2014ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ; ನೊಬೆಲ್ ಪದಕ ಕಳವು

0
1191

2014ರ ನೊಬೆಲ್ ಪ್ರಶಸ್ತಿ ಪುರಸ್ಕೃತ, ಭಾರತೀಯ ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿರುವ ಕೈಲಾಶ್ ಸತ್ಯಾರ್ಥಿ ಅವರ ಮನೆಗೆ ನುಗ್ಗಿರುವ ಕಳ್ಳರು ನೊಬೆಲ್ ಪಾರಿತೋಷಕದ ಪ್ರತಿಕೃತಿ ಹಾಗೂ ಇನ್ನಿತರ ಹಲವು ಅತ್ಯಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಥಹವರಲ್ಲಿ 2014 ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡ ಭಾರತದ ಹೆಮ್ಮೆಯ ಪುತ್ರ ಕೈಲಾಶ್ ಸತ್ಯಾರ್ಥಿ ಕೂಡ ಒಬ್ಬರು. ಸ್ವಯಂ ಸಾಧನೆಯಿಂದ ಯಾವುದೇ ಸರ್ಕಾರದಿಂದ, ಮಾಧ್ಯಮಗಳಿಂದ ಪ್ರಚಾರ ಪಡೆಯದೇ ಇಂಥಹ ಅತ್ಯುನ್ನತ ಗೌರವವನ್ನು ಪಡೆದಿರುವುದು ವ್ಯಕ್ತಿ ಕೈಲಾಶ್ ಸತ್ಯಾರ್ಥಿ.

ಸತ್ಯಾರ್ಥಿ ಅವರು ದಿಲ್ಲಿಯ ಸಿರಿವಂತ ಅಲಕನಂದ ಪ್ರದೇಶದಲ್ಲಿ ವಾಸವಾಗಿದ್ದರು. ಮನೆಗೆ ನುಗ್ಗಿರುವ ಕಳ್ಳರು ನೊಬೆಲ್ ಪಾರಿತೋಷಕದ ಪ್ರತಿಕೃತಿ ಹಾಗೂ ಇನ್ನಿತರ ಪದಕಗಳು ಕಳ್ಳತನವಾಗಿದೆ. ದಿಲ್ಲಿ ಪೊಲೀಸರು ಘಟನೆಯ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪೊಲೀಸರು ಕಳ್ಳರ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಪರಾಧ ಹಾಗೂ ವಿಧಿ ವಿಜ್ಞಾನ ತಂಡದವರು ಕಳ್ಳತನ ನಡೆದ ಸ್ಥಳದಲ್ಲಿನ ಬೆರಳಚ್ಚುಗಳನ್ನು ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶೋಧಕರ್ಯವನ್ನು ತೀವ್ರಗತಯಲ್ಲಿ ನೆಡೆಸುತ್ತಿದ್ದಾರೆ.

ಅದೃಷ್ಟವಶಾತ ಸತ್ಯಾರ್ಥಿ ಅವರ ಮೂಲ ನೊಬೆಲ್ ಪಾರಿತೋಷಕವನ್ನು ಶಿಷ್ಟಾಚಾರದ ಕ್ರಮವಾಗಿ ರಾಷ್ಟ್ರಪತಿ ಭವನದಲ್ಲಿ ಇರಿಸಲಾಗಿರುವುದರಿಂದ ಅದು ಸುರಕ್ಷಿತವಾಗಿ ಉಳಿದಿದೆ.