ಕೊಳೆಗೇರಿಯಲ್ಲಿರುವ ಮನೆಯಲ್ಲಿ ನೆಲಸಿದ ಯುವಕ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ PHD ಪ್ರವೇಶ ಪಡೆದುಕೊಂಡು ಮಾದರಿಯಾದ..

0
282

ಸಾಧನೆಗೆ ಬದುಕುವ ರೀತಿ, ಎದುರಾಗುವ ಕಷ್ಟಗಳು ಯಾವುದೇ ಲೆಕ್ಕಕಿಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಮುಂಬೈನ ಕೊಳೆಗೇರಿಗಳಲ್ಲಿ ವಾಸಿಸುವ ಯುವಕ. ಅಮೆರಿಕದ ಪ್ರತಿಷ್ಠಿತ ವರ್ಜೀನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಆಫರ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾನೆ. ಇವನ ಸಾಧನೆಯಿಂದ ವ್ಯಕ್ತಿ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅಪ್ಪಟ ಉದಾಹರಣೆಯಾಗಿದ್ದಾನೆ. ವಿದ್ಯಾರ್ಥಿ ಜೀವನದಲ್ಲಿ ಕೂಡ ಹಲವು ರಾಷ್ಟ್ರಮಟ್ಟದ ಸಾಧನೆ ಮಾಡಿದ ಇವರು ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಶ್ರಮವಹಿಸಿದ್ದಾರೆ.

Also read: ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸಿ ಭಾರತದ ನೂತನ ಬಿಲಿಯನೇರ್ ಆದ ಬೆಂಗಳೂರಿನ ಶಿಕ್ಷಕ; ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ..

ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ?

ಮುಂಬೈನ ಸ್ಲಂ ಒಂದರಲ್ಲಿ ಬಡತನದಲ್ಲಿ ಹುಟ್ಟಿಬೆಳೆದ ಜಯಕುಮಾರ್ ವೈದ್ಯ ಎನ್ನುವ 24 ವರ್ಷದ ಯುವಕ ಅಮೆರಿಕದ ಪ್ರತಿಷ್ಠಿತ ವರ್ಜೀನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮಾಡುವ ಅವಕಾಶ ಪಡೆದುಕೊಂಡಿದ್ದಾನೆ. ಇವನು ತನ್ನ ತಾಯಿಯೊಂದಿಗೆ ಮುಂಬೈನ ಕುರ್ಲಾ ಕೊಳೆಗೇರಿಯಲ್ಲಿರುವ ಒಂದೇ ಕೋಣೆಯಲ್ಲಿ ವಾಸಮಾಡುತ್ತಿದ್ದ. ಈ ಕುರಿತು ಮುಂಬೈ ಮಿರರ್ ವರದಿ ಮಾಡಿದಂತೆ, ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಕೂಡ ಇರಲಿಲ್ಲ, ಮನೆಯ ಪರಿಸ್ಥಿತಿ ಕೂಡ ಸರಿಯಿರಲಿಲ್ಲ. ತಾಯಿ ಕಾರಣಾಂತರಗಳಿಂದ ಗಂಡನನ್ನು ಬಿಟ್ಟು ವಿಚೇಧನ ಪಡೆದು ಮಗನ ಜೊತೆಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು.

Also read: ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

ಜಯಕುಮಾರ್ ತಾಯಿ ಜೀವನಕ್ಕಾಗಿ ಗುಮಾಸ್ತ ಕೆಲಸವನ್ನು ಮಾಡುತ್ತಿದ್ದರು 2003 ರಲ್ಲಿ, ತಾಯಿಯ ಆರೋಗ್ಯದ ಸಮಸ್ಯೆಯಿಂದ ಕೆಲಸಕ್ಕೆ ಅಡ್ಡಿಯಾಯಿತು. ಮನೆಯಲ್ಲಿ ಊಟಕ್ಕೂ ಕಷ್ಟವಾಯಿತು. ಆಗ ಇಬ್ಬರು ವಡಾ ಪಾವ್, ಸಮೋಸಾ ತಿಂದು ಬದುಕುಳಿದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಮಯದಲ್ಲಿ ನಮಗೆ ತಿನ್ನಲು ಸರಿಯಾದ ಊಟ ಕೂಡ ಇರಲಿಲ್ಲ, ಈ ಸಮಯದಲ್ಲಿ ”ದೇವಾಲಯದ ಟ್ರಸ್ಟ್‌ನ ಬೆಂಬಲವು ಅವರಿಗೆ ಜೀವನದ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿ ಊಟಕ್ಕೆ ವ್ಯವಸ್ಥೆ ಮಾಡಿ ಕೊಟ್ಟಿತು. ಎಂದು ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಓದಲು ಸಾಕಷ್ಟು ತೊಂದರೆಗಳು ಬಂದವು. ಆಗ ಓದುವ ಕರ್ಚಿಗಾಗಿ ಕೆಲಸ ಮಾಡಬೇಕಾಯಿತು. ಕೆಲವೊಮ್ಮೆ ಶಾಲೆ, ಕಾಲೇಜು ಶುಲ್ಕವನ್ನು ಸಹ ಪಾವತಿಸಲು ಹಣವಿಲ್ಲದಿದ್ದರೂ, ವೈದ್ಯರ ತಾಯಿ ಅವರಿಗೆ ಉತ್ತಮ ಶಿಕ್ಷಣ ದೊರಕುವಂತೆ ಶ್ರಮವಹಿಸಿದರು. ಅದಕ್ಕಾಗಿ ಟಿವಿ ರಿಪೇರಿ ಅಂಗಡಿಯಲ್ಲಿ ಬೆಸುಗೆ ಹಾಕುವ ಕೆಲಸ ಮಾಡಲು ಶುರುಮಾಡಿ ತಿಂಗಳಿಗೆ 4000 ಗಳಿಸಿ ಜೀವನ ಮಾಡಿದರು. ಜಯಕುಮಾರ್ ಕೂಡ ಓದಿನಲ್ಲಿ ಮುಂದೆ ಇದ್ದು, ಎಂಜಿನಿಯರಿಂಗ್ ಓದುತ್ತಿರುವಾಗ ರೋಬೋಟಿಕ್ಸ್‌ನಲ್ಲಿ ಮೂರು ರಾಷ್ಟ್ರಮಟ್ಟದ ಮತ್ತು ನಾಲ್ಕು ರಾಜ್ಯಮಟ್ಟದ ಪದಕಗಳನ್ನು ಪಡೆದರು.

Also read: 30 ವರ್ಷದಿಂದ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದ ಹುತಾತ್ಮ ಯೋಧನ ಪತ್ನಿಗೆ ಸ್ವಾತಂತ್ರ್ಯ ದಿನಾಚರಣೆಗೆ ಸಿಕ್ತು ಊರಿನವರಿಂದ ಸರ್ಪ್ರೈಸ್ ಗಿಫ್ಟ್!

ಪದವಿ ಪಡೆದ ನಂತರ, ಅವರನ್ನು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸೀಚ್ (ಟಿಐಎಫ್ಆರ್) 2016 ರಲ್ಲಿ ನೇಮಕ ಮಾಡಿಕೊಂಡು ತಿಂಗಳಿಗೆ 30,000 ರೂ. ಸಂಬಳವನ್ನು ನೀಡಿತು, ಇದರಿಂದ ಮನೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಲು ಸಾಧ್ಯವಾಯಿತು. ಈ ನಡುವೆ ಹೇಗಾದರೂ ಮಾಡಿ ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲೇ ಬೇಕು ಎಂದು ಸವಾಲು ಸ್ವೀಕರಿಸಿದ ಜಯಕುಮಾರ್ ಅರ್ಜಿ ಸಲ್ಲಿಸಲು ಮತ್ತು ವೀಸಾ ಪಡೆಯಲು ಸಾಕಷ್ಟು ಹಣ ಬೇಕಾಯಿತು ಇದಕ್ಕಾಗಿ ಜಯಕುಮಾರ್ ಅವರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಟೀಚಿಂಗ್ ಮಾಡಲು ಶುರುಮಾಡಿದರು, ಈಗ ಬಂದ ಹಣದಿಂದ ಓದಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪ್ರವೇಶ ಪಡೆದುಕೊಂಡರು.