ಕುಡಿಯಲು ಹಣ ಕೊಡಲು ನಿರಾಕರಿಸಿದ ತಾಯಿಯನ್ನೇ ಕೊಂದು ಮೆದುಳಿನ ಫ್ರೈ ಮಾಡಿದ ಮಗ..

0
299

ಕುಡಿತದ ಚಟದಿಂದ ಜನರು ಎಂತಹ ಕೃತ್ಯವನ್ನು ಎಸಗುತ್ತಿದ್ದಾರೆ ಎಂದರೆ, ಕೇಳುಗರಿಗೆ ಜ್ವರ ಬರುವಂತಹ ನೀಚ ಕೆಲಸ ಮಾಡುತ್ತಿದ್ದು. ನಸೆಯಲ್ಲಿ ಹೆತ್ತವರು ಎನ್ನದೆ ತಂದೆ-ತಾಯಿಗಳನ್ನು ಕೊಲೆ ಮಾಡುತ್ತಿದ್ದಾರೆ. ಬರಿ ಮದ್ಯಕ್ಕೆ ಹಣ ನೀಡಿಲ್ಲ ಎನ್ನುವ ಒಂದೇ ಒಂದು ಕಾರಣದಿಂದ ಇವೆಲ್ಲ ನಡೆಯುತ್ತಿವೆ. ಇದರಿಂದ ಸಮಾಜದಲ್ಲಿ ಹೇಗೆ ಬಾಳುವುದು ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಇಲ್ಲೊಬ್ಬ ಪಾಪಿ ತನ್ನ ತಾಯಿಯನ್ನೇ ಕೊಂದು ಅವಳ ಮೆದಳನ್ನು ಹೊರ ತೆಗೆದು ಫ್ರೈ ಮಾಡಿ ತಿನ್ನಲು ಹೋಗಿದ್ದಾನೆ.

Also read: ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..

ಹೌದು ಕುಡಿಯುವುದಕ್ಕೆ ಹಣ ನೀಡಲಿಲ್ಲ ಎಂದು ಪಾಪಿ ತಾಯಿಯನ್ನು ಕೊಲೆ ಮಾಡಿ ಆಕೆಯ ಮೆದುಳನ್ನು ಫ್ರೈ ಮಾಡಿದ ಘನಘೋರ ಘಟನೆ ಛತ್ತೀಸ್‍ಗಢದ ಖಾರ್ಸಿ ಜಿಲ್ಲೆಯಲ್ಲಿ ನಡೆದಿದೆ. ಸೀತಾರಾಮ್ ಒರಾನ್ ತಾಯಿಯನ್ನು ಕೊಂದ ಮಗ. ಸೀತಾರಾಮ್ ತನ್ನ ತಾಯಿ ಫುಲೋಬಾಯಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ಕುಡಿತದ ಚಟಕ್ಕೆ ಬಲಿಯಾಗಿದ್ದನು. ಸೀತಾರಾಮ್ ಮದ್ಯ ಸೇವಿಸಲು ತನ್ನ ತಾಯಿಯ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ಕೊಡಲು ನಿರಾಕರಿಸಿದ್ದರು. ತಾಯಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಸೀತಾರಾಮ್ ಹರಿತವಾದ ವಸ್ತುವಿನಿಂದ ತನ್ನ ತಾಯಿಗೆ ಹೊಡೆದಿದ್ದಾನೆ. ನಂತರ ಆಕೆಯ ತಲೆ ಬುರುಡೆಯನ್ನು ತೆರೆದು ಮೆದುಳನ್ನು ಫ್ರೈ ಮಾಡಲು ಹಾಕಿದ್ದಾನೆ.

ಈ ವೇಳೆ ಸೀತಾರಾಮ್ ಆ ಮೆದುಳನ್ನು ತಿನ್ನುವ ಮೊದಲು ಅವರ ಕಿರಿಯ ಸಹೋದರನ ಪತ್ನಿ ಸ್ಥಳಕ್ಕೆ ಬಂದಿದ್ದಾರೆ. ಸಹೋದರನ ಪತ್ನಿಯನ್ನು ನೋಡುತ್ತಿದ್ದಂತೆ ಸೀತಾರಾಮ್
ಸ್ಥಳದಿಂದ ಪರಾರಿ ಆಗಿದ್ದಾನೆ. ಸೀತಾರಾಮ್ ಕೃತ್ಯ ನೋಡಿದ ಮಹಿಳೆ ತನ್ನ ಪತಿಗೆ ಅತ್ತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಪಾಪಿ ಹಲವು ದಿನಗಳಿಂದ ಮನೆಯಲ್ಲಿ ಕುಡಿತದ ವಿಷಯವಾಗಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ಕಿರಿಯ ಸಹೋದರನ ಹಲವು ಬಾರಿ ಬುದ್ದಿ ಹೇಳಿದ್ದಾರೆ. ಆದರೆ ಈ ವಿಷಯಕ್ಕಾಗಿ ಸೀತಾರಾಮ್ ತನ್ನ ಸಹೋದರನ ಬಳಿ ಜಗಳವಾಡುತ್ತಿದ್ದನು. ಇವನು ಮನೆಯಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದವರ ಜೊತೆಗೂ ಹಲವು ಬಾರಿ ಜಗಳ ಮಾಡಿತ್ತಿದ್ದ ಎನ್ನಲಾಗಿದೆ.

Also read: ದೇವರ ಹರಕೆಗೆ ಮಾನವರ ಬಲಿ; ಸ್ವಂತ ಮಕ್ಕಳನ್ನೇ ವಿಚಿತ್ರವಾಗಿ ಬಲಿ ಪದ್ಧತಿ, ಒಂದೇ ಸ್ಥಳದಲ್ಲಿ ಪತ್ತೆಯಾದವು 227 ಮಕ್ಕಳ ಅಸ್ಥಿಪಂಜರ.!

ಇದೇ ರೀತಿ ಜಗಳ ನೋಡಿ ನೋಡಿ ಕಿರಿಯ ಸಹೋದರ ಆ ಮನೆಯಿಂದ ಹೊರಗೆ ಬಂದು ಬೇರೆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತನ್ನ ತಾಯಿಯನ್ನು ಸೀತಾರಾಮ್ ಜೊತೆಯಲ್ಲಿ ಬಿಟ್ಟು ಹೋಗಿದ್ದರು. ಒಂದು ವೇಳೆ ಆ ಸಮಯದಲ್ಲಿ ಮಹಿಳೆ ನೋಡದೆ ಇದ್ದರೆ ತಾಯಿಯ ಮೆದಳನ್ನು ತಿಂದೆ ಬಿಡುತ್ತಿದ್ದ ಎಂದು ಸ್ಥಳಿಯರು ಹೇಳಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಹುಡುಕಿ ಬಂದಿಸಿದ್ದು. ಈ ವೇಳೆ ಸೀತಾರಾಮ್ ರಕ್ತ ಆಗಿರುವ ಬಟ್ಟೆಯಲ್ಲೇ ಯಾವುದೋ ಪ್ರದೇಶದಲ್ಲಿ ಅಡಗಿಕೊಂಡಿದ್ದನು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ನೀಡಿದ ಮಾಹಿತಿಯಂತೆ ಪೊಲೀಸರು ಸೀತಾರಾಮ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.