ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವಿನ ಪ್ರಕರಣ ಕಾರವಾರ ಜಿಲ್ಲೆಯಾದ್ಯಂತ ಉಗ್ರ ಸ್ವರೂಪ ಪಡೆದುಕೊಂಡಿದೆ

0
531

ಕಾರವಾರ ಜಿಲ್ಲೆಯ ಹೊನ್ನಾವರದ ತಾಲೂಕಿನ ಕುಮುಟಾದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವಿನ ಪ್ರಕರಣ ಜಿಲ್ಲೆಯಾದ್ಯಂತ ಉಗ್ರ ಸ್ವರೂಪ ಪಡೆದುಕೊಂಡಿದೆ. ಪರೇಶ್ ಮೇಸ್ತ ಸಾವನ್ನು ಖಂಡಿಸಿ ಕೆಲ ಸಂಘಟನೆಗಳು ನೀಡಿದ ಕಾರವಾರ ಜಿಲ್ಲೆ ಬಂದ್-ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಬಂದ ಮಹಿಳಾ ಪಿಎಸ್ಐ ಮೇಲು ಹಲ್ಲೆ ಮಾಡಿ, ಐಜಿಪಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

ಕುಮುಟಾದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ, ದೇವಸ್ಥಾನದ ಜಾಗದಲ್ಲಿ ಮಸೀದಿ ಕಟ್ಟಲು ಹೊರಟಿದ್ದ ಕೆಲವರನ್ನು ತಡೆದ್ದಿದ್ದೆ ಆತನ ಸಾವಿಗೆ ಕಾರಣವಾಗಿರಬಹುದೆಂದು ಅನುಮಾನಿಸಲಾಗುತ್ತಿದೆ. ಕಳೆದ ವಾರ ನಡೆದ ಪರೇಶ್ನನ್ನು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ, ಪೊಲೀಸರಿಗೆ ಕೆರೆಯಿಂದ ಇವನ ಶವ ದೊರೆತಿದೆ, ಶವದ ಮೇಲೆ ತುಂಬ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಾದ್ಯಂತ ಡಿಸೆಂಬರ್ 12 ರಿಂದ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ.

ಈ 3 ದಿನಗಳಲ್ಲಿ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಸಾರ್ವಜನಿಕ ಚಟುವಟಿಕೆಗಳು, ಪ್ರತಿಭಟನೆಗಳು, ಮೆರವಣಿಗೆಗಳು, ಇತರ ಸಭೆಗಳು ಮತ್ತು ಖಾಸಗಿ ಚಟುವಟಿಕೆಗಳಿಗೆ ಯಾವುದೇ ಅನುಮತಿ ನೀಡಲಾಗುವುದಿಲ್ಲ, ಒಂದು ವೇಳೆ ಯಾರಾದರೂ ಇದನ್ನು ಮೀರಿ ಸಭೆ ಅಥವಾ ಯಾವುದೇ ಸಾರ್ವಜನಿಕ ಕಾರ್ಯ ನಡೆಸಿದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕಾರವಾರ ಡಿ.ಸಿ ಎಸ್ ನಕುಲ್ ಹೇಳಿದ್ದಾರೆ.

ಹೊನ್ನಾವರದಿಂದ ಪರೇಶ್ ಮೆಸ್ತ ಅವರ ಸಾವಿನ ಸಂಬಂಧ ಸುತ್ತುವರಿದ ವಿವಿಧ ವದಂತಿಗಳಿಗೆ ಕಿವಿಗೊಡದಂತೆ ಪಾಶ್ಚಿಮಾತ್ಯ ರೇಂಜ್ ಐಜಿಪಿ ಹೇಮಂತ್ ನಿಂಬಾಲ್ಕರ್ ಸಾರ್ವಜನಿಕರಿಗೆ ಹೇಳಿದ್ದಾರೆ. ವೆಸ್ಟರ್ನ್ ರೇಂಜ್ ಐಜಿಪಿ, ರಾಜಕೀಯ ಪಕ್ಷದ ಸದಸ್ಯರು ಯಾವುದೇ ಪುರಾವೆ ಇಲ್ಲದೆ ಪರೇಶ್ನನ್ನ ಚಿತ್ರಹಿಂಸೆ ಮಾಡಿ ಕೊಲ್ಲಲಾಗಿದೆ ಎಂಬ ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಸೆಂಬರ್ 8 ರಂದು ಪರೇಶ್ ಮೆಸ್ತರ ಸಾವಿನ ಬಗ್ಗೆ ಪೋಸ್ಟ್ ಮೋರ್ಟಮ್ ವರದಿಗೋಸ್ಕರ ಕಸ್ತೂರ್ಬಾ ವೈದ್ಯಕೀಯ ಕಾಲೇಜ್, ಮಣಿಪಾಲರಿಗೆ ಪತ್ರವೊಂದನ್ನು ಕಳುಹಿಸಲಾಗಿದೆ. ಡಿಸೆಂಬರ್ 9 ರಂದು ಅಸೋಸಿಯೇಟ್ ಪ್ರಾಧ್ಯಾಪಕ ಡಾ. ಶಂಕರ್ ಎಂ. ಬಕ್ನವರವರ್ ಅವರು ಪತ್ರಕ್ಕೆ ಪ್ರತಿಕ್ರಿಯಿಸಿ ಶವದ ಮೇಲೆ ಯಾವುದೇ ಶಸ್ತ್ರಾಸ್ತ್ರಗಳಿಂದ ಗಾಯಗಳಿಲ್ಲ ದೇಹದ ಮೇಲೆ ಉಗುರು ಅಥವಾ ಪಿನ್-ನಿಂದ ನಡೆಸಿದ ಗಾಯದ ಬಗ್ಗೆ ಹಾಗು ದೇಹದ ಮೇಲೆ ಆಸಿಡ್, ಬಿಸಿನೀರು ಅಥವಾ ರಾಸಾಯನಿಕಗಳನ್ನು ಬಳಸಿಕೊಂಡು ದಾಳಿ ನಡೆಸಿದ ಯಾವುದೇ ಪುರಾವೆಗಳಿಲ್ಲ ಎಂದು ವಿವರಿಸಿದರು.