ತಮ್ಮ ಮಗಳ ಮದುವೆಗೆ ಕನ್ಯಾದಾನ ಮಾಡುವು ದಕ್ಕೋಸ್ಕರವೇ ತಾವು ಮದುವೆ ಮಾಡಿಕೊಂಡ ಜೋಡಿ ನೋಡಿ, ಆಶ್ಚರ್ಯ ಪಡುತ್ತೀರಿ..

0
347

ದೇಶದಲ್ಲಿ ನಡೆಯುವ ಸಂಪ್ರದಾಯದ ಮದುವೆಯಲ್ಲಿ ವಿಚಿತ್ರವಾದ ಪದ್ದತಿಗಳು ಬೆಳಕಿಗೆ ಬರುತ್ತಿವೆ. ಮನೆಯಲ್ಲಿ ಗಂಡು ಮಗನಿಗೆ ಮದುವೆಯಾದರೆ ಮನೆಯ ಮಂದಿಗೆಲ್ಲ ಬೇಡಿ ಹಾಕುವ ಪದ್ದತಿಯೊಂದು ಬೆಳಕಿಗೆ ಬಂದು ಆಶ್ಚರ್ಯ ಮೂಡಿಸಿದರೆ. ಇನ್ನೊಂದು ಪ್ರದೇಶದಲ್ಲಿ ವರ ಸಿಂಗಾರಗೊಂಡು ಮನೆಯಲ್ಲಿದ್ದರೆ ವರನ ಸಹೋದರಿ ವಧುವಿಗೆ ತಾಳಿ ಕಟ್ಟಿ ಮನೆಗೆ ಕರೆದುಕೊಂಡು ಬರುವ ಪದ್ದತಿಗಳು ದೇಶದಲ್ಲಿ ವೈರಲ್ ಆಗಿದ್ದರೆ, ಮಧ್ಯ ಪ್ರದೇಶದಲ್ಲಿ ಅದೇ ಸಾಲಿನಲ್ಲಿ ಬರುವ ಇನ್ನೊಂದು ಮದುವೆ ನಡೆದಿದ್ದು ಇದು ಪದ್ಧತಿಯೋ ಅನಿವಾರ್ಯತೆಯೋ ತಿಳಿಯುತ್ತಿಲ್ಲ.

Representational Image

Also read: 75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

ಹೌದು ಹಿಂದೂ ಮದುವೆಯ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರೂ ಕನ್ಯಾದಾನ ಮಾಡುವುದು ಪದ್ದತಿಯಾದರೆ, ಇದು ಪುಣ್ಯದ ಕೆಲಸವೆಂದು ಹಲವರು ಹೇಳುತಾರೆ. ಅದರಂತೆ ಮದ್ಯಪ್ರದೇಶದಲ್ಲಿ ತಮ್ಮ ಮಗಳ ಮದುವೆ ಮಾಡುವ ಮುನ್ನ ತಂದೆ ತಾಯಿಗಳು ಮೊದಲು ಮದುವೆಯಾಗಿದ್ದಾರೆ. ಇದು ಅವರ ಮನೆತದಲ್ಲಿರುವ ಸಂಪ್ರದಾಯ ವೆಂದು ಅನಿಸಿದರು. ಇದರಲ್ಲಿರುವ ಉದ್ದೇಶವೇ ಬೇರೆಯಾಗಿತ್ತು ಎನ್ನುವುದು ಸತ್ಯವಾಗಿದೆ.

ಏನಿದು ತಂದೆ-ತಾಯಿಗಳ ಮದುವೆ?

ನೋಡಿದರೆ ಇದು ಸಂಪ್ರದಾಯ ಅಂತ ಪಕ್ಕಾ ಅನಿಸುತ್ತೆ, ಆದರೆ ಸಂಪೂರ್ಣವಾಗಿ ನೋಡಿದರೆ ಇದ್ಯಾವ ಪದ್ಧತಿ ಎಂದು ಅಚ್ಚರಿ ಅನಿಸಬಹುದು. ಆದರೆ ವಾಸ್ತವವಾಗಿ ಇದು ಪದ್ಧತಿ ಅಥವಾ ಸಂಪ್ರದಾಯವಲ್ಲ, ಬದಲಿಗೆ 25 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಜೋಡಿ ಮಗಳ ಕನ್ಯಾದಾನ ಮಾಡಲು ಮದುವೆಯಾಗಿದ್ದಾರೆ. ಇಂತಹ ಅಪರೂಪದ ಮದುವೆ ಮಾಡಿಕೊಂಡ ಜೋಡಿಗಳು ಎಂದರೆ. ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿ 55 ವರ್ಷದ ಪರಿಮಲ್ ಸಿಂಗ್ ಅವರು ಲಿವ್ ಇನ್ ನಲ್ಲಿದ್ದ 50 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಪರಿಮಲ್ ಜೋಡಿಗೆ ನಾಲ್ಕು ಮಕ್ಕಳಿದ್ದಾರೆ. ಇಷ್ಟು ವರ್ಷ ಲಿವ್ ಇನ್‍ನಲ್ಲಿದ್ದ ಜೋಡಿ ತಮ್ಮ ಮೊದಲ ಮಗಳ ಮದುವೆ ಮಾಡಿಸಲು ಮುಂದಾದಾಗ ತಂದೆ-ತಾಯಿ ಮದುವೆ ಆಗದೆ ಕನ್ಯಾದಾನ ಮಾಡಲು ಸಾಧ್ಯವಿಲ್ಲ ಎಂದು ಪಂಡಿತರು ಹೇಳಿದ್ದಾರೆ.

Also read: ರಾಜ್ಯದಲ್ಲೇ ಇರುವ ವಿಚಿತ್ರ ಸಂಪ್ರದಾಯ; ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಇಡಿ ಕುಟುಂಬದವರಿಗೆ ಬಿಳ್ಳುತ್ತೆ ಬೇಡಿ..

ಹೀಗಾಗಿ ತಮ್ಮ ಮಗಳ ಕನ್ಯಾದಾನ ಬೇರೆಯವರ ಕೈಯಿಂದ ಆಗಬಾರದು ಎಂದು ಪರಿಮಲ್ ಜೋಡಿ ಮಗಳ ಮದುವೆ ಮಾಡುವ ಹಿಂದಿನ ದಿನ ತಾವೂ ಅಧಿಕೃತವಾಗಿ ಮದುವೆಯಾಗಿದ್ದಾರೆ. ಬಳಿಕ ಮಾರನೆ ದಿನ ಮಗಳ ಕನ್ಯಾದಾನ ಮಾಡಿದ್ದಾರೆ. ಮಕ್ಕಳೇ ಮುಂದೆ ನಿಂತು ತಂದೆ-ತಾಯಿ ಮದುವೆ ಮಾಡಿಸಿದ್ದು ಈ ಮದುವೆಯ ವಿಶೇಷವಾಗಿತ್ತು. ದಿಬ್ಬಣದಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಂಡು ತಂದೆ-ತಾಯಿ ಮದುವೆಯನ್ನು ಮಾಡಿಸಿ, ಮರುದಿನ ಸಹೋದರಿಯ ಮದುವೆ ಸರಳವಾಗಿ, ಸಂಭ್ರಮದಿಂದ ಮಾಡಿಸಿದ್ದಾರೆ.
ಇಂತಹ ಮದುವೆಯಾಗಿದ್ದು ದೇಶದಲ್ಲಿ ಮೊದಲನೇ ಸಲ ಎನ್ನುವ ವಿಚಾರ ತಿಳಿದು ಬಂದಿದೆ. ಬರಿ ಮದುವೆಯೇ ಗಂಡ ಹೆಂಡತಿಯ ಸಂಬಂಧವನ್ನು ಗಟ್ಟಿ ಗೊಳಿಸುತ್ತೆ ಎನ್ನುವುದನ್ನು ಸುಳ್ಳು ಮಾಡಲು ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಜೋಡಿಗಳು ಮಗಳ ಮದುವೆಯಲ್ಲಿ ಆದರು ಮದುವೆಯಾಗಿ ಭಾರತೀಯ ಸಂಪ್ರದಾಯದ ಮದುವೆ ಎನ್ನುವ ಪದ್ದತಿಯನ್ನು ಕೊನೆಯಲ್ಲಿ ಆದರು ಅನುಸರಿಸಿದ್ದಾರೆ.

ಮಾಹಿತಿ ಕೃಪೆ: Public tv