ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇರಳದಲ್ಲಿ ಕಣ್ಣೂರು ಜಿಲ್ಲೆಯ ತಳಿಪರಂಬ ನಗರದ ಫೆಡರಲ್ ಬ್ಯಾಂಕ್ ಶಾಖೆಯ ಹೋಲ್ಡರ್ ಆದ ಪಿ.ಸಿ. ಶರೀಫ್ ಎಂಬುವರ ಪತ್ನಿ 2000 ನೋಟನ್ನು ಪಡೆದಿದ್ದಾರೆ. ಪಡೆದ ಕೆಲವೇ ಘಂಟೆಗಳಲ್ಲಿ ಪಡೆದಿರುವ 2000 ನೋಟು ಕರಗಲು ಆರಂಭವಾಯಿತು.
ಶರೀಫ್ ಪುತ್ರಿ ಪಿ.ಸಿ. ಶೆಮೀಲ್ 2000 ನೋಟನ್ನು ಕೈಯಲ್ಲಿ ಹಿಡಿದಾಗ ಅದು ಕರಾಗುತ್ತಿರುವುದನ್ನು ಕಂಡು ಈ ನೋಟು ಮಾಮೂಲಿನಂತೆ ಬಳಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಪಡೆದಿರುವ ಹಲವು ನೋಟುಗಳಲ್ಲಿ ಒಂದು ನೋಟು ಮಾತ್ರ ಕರಗಿದೆ, ಉಳಿದ ನೋಟುಗಳು ಮಾಮೂಲಿನಂತಿವೆ. ಈ ವಿಷಯವನ್ನು ಅದೇ ಶಾಖೆಯ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಾಗ ಶಾಖೆ ಅಧಿಕಾರಿಗಳು 2000 ನೋಟನ್ನು ವಾಪಸ್ಸು ಪಡೆದುಕೊಳ್ಳಲು ಸಿದ್ಧರಿರಲಿಲ್ಲವೆಂದು ಅವರು ವಿವರಿಸಿದ್ದಾರೆ.
ಈ ನೋಟಿನ ವಿಷಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಜನ ಈ ನೋಟಿನ ಚಿತ್ರವನ್ನು ಶೇರ್ ಮಾಡಲಾರಂಭಿಸಿದ್ದಾರೆ. ಭಾರತೀಯ ರಿಸರ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ 2000 ನೋಟುಗಳ ಬಗ್ಗೆ ಹಲವು ಕಥೆಗಳನ್ನು ಕೇಳಿರಬಹುದು. 2000 ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ, ಇದು ವಿಕಿರಣಶೀಲ ಶಾಯಿ ಬಳಸಿ ಮುದ್ರಿಸಲಾಗಿದೆ, ಈ ನೋಟನ್ನು ನೀರಿನಲ್ಲಿ ಹಾಕಿದರೆ ಬಣ್ಣ ಹೋಗದೆ ಇರುವ ವಿಡಿಯೋಗಳು ಕೂಡ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವುದನ್ನು ನೀವು ನೋಡಿದ್ದೀರಾ. ಈ ಎಲ್ಲ ಕಟ್ಟುಕಥೆಗಳ ಸಾಲಿಗಿ ಕೊಚ್ಚಿನಲ್ಲಿ ನಡೆದಿರುವ ಈ ಘಟನೆ ಕೂಡ ಸೇರಲಿದೆ =.