2050ರ ವೇಳೆಗೆ ಭಾರತ ಮುಸ್ಲಿಂ ದೇಶವಾಗಲಿದೆ!

0
1050

ನವದೆಹಲಿ:2050ರ ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿಯಾಗಲಿದೆ ಎಂದು ಪ್ಯೂ(Pew) ರಿಸರ್ಚ್ ಸೆಂಟರ್ ವರದಿಯಲ್ಲಿ ಹೇಳಲಾಗಿದೆ, 2050ರ ವೇಳೆ ಭಾರತದಲ್ಲಿ ಮುಸ್ಲೀಂ ಜನಸಂಖ್ಯೆ 31.1 ಕೋಟಿ ತಲುಪಲಿದೆ. ಅಂದರೆ, ಜಾಗತಿಕ ಮಟ್ಟದಲ್ಲಿ ಶೇ.11 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ನಮ್ಮ ಭಾರತ.

ವರದಿಯ ಪ್ರಕಾರ ಅತೀ ಹೆಚ್ಚು ಹಿಂದೂ ಜನಸಂಖ್ಯೆ ಹೊಂದಿರುವ ದೇಶ ಭಾರತದಲ್ಲಿ 2050ರ ವೇಳೆ ಹಿಂದೂಗಳ ಸಂಖ್ಯೆ 130 ಕೋಟಿ ಆಗಿ ಏರಿಕೆಯಾಗಲಿದೆ ಹಾಗೂ ಪ್ರಸ್ತುತ ಇಂಡೋನೇಷ್ಯಾದಲ್ಲಿ ಅತೀ ಹೆಚ್ಚು ಮುಸ್ಲಿಂ ಜನರಿದ್ದಾರೆ. ಫಲವತ್ತತೆಯ ದರ (ಫರ್ಟಿಲಿಟಿ) ಹೆಚ್ಚಾಗಿರುವುದೇ ಜನಸಂಖ್ಯೆ ಏರಿಕೆಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

2050ರ ವೇಳೆ ಜಗತ್ತಿನ ಅಂದಾಜು ಜನಸಂಖ್ಯೆ (ಶೇ) : ಭಾರದಲ್ಲಿರುವ ಮುಸ್ಲಿಂ ಮಹಿಳೆಯರು ಸರಾಸರಿ 3ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ, ಅದೇ ವೇಳೆ ಕ್ರೈಸ್ತ ಮಹಿಳೆ ಸರಾಸರಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ. 2010ರಲ್ಲಿ 14.4% ಇದ್ದ ಮುಸ್ಲಿಂ ಜನಸಂಖ್ಯೆ 2050ರ ವೇಳೆ 18.4% ಆಗಿ ಏರಿಕೆಯಾಗಲಿದೆ.

2050ರ ವೇಳೆಗೆ ಭಾರತದ ಸಂಖ್ಯೆ: ಏತನ್ಮಧ್ಯೆ, ಭಾರತದಲ್ಲಿ ನಾಲ್ಕರಲ್ಲಿ ಮೂರು ಮಂದಿ ಹಿಂದೂಗಳಿರಲಿದ್ದಾರೆ. ಮುಸ್ಲಿಂರಾಷ್ಟ್ರಗಳಾದ ಪಾಕಿಸ್ತಾನ, ಇಂಡೋನೇಷ್ಯಾ, ನೈಜೇರಿಯಾ ಮತ್ತು ಬಾಂಗ್ಲದೇಶದಲ್ಲಿರುವ ಮುಸ್ಲಿಮರು ಸಂಖ್ಯೆಯನ್ನು ಒಟ್ಟುಗೂಡಿಸಿದರು ಭಾರತದಲ್ಲಿರುವ ಹಿಂದೂಗಳ ಸಂಖ್ಯೆ ಇದಕ್ಕಿಂತ ಹೆಚ್ಚಿದೆ.

ಭಾರತದಲ್ಲಿರುವ ಒಟ್ಟು ಜನಸಂಖ್ಯೆಯ 2.5%ರಷ್ಟು ಕ್ರೈಸ್ತ ಸಮುದಾಯದವರಿದ್ದಾರೆ. 2050ರ ವೇಳೆಗೆ ಇವರ ಜನಸಂಖ್ಯೆ 2.3% ಆಗಿ ಕುಸಿಯಲಿದೆ. ಅದೇ ವೇಳೆ ಜಗತ್ತಿನಲ್ಲಿ ಅತೀ ಹೆಚ್ಚು ವೇಗವಾಗಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದೆ ಎಂದು ವರದಿಯಲ್ಲಿ ಹೇಲಿದೆ.