ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು 2000 ಜನರು Facebook Live-ನಲ್ಲಿ ನೋಡಿದ್ದಾರೆ, ಆ ಭಾಯನಕ ಘಟನೆಯ ಡೀಟೇಲ್ಸ್…

0
535

ಇಂದಿನ ಜನ್ರು ಎಲ್ಲಾ ವಿಷಯದಲ್ಲಿವು DIFFERENT ಸಾಯೋದ್ರಲ್ಲಿ ಕೂಡ ಡಿಫರೆಂಟ್, ಅದು ಹೇಗೆಂದ್ರೆ LIVE VIDEO ದಲೇ  ಸಾಯಿತ್ತಿದ್ದಾರೆ.ಇದೆಲ್ಲ ನಡಿತ್ತಿರೋದು ಪ್ರಪಂಚಕ್ಕೆ ಗೊತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ. ಯಾಕೆಂದ್ರೆ facebook live ನಲ್ಲಿ ಸತ್ರೆ ಅವರ ಸ್ನೇಹಿತರೆಲ್ಲರೂ ನೋಡಿ ಸಹಾಯಕ್ಕೆ ಬರ್ತ್ತಾರೆ ಅಂತನೋ… ಇಲ್ಲ ನಾನ್ ಸಾಯೋದು ಪ್ರಪಂಚಕ್ಕೆ ಗೊತ್ತಾಗಲಿ ಅಂತನೋ.. ತಿಳಿತಿಲ್ಲ.

Also read: ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳಿ ತಾನು ಆತ್ಮಹತ್ಯೆ ಮಾಡಿಕೊಂಡ ಯುವಕ…!

ಹಿಂದೆ ಇಂತಹ ವಿಷಯಕ್ಕೆ ಸಂಬಂದಿಸಿದಂತೆ ಯಾರಾದ್ರೂ ಆತ್ಮಹತ್ಯೆ ಮಾಡಿಕೊಂಡರೆ, ಆ ವಿಷಯ 10% ಜನರಿಗೆ ಮಾತ್ರ ತಿಳಿತಿತ್ತು ಇಲ್ಲ ಅಂದ್ರೆ ರಾತ್ರೋ ರಾತ್ರಿನೇ ಸುಟ್ಟು ಹಾಕಿರುವ ಪ್ರಕರಣಗಳು ತುಂಬಾನೇ ಇವೇ. ಇದನ್ನೆಲ್ಲ ನೋಡಿದ ಈಗಿನ ಜನ ನಮಗೋ ಇದೆ ರೀತಿಯಲ್ಲಿ ಮಣ್ಣು ಮಾಡ್ತಾರೆ ಅಂತ ಹಿಂಗೆ ಲೈವ್ suicide ಗೆ ಮಾರು ಹೋಗ್ತಿದ್ದಾರೆನೋ ತಿಳಿತ್ತಿಲ. ಇದಕೊಂದು ಸರಿಯಾದ example, ಅಂದ್ರೆ ಬೆಳೆಕಿಗೆ ಬಂದಿರುವ ಮೂರೂ ದಿನಗಳ ಹಿಂದೆ ನಡೆದ ಒಂದು ಪ್ರಕರಣ ಇಲ್ಲಿದೆ ನೋಡಿ.

Also read: ಏಕೆ ಈ ಆತ್ಮಹತ್ಯೆ…. ಇರಲಿ ಆತ್ಮಸ್ಥರ್ಯ

ಗುರುಗ್ರಾಮದಲ್ಲಿ ಅಮಿತ್‌ ಚೌಹಾನ್‌, ಎಂಬ 27 ವರ್ಷದ ಯುವಕ ಫೇಸ್‌ಬುಕ್‌ನಲ್ಲಿ ಲೈವ್‌ ವೀಡಿಯೋ ಮಾಡಿ ಸೋಮವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಫೇಸ್‌ಬುಕ್‌ ಲೈವ್ ಬಂದಿದ್ದಾನೆ. ಈ ಪೋಸ್ಟ್‌ನ್ನು 2,300 ಮಂದಿ ವೀಕ್ಷಿಸಿದ್ದಾರೆ. ಆದರೆ ಯಾರೊಬ್ಬರೂ ಆತನ ಮನೆಯವರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಅಮಿತ್‌ ನಿರುದ್ಯೋಗಿಯಾಗಿದ್ದ ಮಾನಸಿಕವಾಗಿ ಬಳಲಿ ಖಿನ್ನತೆಗೆ ಒಳಗಾಗಿದ್ದ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಸಿಟ್ಟಿನಲ್ಲಿ ಮನೆ ಮಂದಿಯ ಮೇಲೆ ಹಲ್ಲೆಯೂ ಮಾಡುತ್ತಿದ್ದ. ಇದೇ ಕಾರಣಕ್ಕೆ ಅಮಿತ್‌ಗೆ ರೋಹ್ತಕ್‌ ಪೋಸ್ಟ್‌ ಗ್ರಾಜುಯೇಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಫ್‌ ಮೆಡಿಕಲ್‌ ಸೈನ್ಸ್‌ ನಲ್ಲಿ ಮಾನಸಿಕ ಆರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಅಮಿತ್ ಸೋಮವಾರ ಸಂಜೆ ಕುಟುಂಬಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಯಜೊತೆ ಜಗಳವಾಡಿದ.

ಈ ಬಳಿಕ ಪತ್ನಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿದ್ದಾಳೆ. ಮನೆಯಲ್ಲಿ ಒಬ್ಬನೇ ಇದ್ದ ಅಮಿತ್‌, ಮೊದಲ ಮಹಡಿಗೆ ಹೋಗಿ, ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಕುರಿತು ಕುಟುಂಬ ವರ್ಗ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ಇತ್ಯಾದಿ ಪ್ರಕ್ರಿಯೆಗಳಿಲ್ಲದೆ ಶವ ಸಂಸ್ಕಾರ ಮಾಡಲಾಗಿದೆ.
ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ವಿಚಾರಣೆ ನಡೆಸಿದ್ದಾರೆ. ಸಂಜೆ ಸುಮಾರು 7.30ರ ವೇಳೆ ಅಮಿತ್‌ ನೇಣು ಬಿಗಿದುಕೊಂಡಿದ್ದಾನೆ. ರಾತ್ರಿ 9.30’ಕ್ಕೆ ಪತ್ನಿ ಹಾಗೂ ಮಕ್ಕಳು ಮನೆಗೆ ಬಂದಾಗ, ಅಮಿತ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆ ಕ್ಷಣದ ವರೆಗೂ ಫೇಸ್‌ಬುಕ್‌ನಲ್ಲಿ ಲೈವ್‌ ವೀಡಿಯೋ ಜಾರಿಯಲ್ಲಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇಂತಹ ಶೋಕಿ ಸಾವಿಗೆ ಜನರು ಮಾರು ಹೋಗ್ತಿರುವುದು ನೋಡಿದ್ರೆ, ದೇಶದ ತುಂಬೆಲ್ಲ ಭಯ ಹುಟ್ಟಿಸುತ್ತಿದೆ. ಮತ್ತು ಆತ್ಮಹತ್ಯ ಮಾಡಿಕೊಳ್ಳುವ ಜನರಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತಿದೆ. ಅದರಿಂದ ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಹಾಕುವರು ಯಾರು? ಪೊಲೀಸ್, ಅಥವಾ ಫೇಸ್ಬುಕ್ ಕಂಪನಿಯವರ? ಏನೋ ಇರಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ಆಗಿ ಸಾಯಿವ ಹುಚ್ಚು ಭ್ರಮೆಯಿಂದ ಹೊರಬರಲಿ.