ಈ ಮಾಹಿತಿಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳಿಂದ ಹಣ ವಿತ್​ಡ್ರಾ ಮಾಡಿಕೊಳ್ಳುತ್ತಿದ್ದರು.