2020 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ; ಎಂದಿನಿಂದ ಪರೀಕ್ಷೆ ಇಲ್ಲಿದೆ ನೋಡಿ.!

0
544

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು 2020ರ ಮಾರ್ಚ್ 4 ರಿಂದಮಾರ್ಚ್ 19 ರ ವರೆಗೆ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಸಂಬಂಧ ಆಕ್ಷೇಪಗಳಿದ್ದಲ್ಲಿ ನವೆಂಬರ್ 28ರೊಳಗೆ ಜಂಟಿ ನಿರ್ದೇಶಕರು (ಪರೀಕ್ಷೆ), ಪದವಿಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು-12 ಇಲ್ಲಿಗೆ ಸಲ್ಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಗದಿತ ದಿನಾಂಕದೊಳಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.

Also read: ಗಾಂಧೀಯವರ 150ನೇ ಜನ್ಮಶತಮಾನೋತ್ಸವದ ಸ್ಮರಣಾರ್ಥ ರೂ.150 ಹೊಸ ನಾಣ್ಯ ಬಿಡುಗಡೆ.!

ಸದ್ಯ ಬಂದ ವೇಳಾಪಟ್ಟಿಯಂತೆ ಮಾರ್ಚ್ 4 ರಿಂದಲೇ ಪರೀಕ್ಷೆ ನಡೆಯುವ ಬಗ್ಗೆ ತಿಳಿಸಿದ್ದು ಮಾರ್ಚ್ 19 ವರೆಗೂ ನಡೆಯಲಿದೆ. ಕರ್ನಾಟಕ ಪಿಯುಸಿ ಬೋರ್ಡ್‌ನಿಂದ ಅಧಿಕೃತವಾಗಿ ಪ್ರಕಟವಾದ ವೇಳಾಪಟ್ಟಿ ಹೀಗಿದೆ.

ಪಿಯುಸಿ ತಾತ್ಕಾಲಿಕಾ ವೇಳಾಪಟ್ಟಿ ವಿವರ ಹೀಗಿದೆ:

ಮಾರ್ಚ್ 4 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ

ಮಾರ್ಚ್ 5 – ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

ಮಾರ್ಚ್ 6 – ಉರ್ದು, ಸಂಸ್ಕೃತ

ಮಾರ್ಚ್ 7 – ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ

ಮಾರ್ಚ್ 9 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ

ಮಾರ್ಚ್ 10 – ಎನ್.ಎಸ್.ಕ್ಯೂ.ಎಫ್(NSQF)

ಮಾರ್ಚ್ 11 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾರ್ಚ್ 12 – ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಮಾರ್ಚ್ 13 – ಭೂಗೋಳಶಾಸ್ತ್ರ, ಕರ್ನಾಟಿಕ್ ಸಂಗೀತ, ಹಿಂದೂಸ್ಥಾನಿ ಸಂಗೀತ

ಮಾರ್ಚ್ 14 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ

ಮಾರ್ಚ್ 16 – ಅರ್ಥಶಾಸ್ತ್ರ, ಜೀವಶಾಸ್ತ್ರ

ಮಾರ್ಚ್ 17 – ಹಿಂದಿ

ಮಾರ್ಚ್ 18 – ಕನ್ನಡ

ಮಾರ್ಚ್ 19 – ಇಂಗ್ಲಿಷ್