251 ರೂ.ಸ್ಮಾರ್ಟ್ ಫೋನ್ ಸಂಸ್ಥೆಯ ಮುಖ್ಯಸ್ಥ ಮೋಹಿತ್ ಗೋಯೆಲ್ ಜೈಲುಪಾಲು

0
604

ನವದೆಹಲಿ: ದೇಶಾದ್ಯಂತ ದೊಡ್ಡ ಸುದ್ದಿ ಮಾಡಿದ್ದ 251 ರೂ.ಗೆ ಫ್ರೀಡಂ ಸ್ಮಾರ್ಟ್ ಫೋನ್ ಹೊಸ ಸಂಚಲನ ಮೂಡಿಸಿತ್ತು. ಈ ಫ್ರೀಡಂ ಫೋನ್ ಬರುವ ನಿರಿಕ್ಷೆಯಲ್ಲಿ ಯಲ್ಲಾರು ಕಾತುರದಿಂದ ಕಾದಿದ್ದರು, ಆದರೆ ಈ ಫೋನ್ ತಯಾರಿಕೆಯಲ್ಲಿ ತಡವಾದೆ ಎಂದು ರಿಂಗಿಂಗ್ ಬೆಲ್ಸ್ ಕಂಪನಿಯವರು ತಿಳಿಸಿದ್ದರು. ಆದರೆ ಈಗ ರಿಂಗಿಂಗ್ ಬೆಲ್ಸ್ ಸಂಸ್ಥೆಯ ಮುಖ್ಯಸ್ಥ ಮೋಹಿತ್ ಗೋಯಲ್ ಜೈಲುಪಾಲಗಿದ್ದಾರೆ.

ವಂಚನೆಯ ಪ್ರಕರಣವೊಂದರಲ್ಲಿ ಘಾಜಿಯಬಾದ್ ನ ಪೊಲೀಸರು ಮೋಹಿತ್ ರವರನ್ನು ಬಂಧಿಸಿದ್ದಾರೆ. ಘಾಜಿಯಾದ ಆಯಾಮ್ ಎಂಟರ್ ಪ್ರೈಸಸ್ ಎಂಬ ಸಂಸ್ಥ ನೀಡಿದ ದೂರಿನ ಆಧಾರದ ಮೇಲೆ ಮೋಹಿತ್ ಗೋಯಲ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆಯಾಮ ಎಂಟರ್ ಪ್ರೈಸಸ್ ನೀಡಿರುವ ದೂರಿನ ಪ್ರಕಾರ ರಿಂಗಿಂಗ್ ಬೆಲ್ಸ್ ಸಂಸ್ಥೆಯು 16 ಲಕ್ಷ ವಂಚನೆ ಮಾಡಿದೆ. ರಿಂಗಿಂಗ್ ಬೆಲ್ಸ್ ಕಂಪನಿಯು ಫ್ರೀಡಂ 251 ಸ್ಮಾರ್ಟ್ ಫೋನ್ ಸೇರಿಸಿದಂತೆ ತನ್ನ ಉತ್ಪನ್ನಗಳ ಮಾರಾಟಕ್ಕೆ ವಿತಕರಾಗುವಂತೆ ಆಯಾಮ್ ಎಂಟರ್ ಪ್ರೈಸಸ್ ಸಂಸ್ಥೆ ಹೇಲಿಕೊಂಡಿದೆ.

ಇದಕ್ಕೆ ಒಪ್ಪಿದ ಬಳಿಕ ಆಯಾಮ್ ಎಂಟರ್ ಪ್ರೈಸಸ್ ಸಂಸ್ಥೆಯು 30 ಲಕ್ಷ ರೂ. ಗಳನ್ನು ಆನ್ ಲೈನ್ ಮೂಲಕ ರಿಂಗಿಂಗ್ ಬೆಲ್ಸ್ ಕಂಪನಿ ಪಾವತಿ ಮಾಡಿದೆ. ಆದರೆ 13 ಲಕ್ಷ ಮೌಲ್ಯದಷ್ಟು ಉತ್ಪನ್ನಗಳು ಬರುತ್ತವೆ. ಉಳಿದ 16 ಲಕ್ಷ ರೂ ಮೌಲ್ಯದ ಉತ್ಪನ್ನಗಳು ಬರುವುದೇ ಇಲ್ಲ. ಆಯಾಮ್ ಎಂಟರ್ ಪ್ರೈಸಸ್ ನ ಮಾಲೀಕರು ಈ ಬಗ್ಗೆ ವಿಚಾರಿಸಿದರೆ ಪರಿಸ್ಥಿತಿ ಸರಿ ಇರುವುದಲಿಲ್ಲ ಎಂದು ಬೆದರಿಕೆ ಹಾಕುತ್ತದೆ ಎಂದು ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ.

ರಿಂಗಿಂಗ್ ಬೆಲ್ಸ್ ಕಂಪನಿಯ ಪ್ರಕಾರ: “ಆಯಾಮ್ ಎಂಟರ್”ಪ್ರೈಸಸ್ ಸೇರಿದಂತೆ ಹಲವು ಡಿಸ್ಟ್ರಿಬ್ಯೂಟರ್ ಗಳಿಗೆ ನೀಡಬೇಕಾದ ಹಣವನ್ನು ನಾವು ಬಾಕಿ ಉಳಿಸಿಕೊಂಡಿದ್ದೇವೆ. ಮಾರ್ಚ್ 31 ರೊಳಗೆ ಬಾಕಿ ತೀರಿಸುತ್ತೇವೆಂದು ಎಲ್ಲರಿಗೂ ವಾಗ್ದಾನ ನೀಡಲಾಗಿದೆ. ಆದರೆ, ಆಯಾಮ್ ಎಂಟರ್ ಪ್ರೈಸಸ್ ಸಂಸ್ಥೆಯಾಕೆ ದೂರು ನೀಡಿದೆ ಎಂಬುದು ಅರ್ಥ ಆಗುತ್ತಿಲ್ಲ” ಎಂದು ರಿಂಗಿಂಗ್ ಬೆಲ್ಸ್ ನಿರ್ದೇಶಕ ಮೋಹಿತ್ ಗೋಯೆಲ್ ಅವರ ಸೋದರ ಅನ್ಮೋಲ್ ಗೋಯಲ್ ಈ ರೀತಿ ಹೇಳಿದ್ದಾರೆ.