ಆರೋಪಿಗಳನ್ನು ಬದುಕಲು ಬಿಡಲೇಬಾರದೆಂದ ಉನ್ನಾವ್ ರೇಪ್ ಸಂತ್ರಸ್ತೆ ಸಾವು!! ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈ ಯುವತಿಗೆ ನ್ಯಾಯ ಒದಗಿಸುತ್ತಾರೆ ಅಂತ ನಂಬಿಕೆ ಇದ್ಯ??

0
224

ದೇಶದಲ್ಲಿ ಬೆಂಕಿ ಹತ್ತಿ ಉರಿಯಲು ಕಾರಣವಾದ ಹೈದರಾಬಾದ್ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ, ಮತ್ತು ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣಗಳು ಇಡಿ ದೇಶವನ್ನೇ ಬೆಚ್ಚಿಲಿಸಿದ್ದು. ಆರೋಪಗಳನ್ನು ಗಲ್ಲಿಗೆರಿಸುವಂತೆ ಎಲ್ಲಡೆ ಹೋರಾಟ ನಡೆಯುತ್ತಿದೆ. ಈಗಾಗಲೇ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮಾಡಿದ ಆರೋಪಿಗಳನ್ನು ಏನ್ ಕೌಂಟರ್ ಮಾಡಲಾಗಿದ್ದು, ಅದೇ ರೀತಿ ಉನ್ನಾವ್ ರೇಪ್ ಆರೋಪಿಗಳನ್ನು ಸಂಹಾರ ಮಾಡಬೇಕೆಂದು ದೇಶದೆಲ್ಲಡೆ ಹೋರಾಟ ನಡೆಯುತ್ತಿದೆ.

ಹೌದು ಮಾರ್ಚ್​ನಲ್ಲಿ ಗ್ರಾಮದ ಇಬ್ಬರು ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಘಟನೆಯನ್ನು ದೃಶ್ಯೀಕರಣ ಮಾಡಿಕೊಂಡಿದ್ದರು. ಈ ಕುರಿತು ಯುವತಿ ರಾಯ್​ಬರೇಲಿ ಜಿಲ್ಲೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಇಲ್ಲಿನ ಸ್ಥಳೀಯ ನ್ಯಾಯಾಲಯ ಕೂಡ ವಿಚಾರಣೆ ನಡೆಸಿತ್ತು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಯುವತಿಯಿದ್ದ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಈ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದಷ್ಟು ಬೇಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಿ, ಆರೋಪಿಗಳನ್ನು ಬಂಧಿಸಿ ಎಂದು ಸಿಬಿಐಗೆ ತಾಕೀತು ಮಾಡಿತ್ತು.

ಕೋರ್ಟ್​ಗೆ ತೆರಳುತ್ತಿದ್ದ ಯುವತಿಯನ್ನು ಇದ್ದಕ್ಕಿದ್ದಂತೆ ಅಟ್ಟಿಸಿಕೊಂಡು ಬಂದ ಆಗಂತುಕರು ಆಕೆಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದರು. ಈ ಘಟನೆಯಿಂದ ಯುವತಿಯ ದೇಹದ ಬಹುಪಾಲು ಸುಟ್ಟುಹೋಗಿತ್ತು. 40 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾಳೆ.

ಸಾಯುವ ಮುನ್ನ ಆಕೆ ಸಹೋದರನಿಗೆ ಹೇಳಿದ್ದೇನು?

ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಬದುಕಲು ಬಿಡಲೇಬಾರದು. ಅವರನ್ನು ಗಲ್ಲಿಗೇರಿಸಬೇಕು. ಅಷ್ಟೇ ಅಲ್ಲ ನಾನು ಬದುಕಬೇಕು. ಆರೋಪಿಗಳನ್ನು ಗಲ್ಲಿಗೇರಿಸುವುದನ್ನು ಕಣ್ಣಾರೆ ನೋಡಬೇಕು ಎಂದು ಆಸೆ ವ್ಯಕ್ತಪಡಿಸಿರುವುದಾಗಿ ನನ್ನ ಸಹೋದರಿ ಹೇಳಿದ್ದಳು ಎಂದು ಸಂತ್ರಸ್ತಯ ಸಹೋದರ ತಿಳಿಸಿದ್ದಾರೆ. ಆದರೆ ಇದು ಸಂತ್ರಸ್ತೆಯ ಕೊನೆಯ ಮಾತಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಳು. ಇದೀಗ ಆಕೆಯ ತಂದೆ ಕೂಡಾ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿಗಳನ್ನು ನೇಣಿಗೇರಿಸಬೇಕು ಇಲ್ಲವೇ ಹೈದರಾಬಾದ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಂತೆ ಕೊಲ್ಲಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.

ಅದರಂತೆ ಈಗಾಗಲೇ ಪ್ರಕರಣ ಹತ್ತಿ ಉರಿಯುತ್ತಿದ್ದು, ಆರೋಪಿಗಳನ್ನು ಸಂಹಾರ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಕುರಿತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತೆಯ ಸಾವು ಅತ್ಯಂತ ದುಃಖಕರ ವಿಷಯವಾಗಿದ್ದು ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಶಿಕ್ಷೆ ವಿಧಿಸಲಾಗುವುದು ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Also read: ಅತ್ಯಾಚಾರ ಆರೋಪಿ ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ; ಬಲಿಯಾದ ಆರೋಪಿಗಳ ತಂದೆ, ತಾಯಿ ಪತ್ನಿ ಹೇಳಿದ್ದೇನೆ??